ರೋಗಲಕ್ಷಣ ಕಂಡು
ಬಂದಲ್ಲಿ ವೈದ್ಯರನ್ನು ತಕ್ಷಣ ಸಂಪರ್ಕಿಸಿ
ನಿತ್ಯ ಕೆಎಫ್‌ಡಿ
ರೋಗಿಗಳ ಸಂಖ್ಯೆ ಹೆಚ್ಚಳ - ಡಾ.ಪ್ರವೀಣ್
ಕೇಶವದಂತ ಚಿಕಿತ್ಸಾಲಯ ಹೊಸನಗರ
ಮೊನ್ನೆಮೊನ್ನೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ನೇಹಿತರೊಬ್ಬರ ಪತ್ನಿ ಗಂಭೀರವಾಗಿ ಮಂಗನ ಕಾಯಿಲೆಗೆ ತುತ್ತಾಗಿದ್ದರು. ಅವರನ್ನು ನೋಡಿಕೊಂಡು ಬರಲು ಹೋದಾಗ ಸುಮಾರು 50ಕ್ಕಿಂತ ಹೆಚ್ಚು ತೀರ್ಥಹಳ್ಳಿ ಮತ್ತು ಹೊಸನಗರ ಭಾಗದ ರೋಗಿಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದರು. ಅಲ್ಲಿ ಅವರೆಲ್ಲ ಅತ್ಯಂತ ಸುಸ್ತಾಗಿ ಮಲಗಿದ್ದರು.
ಕ್ಯಾಸನೂರು ಅರಣ್ಯ
ಕಾಯಿಲೆ (ಕೆಎಫ್‌ಡಿ) ಅಥವಾ ಮಂಗನ ಕಾಯಿಲೆ flavivirdae ವೈರಸ್ ನಿಂದ ಬರುವ endemic (ಸ್ಥಳೀಯವಾಗಿ
ಹರಡುವ ರೋಗ), ಈ ರೋಗ ನಂಜಿಗೆ ಒಳಗಾದ ಅಥವಾ ನಂಜಿಗೆ ಒಳಗಾಗಿ ಸಾವನ್ನಪ್ಪಿದ ಮಂಗ, ಹೆಗ್ಗಣ ಅಥವಾ ಹಕ್ಕಿಗಳ
ಮೇಲಿನ ಉಣ್ಣೆಗಳು (haemaphysalis springera) ಮನುಷ್ಯರಿಗೆ ಕಚ್ಚಿ ಈ ರೋಗ ಬರುತ್ತದೆ. ಇದು ಭಾರತದ
ಪಶ್ಚಿಮಘಟ್ಟ ಪ್ರದೇಶಗಳಾದಂತಹ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಭಾಗದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
ಈ ರೋಗದ ಪ್ರಾಥಮಿಕ
ರೋಗ ಲಕ್ಷಣಗಳು ಅತಿ ತೀವ್ರವಾದಂತ ಜ್ವರ ಜೊತೆಗೆ ಚಳಿ ಮುಂದಲೆಯ ಅತಿಯಾದ ನೋವು, ಅತಿಯಾದ ಮೈಕೈ ನೋವುಗಳು
ಹೊಂದಿರುತ್ತದೆ. ಎರಡನೇ ಹಂತದಲ್ಲಿ ಎಂಟರಿಂದ ಹನ್ನೆರಡು ದಿನಗಳಲ್ಲಿ meningocephilitis ಅಥವಾ ಮೆದುಳು
ಮತ್ತು ಬೆನ್ನು ಹುರಿಗಳ ಉರಿಯುತ, ತೀವ್ರ ತಲೆನೋವು, ಜ್ವರ, ಕುತ್ತಿಗೆ ಬಿಗಿತ, ವಾಂತಿ, ಚರ್ಮದ ದದ್ದು,
ಬೆಳಕಿನ ಸಂವೇದನೆ, ಗೊಂದಲ ಮತ್ತು ಪ್ರಜ್ಞಾ ಹೀನ ಸ್ಥಿತಿಗೆ ತಲುಪಿಸುತ್ತದೆ.
ರೋಗಲಕ್ಷಣಗಳು ಗುಣಮುಖವಾದ
ನಂತರ ಒಂದು ಅಥವಾ ಎರಡು ವಾರಗಳ ನಂತರದಲ್ಲಿ ರೋಗಲಕ್ಷಣಗಳು ಪುನಃ ಮರುಕಳಿಸುವ ಎಲ್ಲಾ ಲಕ್ಷಣಗಳು ಇರುತ್ತದೆ.
ಈ ಹಂತದಲ್ಲಿ ರೋಗಿಯು ತನ್ನ ಜೀವವನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಈ ಕಾಯಿಲೆಯು ಬೇಸಿಗೆಯಲ್ಲಿ
ಅಂದರೆ ಜನವರಿಯಿಂದ ಜೂನ್ ತಿಂಗಳಿನ ಅಂತ್ಯದವರೆಗೆ ಮಲೆನಾಡಿನ ಭಾಗದಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಪ್ರಾಥಮಿಕವಾಗಿ ರೋಗ
ಬಾರದಂತೆ ತಡೆಯಲು DEET ಅಥವಾ DMP ಎಣ್ಣೆಯನ್ನು ಹಚ್ಚಿಕೊಂಡು ತೋಟ ಮತ್ತು ಕಾಡಿನ ಭಾಗಗಳಿಗೆ ಹೋಗುವುದು
ಹಾಗೂ ಜಾನುವಾರುಗಳು ನಾಯಿಗಳಿಗೆ ಅದನ್ನು ಪ್ರತಿದಿನ ಹಚ್ಚುವುದು. ಆದಷ್ಟು ತೋಟಕ್ಕೆ ಮತ್ತು ಅರಣ್ಯ
ಭಾಗಗಳಿಗೆ ಹೋಗುವವರು ಮೈ ಮತ್ತೆ ಮುಖವನ್ನು ಮುಚ್ಚಿಕೊಳ್ಳುವಷ್ಟು ಬಟ್ಟೆ ಧರಿಸಬೇಕು. ತೋಟ ಮತ್ತು
ಅರಣ್ಯ ಭಾಗದಿಂದ ಬಂದ ನಂತರದಲ್ಲಿ ಬಿಸಿ ನೀರಿನಲ್ಲಿ ಸೋಪಿನಲ್ಲಿ ತೊಳೆದು ಸ್ನಾನ ಮಾಡಬೇಕು.
ರೋಗಕ್ಕೆ ಅನೇಕ ವರ್ಷಗಳಿಂದ
ಸಂಶೋಧನೆಯ ಮುಖಾಂತರ ರೋಗ ನಿರೋಧಕ ಔಷಧಿಗಳನ್ನು ಕಂಡುಹಿಡಿದಿದ್ದರೂ ಸಹ ಅದು ರೋಗ ಉಲ್ಬಣಿಸುವುದನ್ನು
ತಪ್ಪಿಸಲಾಗಲಿಲ್ಲ. ಆದ್ದರಿಂದ ಅದು ಕೇವಲ ಸಂಶೋಧನಾ ವ್ಯವಸ್ಥೆಯಲ್ಲಿಯೇ ಇದೆ ಹಾಗೂ ರೋಗಕ್ಕೆ ಯಾವುದೇ
ನಿರ್ದಿಷ್ಟವಾದ ಅಂತಹ ಔಷಧಿಗಳಿಲ್ಲ. ಇದು ಕೇವಲ ರೋಗದ ಚಿಹ್ನೆಯ ಮೇಲೆ ಚಿಕಿತ್ಸೆಯನ್ನು ಅವಲಂಬಿಸುತ್ತಿರುತ್ತದೆ.
ಹಾಗಾಗಿ ತಕ್ಷಣ ಮೇಲ್ಕಂಡ ಯಾವುದೇ ಚಿಹ್ನೆ ಹಾಗೂ ಚಹರೆ ಮಲೆನಾಡಿನ ಭಾಗದಲ್ಲಿ ಕಾಣಿಸಿಕೊಂಡಲ್ಲಿ ತಕ್ಷಣ
ವೈದ್ಯರನ್ನು ಸಂಪರ್ಕಿಸಿ ಕೆಎಫ್‌ಡಿ ವೈರಸ್‌ನ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು.
