ಕೆಎಫ್ ಡಿ ತೀರ್ಥಹಳ್ಳಿಯಲ್ಲಿ ವರ್ಷದ ಮೊದಲ ಬಲಿ

ಔಷಧಿ ಕಂಡು ಹಿಡಿಯುವಲ್ಲಿ ಸರ್ಕಾರವೇ ಫೇಲ್
ತೀರ್ಥಹಳ್ಳಿ ಹೊನ್ನೇಕೇರಿ ಗ್ರಾಮದ ಸಸಿತೋಟ ಗ್ರಾಮದ ಕೃಷಿ ಕಾರ್ಮಿಕ ಕಿಶೋರ್ (29) ಮಂಗನ ಕಾಯಿಲೆಗೆ ಬುಧವಾರ ಮುಂಜಾನೆ ಬಲಿಯಾಗಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು‌.
ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ತೀವ್ರ ಸ್ವರೂಪದಲ್ಲಿ ಭಾಧಿಸುತ್ತಿದ್ದರು ಹಲವಯ ವರ್ಷದಿಂದ ಔಷಧಿ ಕಂಡು ಹಿಡಿಯುವಲ್ಲಿ ಸರ್ಕಾರಗಳು ವಿಫಲವಾಗುತ್ತಿದೆ. ಬೇಸಿಗೆಯಲ್ಲಿ ಮಾತ್ರ ರೋಗಬಾಧೆ ಹೆಚ್ಚಳವಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ಸರ್ಕಾರಗಳು ಮಂಗನಕಾಯಿಲೆ ವಿಷಯದಲ್ಲಿ ನಿರಾಳತೆ ವಹಿಸುತ್ತಿದೆ. ರೋಗ ಲಕ್ಷಣಗಳು ರೂಪಾಂತರ ಆಗುತ್ತಿದ್ದು ವೈದ್ಯಕೀಯ ವ್ಯವಸ್ಥೆಯೆ ಈ ಬಗ್ಗೆ ಔಷಧಿ ಕಂಡುಹಿಡಿಯದ ಸ್ಥಿತಿಯಲ್ಲಿದೆ. ಖಾಸಗಿ‌ ಕಂಪನಿಗಳಿಗೆ ಮಲೆನಾಡು ಭಾಗ ಅತ್ಯಂತ ಚಿಕ್ಕ ಪ್ರದೇಶವಾಗಿ ಕಾಣಿಸಿಕೊಳ್ಳುತ್ತದೆ. ಮಂಗನಕಾಯಿಲೆ ಸಾವು ಬೆರಳೆಣಿಕೆಯಾಗಿ ಗುರುತಿಸುತ್ತಾರೆ. ಈ ಬಗ್ಗೆ ಸಂಶೋಧನೆ ನಡೆಸಿದರೆ ಸಂಶೋಧನೆ ಹಿಂದೆ ಕೋಟ್ಯಾಂತರ ರೂಪಾಯಿ ಲಾಭ ಸಿಗಲಾರದು. ಸರ್ಕಾರ ಕೆಲವು ಕಣ್ಣಿಗೆ ಕಾಣಿಸುವ ಕ್ರಮಗಳನ್ನು ತೋರಿಸಿ ಜನರ ಬಾಯಿ ಮುಚ್ಚಿಸುತ್ತಾರೆ. ಆದರೆ ಮಲೆನಾಡು ಭಾಗದ ಜನರಿಗೆ ಮಾತ್ರ ತಮ್ಮವರ ಕಳೆದುಕೊಂಡ ನೋವು ಭಾಧಿಸುತ್ತಿರುವಂತೆ ಸರ್ಕಾರವೇ ವ್ಯವಸ್ಥೆ ಸೃಷ್ಟಿಸುತ್ತಿರುವುದು ವಿಷಾಧದ ಸಂಗತಿಯಂತಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post