ಯುವ ಉದ್ಯಮಿ ವಸಂತ ಆತ್ಮಹತ್ಯೆ

ಯುವ ಸಮುದಾಯದ ಆತ್ಮ ವಿಶ್ವಾಸದ ಕೊರತೆ ಬಿಂಬಿಸುವ ವಸಂತನ ಅನಿರೀಕ್ಷಿತ ಸಾವು..

ಕುರುವಳ್ಳಿ ಭಾಗದ ಅತ್ಯಂತ ಸುಶಿಕ್ಷಿತ ಕುಟುಂಬಗಳಲ್ಲಿ ಒಂದೆಂಬ ಗೌರವ ಹೊಂದಿರುವ ರೇಣುಕಾಂಬಾ ಟ್ರಾನ್ಸಫೋರ್ಟ್ ಲಾರಿಗಳು ಹಾಗೂ ಕಲ್ಲು ವ್ಯಾಪಾರೋದ್ಯಮಿ ಕುಟುಂಬದ ವಸಂತ (35) ಹುಣಸವಳ್ಳಿ ಗ್ರಾಮದ ಅವರ ಕೃಷಿ ಭೂಮಿಯ ಸಮೀಪದ ತುಂಗಾನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಮಾರು 50 ವರ್ಷಕ್ಕೂ ಹಿಂದಿನಿಂದ ಕಲ್ಲು ವ್ಯಾಪಾರ ಮಾಡಿಕೊಂಡು ಬಂದಿರುವ, ಅತ್ಯಂತ ಪರಿಶ್ರಮದಿಂದ ಆರ್ಥಿಕವಾಗಿ ಮೇಲೆ ಬಂದ ಕುಟುಂಬದ ಸದಸ್ಯ ವಸಂತ.

ವಸಂತನ ತಂದೆ ಮಂಜುನಾಥ್ ಕೆಲವು ವರ್ಷಗಳ ಹಿಂದೆ ಅಕಾಲಿಕ ಮರಣ ಹೊಂದಿದ್ದರು. ಈತನ ಚಿಕ್ಕಪ್ಪಂದಿರಾದ ಗಣಪತಿ, ನಾಗೇಂದ್ರ, ರೇಣುಕಾರಾಜ್ ತೀರ್ಥಹಳ್ಳಿಯಲ್ಲಿ ಬಹಳ ದೊಡ್ಡ ಸ್ನೇಹ ವಲಯವನ್ನು ಹೊಂದಿರುವವರು ಮತ್ತು ರಾಜಕೀಯವಾಗಿ ಪ್ರಭಾವಿಗಳು.

ಈತನ ಸೋದರತ್ತೆ ಲಕ್ಷ್ಮಿ ವೆಂಕಟಪ್ಪ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿದ್ದವರು. ಈಗ ಚಿಕ್ಕಮ್ಮ ಮಂಜುಳಾ ನಾಗೇಂದ್ರ ಸದಸ್ಯರಾಗಿದ್ದಾರೆ. ಇಷ್ಟೆಲ್ಲಾ ಹಿನ್ನಲೆ ಇದ್ದೂ ಈ ಯುವಕ ದುಡುಕಿ ಸಾವಿನ ಹಾದಿ ಹಿಡಿದಿದ್ದು ಅವರ ಕುಟುಂಬ ಹಾಗೂ ಆಪ್ತ ವಲಯಕ್ಕೆ ಧಿಗ್ಬ್ರಮೆ ತಂದಿದೆ.

ಮನುಷ್ಯ ಅಂದ ಮೇಲೆ ಸಮಸ್ಯೆ ಸಹಜ ಅದಕ್ಕೆ ಸಾವೇ ಪರಿಹಾರ ಅಂದು ಕೊಳ್ಳುವ ಈಗಿನ ಯುವ ಜನತೆ ಮನಸ್ಥಿತಿ ಗಾಬರಿ ಹುಟ್ಟಿಸುತ್ತಿದೆ. ವಸಂತ ಪತ್ನಿ, ತಾಯಿ ಸೇರಿದಂತೆ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಶನಿವಾರ ಬೆಳಿಗ್ಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post