15 ಲಕ್ಷ ಸದಸ್ಯರಿಗೆ 10 ಲಕ್ಷ ಸಂಧಾನಕಾರರಿಗೆ
ಹಂಚಲು ತಂತ್ರ ಮಾಡಲಾಗಿತ್ತು...
ಸಮಾಜವಾದಿ ಮನೆ ಮೋಸಗಾರರ ತಂತ್ರಕ್ಕೆ ಆಶ್ರಯ ನೀಡಿತು…
ಕಿಮ್ಮನೆ ಸ್ಪೋಟಿಸಿದ.. ಬಾಂಬ್...!!!
ತೀರ್ಥಹಳ್ಳಿ ಪಟ್ಟಣದ ಗಾಂಧಿ ಮಂದಿರ ಆದರ್ಶ ಆಗಬೇಕಿತ್ತೋ
ಶಾಂತವೇರಿ ಗೋಪಾಲ ಗೌಡರು ಪ್ರತಿಪಾದಿಸಿದ ಜಾತ್ಯತೀತ ಸಮಾಜವಾದಿ ಚಿಂತನೆ ಶಾಂತಿವನ ಆಗಬೇಕಿತ್ತೋ, ಅಂತ
ಮನೆ ರಾಜಕೀಯ ಕಳ್ಳಾಟಕ್ಕೆ ಹಣದ ಮದ್ಯಸ್ತಿಕೆ ವಹಿಸಿದ್ದು, ಕಾಂಗ್ರೆಸ್ನಿಂದ ಆಯ್ಕೆಗೊಂಡವರನ್ನು ಬಿಜೆಪಿಗೆ
ಸೇರಿಸಲು ಸಜ್ಜುಗೊಳಿಸಲಾದ ವೇದಿಕೆಗೆ ಆಶ್ರಯ ನೀಡಿ ಮೂರು ಗುಂಪುಗಳ, ಮೂರು ರಾಜಕೀಯ ಮೋಸಗಾರರ ಹಣದ
ಮಧ್ಯಸ್ತಿಕೆ ವಹಿಸಿದ್ದು ಕುಟುಂಬದ ಗೌರವ ಘನತೆಗೆ ಧಕ್ಕೆ ತಂದಿದೆ. ಸದರಿ ಮನೆಗೆ ಇದರಿಂದ ಯಾವುದೇ
ರೀತಿಯ ರಾಜಕೀಯ, ಆರ್ಥಿಕವಾಗಿ ಪೈಸೆ ಲಾಭ ಇಲ್ಲದಿದ್ದರು ಗೊತ್ತು ಗುರಿ ಇಲ್ಲದೆ, ಯಾವ ಸಿದ್ಧಾಂತವೂ
ಇರದೆ ಓಡಾಡುವ ರಾಜಕೀಯ ಅಡ್ನಾಡಿಗಳಿಗೆ ನೇತೃತ್ವ ವಹಿಸಿದ್ದು ಬೇಸರ ತಂದಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ
ಗೌರವಾನ್ವಿತ ಇಬ್ಬರು ಪಟ್ಟಣ ಪಂಚಾಯತ್ ಸದಸ್ಯರನ್ನು ಶಿವಮೊಗ್ಗ ಹಸುಡಿಯಲ್ಲಿ ರೂಮ್ ಒಂದರಲ್ಲಿ ಕೂಡಿ
ಹಾಕಿ ಬೀಗ ಹಾಕಿದ್ದು ತೀರ್ಥಹಳ್ಳಿ ಬಿನ್ ಲಾಡೆನ್.
ಪ್ರಪಂಚಕ್ಕೆ ವಿವೇಕ ಹೇಳುವ ದೀರ್ಘ ಲೇಖನ ಬರೆಯುವ
ಮಾಧ್ಯಮ ಮಿತ್ರರಿಬ್ಬರು ಎರಡೂ ಪಕ್ಷದವರಿಗೆ ಮೋಸ ಮಾಡಿ ಮೀನಿನ ಹೆಜ್ಜೆಯಂತೆ ಕಣ್ಣಿಗೆ ಕಾಣದ, ಕೈಗೆ
ಸಿಗದ, ಚಾಣಾಕ್ಷ ಕಾರ್ಯ ತಂತ್ರ ರೂಪಿಸಿ ಕಾಣದ ಎರಡೂ ಕೈಗಳ ನಿರ್ದೇಶನ ಮಕಾಡೆ ಮಲಗಿಸಿದ್ದು ಸಂತೋಷ.
ಸದಾ ಚಟುವಟಿಕೆಯಲ್ಲಿರುವ ಸದಸ್ಯರೊಬ್ಬರು ನೈನ್ಟಿ
ಪರ್ಸೆಂಟ್ ಅಧ್ಯಕ್ಷ ಆಗುತ್ತೇನೆ ಎಂದು ಸಂಧಾನಕಾರರ ಮಾತು ನಂಬಿ ಹೊಸ ಬಟ್ಟೆಯೊಂದಿಗೆ ನಗದು 25 ಲಕ್ಷ
15 ಲಕ್ಷ ಸದಸ್ಯರಿಗೆ ಸಂಧಾನಕಾರರಿಗೆ ತಲಾ 5ಲಕ್ಷ ಎಂದು ತೀರ್ಮಾನಿಸಿ ಚರ್ಚಿಸಿ ಅಧಿಕಾರ ಪಡೆಯುವ ಆತುರದಲ್ಲಿ
ಕಾಂಗ್ರೆಸ್ ತೆಗೆದು ಕೊಂಡ ನಿಲುವಿನಿಂದ ವಿಚಲಿತರಾಗಿ 15 ಲಕ್ಷ ವಾಪಾಸ್ ಬಂದಿದ್ದೆ ಅದೃಷ್ಟ ಶ್ರೀ
ರಾಮೇಶ್ವರ ಕಾಪಾಡಿದ ಎಂದು ಹಿರಿಯರ ಮಾತು ಕೇಳದೆ ಮಕಾಡೆ ಮಲಗಿ ಎಡವಟ್ಟು ಮಾಡಿಕೊಂಡರು.
ಮೇಲ್ಕಂಡ ಘಟನೆ ಬಗ್ಗೆ ಪಕ್ಷದಲ್ಲಿ ಆಂತರಿಕ ತನಿಖೆ
ನಡೆಸಿ ಪಕ್ಷದ ವಿರೋಧಿ ಚಟುವಟಿಕೆ ಬಗ್ಗೆ ಸಮಗ್ರ ಮಾಹಿತಿ ಪಡೆದು ಸದ್ಯದಲ್ಲೇ ಬಹಿರಂಗ ಹೇಳಿಕೆ ನೀಡಲಾಗುವುದು.
(ಕಿಮ್ಮನೆ ರತ್ನಾಕರ್ ಹೇಳಿಕೆಯನ್ನು ಯಥಾವತ್ತು ಪ್ರಕಟಿಸಲಾಗಿದೆ.)
