ನೆಲದ ಧ್ವನಿ ಫಲಶೃತಿ, ಮಾಹಿತಿ ನೀಡಿದ ಸ್ಥಳೀಯರು
ತೀರ್ಥಹಳ್ಳಿಯ ಗುಡ್ಡೇಕೊಪ್ಪದ ತೋಟವೊಂದರಲ್ಲಿ ಕೆಲಸಕ್ಕೆ ಬಂದಿದ್ದ ಬಯಲುಸೀಮೆಯೆ ಕಾರ್ಮಿಕ ಕುಮಾರ (55) ಬುಧವಾರ ಸಂಜೆ ಮಂಡಗದ್ದೆಯಲ್ಲಿ ಪತ್ತೆಯಾಗಿದ್ದಾರೆ. ನಾಪತ್ತೆಯಾದ ಬಗ್ಗೆ ನೆಲದ ಧ್ವನಿ ಸುದ್ದಿ ಭಿತ್ತರಿಸಿತ್ತು. ಸುದ್ದಿ ನೋಡಿದ ಸ್ಥಳೀಯರೊಬ್ಬರು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಕಿವಿ ಕೇಳದ, ಮಾತು ಬಾರದ ಅವರು ಮಂಗಳವಾರ ಸಂಜೆಯಿಂದ ಕಾಣೆಯಾಗಿದ್ದರು. ಗುಡ್ಡೇಕೊಪ್ಪಕ್ಕೆ ವಾಪಾಸ್ಸು ದಾರಿ ಕಾಣದೆ ನಡೆದು ಹೋಗುವ ಪ್ರಯತ್ನ ನಡೆಸಿದ್ದರು. ಮಂಡಗದ್ದೆಯ ಸಮೀಪ ನಡೆದುಕೊಂಡು ಹೋಗುವಾಗ ಪತ್ತೆಯಾಗಿದ್ದಾರೆ.