ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಜನವರಿ 14 ರ ಬುಧವಾರ ದಂದು ಚಿಕ್ಕ ರಥೋತ್ಸವ ನೆರವೇರಲಿದೆ. ಅಂದು ಬೆಳಿಗ್ಗೆ ಅಭಿಜಿನ್ ಮುಹೂರ್ತದಲ್ಲಿ ರಥಾರೋಹಣ ನೆರವೇರಲಿದ್ದು, ಮಧ್ಯಾಹ್ನ ರಥಬಿದಿಯ ಶ್ರೀ ರಾಮಚಂದ್ರಪುರ ಮಠದ ಆವರಣದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಲಿದೆ. ಈ ಎಲ್ಲಾ ದೇವತಾ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿ, ತನು ಮನ ಧನದೊಂದಿಗೆ ಸಹಕರಿಸಲು ಮಕರ ಸಂಕ್ರಾಂತಿ ರಥೋತ್ಸವ ಸಮಿತಿ ಕೋರಿದೆ.