ಮಾಂಡವಿ ಹೋಟೆಲ್‌ ಮಾಲೀಕ ಸುಬ್ಬಣ್ಣ ನಿಧನ

ಮಂಡಗದ್ದೆಯ ಮೀನು ಹೋಟೆಲ್‌ ಉದ್ಯಮದ ರೂವಾರಿ

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆಯ ಮಾಂಡವಿ ಹೋಟೆಲ್‌ ಮಾಲೀಕ ಸುಬ್ಬಣ್ಣ (75) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಮಂಡಗದ್ದೆ ಇಂದು ರಾಜ್ಯದಾದ್ಯಂತ ರುಚಿಕರ ಮೀನು ಊಟಕ್ಕೆ ಫೇಮಸ್‌ ಆಗಿದೆ. ಅಲ್ಲದೇ ಈ ಭಾಗದಲ್ಲಿ ಇಂದಿಗೂ ಹತ್ತಾರು ಮೀನಿನ ಹೋಟೆಲ್‌ ಉದ್ಯಮಗಳು ನಡೆಯುತ್ತಿವೆ. ಶಿವಮೊಗ್ಗದಿಂದ ಹಿಡಿದು ರಾಜ್ಯದ ಚಲಚಿತ್ರ ನಟರು, ರಾಜಕಾರಣಿಗಳು ತರಹೇವಾರಿ ಮೀನಿನ ಔತಣಕ್ಕಾಗಿ ಗುಟ್ಟಾಗಿ ಬಂದು ಹೋಗುವ ಸನ್ನಿವೇಶಗಳು ಅನೇಕ ಬಾರಿ ನಡೆಯುತ್ತಿರುತ್ತದೆ. ತುಂಗಾ ಡ್ಯಾಂ ಆದ ಬಳಿಕ ಇಲ್ಲಿ ಸಿಗುವ ಮೀನುಗಳಿಗೆ ವಿಶೇಷವಾದ ಬೇಡಿಕೆ ಇದೆ ಎಂದರೆ ತಪ್ಪಾಗಲಾದರು.

80ರ ದಶಕದಲ್ಲಿ ಮೊದಲ ಬಾರಿಗೆ ಮೀನಿನ ಹೋಟೆಲ್‌ ಆರಂಭಿಸಿ ಇಲ್ಲೊಂದು ಮೀನಿನ ಹೋಟೆಲ್‌ ಉದ್ಯಮ ನಡೆಸಬಹುದೆಂಬ ಕನಸು ಕಟ್ಟಿದ್ದ ಸುಬ್ಬಣ್ಣ ಆರಂಭಿಕವಾಗಿ ಮಂಡಗದ್ದೆ ರೈಸ್‌ಮಿಲ್‌ ಪಕ್ಕದಲ್ಲಿ ಹೋಟೆಲ್‌ ಆರಂಭಿಸಿದ್ದರು. ತುಂಗಾ ಮೇಲ್ದಂಡೆ ಯೋಜನೆ ಬಳಿಕ 17ನೇ ಮೈಲಿಕಲ್ಲಿಗೆ ತಮ್ಮ ಹೋಟೆಲ್‌ ಉದ್ಯಮವನ್ನು ಸ್ಥಳಾಂತರಿಸಿದ್ದರು. ನಂತರ ಆಗಿರುವುದು ಪೂರ್ಣ ಪ್ರಮಾಣದ ಇತಿಹಾಸವೆಂದರೆ ತಪ್ಪಾಗಲಾರದು.

ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post