ಆಕರ್ಷಕವಾಗಿ ನಿರ್ಮಿಸಿರುವ
ಶಿಲ್ಪಿಗಳಾದ ಜಗದೀಶ್, ಮಣಿಕಂಠ
ಶೀಘ್ರದಲ್ಲೇ ದೇವಾಯಲದ
ಎದುರು ಸ್ಥಾಪನೆ
ತೀರ್ಥಹಳ್ಳಿ ತಾಲ್ಲೂಕಿನ ರಂಜದಕಟ್ಟೆ ಚಾಮುಂಡೇಶ್ವರಿ, ಹೊನ್ನತ್ತಮ, ಗುಳ್ಳೆಮಾರಿಯಮ್ಮ ದೇವಸ್ಥಾನದಲ್ಲಿ ಸ್ಥಾಪನೆಗೊಳ್ಳಲಿರುವ ಗುರುಡಗಂಭ ಮಂಗಳವಾರ ದೇವಸ್ಥಾನದ ಪ್ರಾಂಗಣವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರವೇಶಿಸಿತು. ಕುರುವಳ್ಳಿಯ ಶಿಲ್ಪಕಲಾ ಕೇಂದ್ರದಲ್ಲಿ ಆಕರ್ಷಕ ಕೆತ್ತನೆಗಳಿಂದ ಶಿಲ್ಪಿ ಜಗದೀಶ್ ಮತ್ತು ಸಹೋದರ ಮಣಿಕಂಠ ರೂಪಿಸಿರುವ 29 ಅಡಿ ಉದ್ದದ ಕಲಾತ್ಮಕ ಗರುಡಗಂಬವನ್ನು ನೂರಾರು ಭಕ್ತಾದಿಗಳು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ವಾದ್ಯ ಮೇಳಗಳೊಂದಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯ ಮೂಲಕ ತೆಗೆದುಕೊಳ್ಳಲಾಯಿತು.
ವಿಜಯದಶಮಿಯ ಆರಂಭದ ದಿನವಾದ ಮಂಗಳವಾರ ದೇವಾಲಯವನ್ನು ಪ್ರವೇಶಿಸಿದ ಗರುಡಗಂಬಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ನವರಾತ್ರಿಯಂದು 9 ದಿನಗಳ ಕಾಲ ದೇವಾಲಯದಲ್ಲಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು ಸಾರ್ವಜನಿಕರು ತನುಮನ ಧನ ಸಹಕಾರ ನೀಡಿ ಸಹಕರಿಸುವಂತೆ ಅಧ್ಯಕ್ಷ ಪ್ರವೀಣ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಮಿತಿ ಪರವಾಗಿ ಕೋರಿದ್ದಾರೆ.
