ಕಾಂತಾರ ನಟಿ ರುಕ್ಮಿಣಿ ವಸಂತ್‌ ಡೀಫ್‌ ಫೇಕ್‌ ವೀಡಿಯೋ ಪ್ರಕರಣ

ಮೂವರ ಬಂಧನ : ಓರ್ವ ತೀರ್ಥಹಳ್ಳಿಯವ !

ಹೆಸರಾಂತ ನಟಿಯರ ಡೀಪ್‌ ಫೇಕ್‌ ಅಶ್ಲೀಲ ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿ ಕಾಸು ಮಾಡಿಕೊಳ್ಳುವ ಅಡ್ಡದಾರಿ ಹಿಡಿದಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಯಶಸ್ವಿಯಾಗಿ ಬೇಧಿಸಿ ಹೆಡೆಮುರಿ ಕಟ್ಟಿದ್ದಾರೆ. ಕೆಲದಿನಗಳ ಹಿಂದೆ ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಚಾಪ್ಟರ್‌ 2 ನಾಯಕಿಯಾಗಿ ನಟಿಸಿದ್ದ ರುಕ್ಮಿಣಿ ವಸಂತ ಅವರ ಡೀಪ್‌ ಫೇಕ್‌ ಅಶ್ಲೀಲ ವಿಡಿಯೋ ವೈರಲ್‌ ಆಗಿ ಮುಜುಗರ ತರಿಸಿತಲ್ಲದೆ ಈ ಸಂಬಂಧ ಅವರು ದೂರು ದಾಖಲಿಸಿದ್ದರು.

ಇದರ ಬೆನ್ನು ಹತ್ತಿದ ಬೆಂಗಳೂರು ಸೈಬರ್‌ ಕ್ರೈಂ ಪೊಲೀಸರು ಪ್ರಕರಣದ ಜಾಡು ಹಿಡಿದು ಎಐ ತಂತ್ರಜ್ಞಾನದ ಮೂಲಕ ಈ ದುಷ್ಕೃತ್ಯ ಎಸಗಿದ್ದ ಮೂವರು ಹೈಟೆಕ್‌ ಪದವೀದರರನ್ನು ಅಂತಿಮವಾಗಿ ಕಂಡುಹಿಡಿದು ಪೊಲೀಸರು ಸರಿಯಾಗಿ ತನಿಖೆ ಹಿಡಿದರೆ ಯಾವುದೇ ಅಸಾಧ್ಯವಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಸಿಕ್ಕಿ ಬಿದ್ದವರು ಯಾರೋ ನಿರುದ್ಯೋಗಿಗಳಲ್ಲ. ಬದಲಾಗಿ ಹೈಟೆಕ್‌ ಪದವೀದರರು ಇವರಲ್ಲಿ ​ರಂಜಿತ್ (25) - ಸಾಫ್ಟ್‌ವೇರ್ ಇಂಜಿನಿಯರ್ ಬೆಂಗಳೂರಿನ ನಾಗಸಂದ್ರ ಮಂಜುನಾಥನಗರದ ನಿವಾಸಿಯಾದ ಈತ ಬಿ.ಇ ಪದವೀಧರ. ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ವರ್ಷಕ್ಕೆ 20 ಲಕ್ಷದ ಭಾರಿ ಪ್ಯಾಕೇಜ್ ಹೊಂದಿದ್ದವನು. ಪ್ರಕರಣದ ಇಂಜಿನಿಯರ್‌ ಕೂಡ ಈತನೇ! ಎನ್ನಲಾಗಿದೆ.

ಮತ್ತೊಬ್ಬ ​ಚಂದ್ರಕಾಂತ್ (33) ಚಾರ್ಟೆಡ್‌ ಅಕೌಂಟೆಂಟ್ ಸಂಸ್ಥೆಯ ಉದ್ಯೋಗಿ ತೀರ್ಥಹಳ್ಳಿ ಮೂಲದವನು ಎನ್ನಲಾಗಿದೆ. ಮತ್ತೋರ್ವ ​ರವಿ ಕುಮಾರ್ (24) ಯೂಟ್ಯೂಬರ್ ಹಾಗೂ ಬಿಎಸ್ಸಿ ನರ್ಸಿಂಗ್ ಪದವೀಧರ ಬಾಗಲಕೋಟೆ ಜಿಲ್ಲೆಯ ಚಿಲಕಮುಖಿ ಗ್ರಾಮದವನು. ಇದನ್ನು ಹೆಚ್ಚು ವೈರಲ್‌ ಮಾಡಿ ಹಣಗಳಿಸುವ ದುರಾಸೆಗೆ ಇಳಿದಿದ್ದ ಎನ್ನಲಾಗಿದೆ.

​​ಕಳೆದ ತಿಂಗಳು ನಟಿ ರುಕ್ಮಿಣಿ ವಸಂತ ಅವರದ್ದೇ ಎನ್ನಲಾದ ಆಕ್ಷೇಪಾರ್ಹ ಬಿಕಿನಿ ವಿಡಿಯೋಗಳು ಹರಿದಾಡುತ್ತಿದ್ದಂತೆ ಗಾಬರಿಯಾದ ಆಕೆ ಇದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಐಡಿ ಹಾಗೂ ಸೈಬರ್ ಕಮಾಂಡ್ ಸೆಂಟರ್‌ನ ಪೊಲೀಸ್ ಮಹಾನಿರ್ದೇಶಕ ಡಾ.ಪ್ರಣಬ್ ಮೊಹಂತಿ ಅವರ ಮಾರ್ಗದರ್ಶನದಲ್ಲಿ, ಡಿಐಜಿಪಿ ಆನಂದ್ ಕುಮಾರ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 3 ಅತ್ಯಾಧುನಿಕ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post