ಗೌರಿಶಂಕರ್‌ ವಿರುದ್ಧ ಮಾನಹಾನಿ ವರದಿ, ಹೇಳಿಕೆ ನೀಡದಂತೆ ತಡೆಯಾಜ್ಞೆ

ಡಾ. ಪಿ.ಗೌರಿ ಶಂಕ‌ರ್ ಗುರಿಯಾಗಿಸಿಕೊಂಡು ಮಾಡುತ್ತಿರುವ ಮಾನನಷ್ಟ ಪೋಸ್ಟ್ ಗಳ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ 

ಖ್ಯಾತ ಉರಗತಜ್ಞ ಡಾ. ಪಿ. ಗೌರಿ ಶಂಕರ್ ಅವರು ಸಲ್ಲಿಸಿದ್ದ ಸಿವಿಲ್ ಮಾನಹಾನಿ ಪ್ರಕರಣದಲ್ಲಿ ಬೆಂಗಳೂರು ನ್ಯಾಯಾಲಯವು ಪ್ರಸಿದ್ದ ಹರ್ಪಿಟಾಲಜಿಸ್ಟ್ ಡಾ. ಪಿ. ಗೌರಿ ಶಂಕರ್ ಅವರು ಸಲ್ಲಿಸಿದ್ದ ಸಿವಿಲ್ ಪ್ರಕರಣ ಆಲಿಸಿದ ನ್ಯಾಯಾಲಯವು ಅವರಿಗೆ ಮಧ್ಯಂತರ ರಕ್ಷಣೆ ನೀಡಿ ಮತ್ತು ಅವರ ವಿರುದ್ಧ ಮಾನನಷ್ಟ ವಿಷಯವನ್ನು ಪ್ರಸಾರ ಮಾಡುವುದರ ಕುರಿತಾಗಿ ತಡೆಯಾಜ್ಞೆಯನ್ನು ನೀಡಿರುತ್ತದೆ. ಬೆಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಶ್ರೀ ನಾಗರಾಜ್ ಹೆಬ್ಬಾರ್ @ ನಾಗರಾಜ್ ಕೂವೆ ಅಥವಾ ಅವರ ಪರವಾಗಿ ಅಥವಾ ಅವರ ಮೂಲಕ ಕಾರ್ಯನಿರ್ವಹಿಸುವ ಎಲ್ಲಾ ವ್ಯಕ್ತಿಗಳು ಸಾಮಾಜಿಕ ಮಾಧ್ಯಮ ಇಂಟರ್ನೆಟ್, ದೂರದರ್ಶನ, ಮುದ್ರಣ ಅಥವಾ ಯಾವುದೇ ವೇದಿಕೆಯಲ್ಲಿ ಡಾ. ಪಿ. ಗೌರಿ ಶಂಕರ್ ವಿರುದ್ಧ ಯಾವುದೇ ಸುಳ್ಳು. ಅವಹೇಳನಕಾರಿ ಅಥವಾ ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡುವುದು, ಪ್ರಕಟಿಸುವುದು, ಅಪ್‌ಲೋಡ್ ಮಾಡುವುದು, ಪ್ರಸಾರ ಮಾಡುವುದು, ಮುದ್ರಿಸುವುದು, ಹಂಚಿಕೊಳ್ಳುವುದು ಅಥವಾ ಮರು-ಪೋಸ್ಟ್ ಮಾಡುವುದನ್ನು ತಡೆಯುವ ಆದೇಶವನ್ನು ನೀಡಿರುತ್ತದೆ.

ಡಾ. ಪಿ. ಗೌರಿ ಶಂಕರ್ ಪರವಾಗಿ ಹಾಜರಾದ ವಕೀಲರಾದ ಅಕ್ಷಯ್ ಸ್ವಾಮಿ ಅವರು, ಪ್ರಾಥಮಿಕವಾಗಿ ಪ್ರಕರಣ ಬೆಳಕಿಗೆ ಬಂದಿದ್ದು, ತಮ್ಮ ಕಕ್ಷಿದಾರರಿಗೆ, ಅವರ ವಿರುದ್ಧದ ಅಪಪ್ರಚಾರದಿಂದ ಸರಿಪಡಿಸಲಾಗದ ನೋವಾಗಿರುತ್ತದೆ ಮತ್ತು ಈ ಕುರಿತಂತೆ ಮಧ್ಯಂತರ ಪರಿಹಾರಕ್ಕಾಗಿ ವಾದಿಸಿರುತ್ತಾರೆ. ವಿವರವಾದ ಪರಿಗಣನೆಯ ನಂತರ ನ್ಯಾಯಾಲಯವು, ಶ್ರೀ ನಾಗರಾಜ್ ಹೆಬ್ಬಾರ್ @ ನಾಗರಾಜ್ ಕೂವೆ ಅವರ ಫೇಸ್‌ಬುಕ್ ಖಾತೆಯಿಂದ ಅಪ್ ಲೋಡ್ ಮಾಡಲಾದ, ಡಾ.ಪಿ. ಗೌರಿ ಶಂಕರ್ ವಿರುದ್ಧದ ಸುಳ್ಳು, ಅವಹೇಳನಕಾರಿ ಅಥವಾ ಮಾನನಷ್ಟಕರ ವಿಷಯವನ್ನು ತೆಗೆದುಹಾಕಲು ಫೇಸ್‌ಬುಕ್‌ಗೆ ನಿರ್ದೇಶನ ನೀಡಿರುತ್ತದೆ.

ಇತ್ತೀಚೆಗೆ ಕರ್ನಾಟಕ ಮತ್ತು ಭಾರತಕ್ಕೆ ನಾಲ್ಕು ಹೊಸ ಪ್ರಭೇದದ ಕಾಳಿಂಗ ಸರ್ಪಗಳ ಆವಿಷ್ಕಾರದ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಡಾ. ಪಿ. ಗೌರಿ ಶಂಕರ್, 187 ವರ್ಷಗಳ ನಂತರ ವೈಜ್ಞಾನಿಕ  ಪ್ರಗತಿಗೆ ಕಾರಣರಾಗಿರುತ್ತಾರೆ, ಮತ್ತು ಈ ಪ್ರಭೇದಗಳಲ್ಲಿ ಒಂದನ್ನು ಓಫಿಯೋಫಗಸ್ ಕಾಳಿಂಗ ಎಂದು ಹೆಸರಿಸುವ ಮೂಲಕ ಮಲೆನಾಡಿನ ಪರಿಸರವನ್ನು ಗೌರವಿಸಿರುತ್ತಾರೆ.

ಶ್ರೀ ನಾಗರಾಜ್ ಕೂವೆ ಮತ್ತು ಅವರ ಸಹಚರರು ವಿವಿಧ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಈ ಕೆಲಸಗಳನ್ನು ತಪ್ಪಾಗಿ ನಿರೂಪಿಸಿದ್ದು ಮತ್ತು ಗೌರಿ ಶಂಕರ್ ರವರ ಖ್ಯಾತಿಗೆ ಹಾನಿಯನ್ನುಂಟುಮಾಡುವ ಉದ್ದೇಶಪೂರ್ವಕ ಪ್ರಯತ್ನ ಮಾಡುತ್ತಿದ್ದಾರೆ.

ದುರುದೇಶಪೂರಿತ ದೂರುಗಳು ಮತ್ತು ಖ್ಯಾತಿಗೆ ಹಾನಿ ಮಾಡುವ ಉದ್ದೇಶದಿಂದ ನ್ಯಾಯಾಲಯದ ವಿಚಾರಣೆಯ ವಿರೂಪಗೊಳಿಸುವಿಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನ್ಯಾಯಾಲಯದ ಆದೇಶದ ಅನುಸರಣೆ ಕಡ್ಡಾಯವಾಗಿದೆ ಮತ್ತು ಅಂತಹ ವಿಷಯದ ಯಾವುದೇ ಉಲ್ಲಂಘನೆ, ಮುಂದುವರಿಕೆ, ಹಂಚಿಕೆ ಅಥವಾ ಮರು-ಪೋಸ್ಟ್ ಮಾಡುವುದು ನ್ಯಾಯಾಲಯದ ಆದೇಶದ ತಿರಸ್ಕಾರಕ್ಕೆ ಸಮನಾಗಿರುತ್ತದೆ, ಹಾಗು ಇದರ ಉಲ್ಲಂಘನೆಯು ಗಂಭೀರ ನಾಗರಿಕ ಮತ್ತು ಕ್ರಿಮಿನಲ್‌ ಪರಿಣಾಮಗಳನ್ನು ಎದುರಿಸಬೇಕಾದ ಸನ್ನಿವೇಶಕ್ಕೆ ದಾರಿಮಾಡಿಕೊಡುತ್ತದೆ. 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post