ಕಟ್ಟಿದ ಮನೆ ಕೆಡವಲು
ಆದೇಶ
ತೆರವಿಗೆ ಕಾಂಗ್ರೆಸ್
ನಾಯಕರ ಕುಮ್ಮಕ್ಕು
ತೀರ್ಥಹಳ್ಳಿ ತಹಶೀಲ್ದಾರ್
ಬಡವರು ಮತ್ತು ರೈತ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಗುವಳಿ ಜಮೀನು, ವಾಸದ ಮನೆ ತೆರವು
ಮಾಡುವಂತೆ ಆದೇಶ ಹೊರಡಿಸುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ನಾಯಕರುಗಳು ಕುಮ್ಮಕ್ಕು ನೀಡುತ್ತಿದ್ದಾರೆ.
ಇದನ್ನು ಸಹಿಸಲಾಗದು ಎಂದು ಶುಕ್ರವಾರ ಬಿಜೆಪಿ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಕಚೇರಿಗೆ ದಿಢೀರ್
ಮುತ್ತಿಗೆ ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿಯಲ್ಲಿ
ಬ್ರೋಕರ್ ಹಾವಳಿ ಹೆಚ್ಚಾಗಿದೆ. ಕಚೇರಿ ದಾಖಲೆಗಳನ್ನು ಕಳವು ಮಾಡುತ್ತಿದ್ದಾರೆ. ಇದರ ಕುರಿತು ಎಚ್ಚರಿಕೆ
ನೀಡಿದ್ದರು ಉಪಯೋಗವಾಗಿಲ್ಲ. ಹನಸ ಗ್ರಾಮದಲ್ಲಿ ಕೇವಲ 11 ಗುಂಟೆ ಜಾಗದಲ್ಲಿ ಕಟ್ಟಿದ ಮನೆಯನ್ನು ತೆರವಿಗೆ
ಆದೇಶ ಮಾಡಲಾಗಿದೆ. ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳದೆ ತಹಶೀಲ್ದಾರ್ ತಮ್ಮ ಜವಾಬ್ದಾರಿಯನ್ನು ಸರಿಯಾಗಿ
ನಿರ್ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಕೋಣಂದೂರು ಸಮೀಪದ
ಹುಲ್ಕೋಡು ಗ್ರಾಮದಲ್ಲಿ ಬಡ ಕುಟುಂಬಕ್ಕೆ ಬಗರ್‌ಹುಕುಂ ಸಾಗುವಳಿ ಸಕ್ರಮ ಯೋಜನೆಯಡಿ ಜಮೀನು ಮಂಜೂರು
ಮಾಡಲಾಗಿದೆ. ಆ ಸ್ಥಳಕ್ಕೆ ತಹಸೀಲ್ದಾರ್ ತೆರಳಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಹೀಗಾದಲ್ಲಿ
ಪ್ರತಿ ದಿನ ತಾಲೂಕು ಕಚೇರಿಗೆ ಬಿಜೆಪಿ ಮುತ್ತಿಗೆ ಹಾಕುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶಾಸಕರ ಆರಗ ಜ್ಞಾನೇಂದ್ರರ
ಆರೋಪಗಳಿಗೆ ಉತ್ತರಿಸಿದ ತಹಶೀಲ್ದಾರ್ ರಂಜಿತ್, ನಾನು ಕಾನೂನು ಪ್ರಕಾರವೇ ಕೆಲಸ ಮಾಡಬೇಕಿದೆ. ಕೇಳಿದ
ಪ್ರಶ್ನೆಗೆ ಕಾನೂನು ಪ್ರಕಾರವೇ ಉತ್ತರಿಸುತ್ತಿದ್ದೇನೆ. ಜಂಬುವಳ್ಳಿ ಗ್ರಾಮದಲ್ಲಿ ಯಾರಿಗೂ ಜಾಗ ಒತ್ತುವರಿಗೆ
ಅವಕಾಶ ನೀಡಿಲ್ಲ. ಮೇಳಿಗೆ ಗ್ರಾಮದಲ್ಲಿ ಹೂವಪ್ಪ ನಾಯಕ್ ಅವರು ಸುಮಾರು 2ವರೆ ಎಕರೆ ಜಾಗ ಒತ್ತುವರಿ
ಹೊಂದಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ ಎಂದಿದ್ದಾರೆ.
ಸ್ಥಳದಲ್ಲಿ ಎರಡು
ಗಂಟೆಗೂ ಹೆಚ್ಚಿನ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
