ಸೆಲ್ಫಿ ಪಾಯಿಂಟ್ ಆಗಿ ಪರಿವರ್ತನೆಯಾದ ಕುವೆಂಪು ವೃತ್ತ
ತೀರ್ಥಹಳ್ಳಿಯ ಕುವೆಂಪು ವೃತ್ತದಲ್ಲಿ “ಯುವ ಕೇಸರಿ” ತಂಡದಿಂದ ಸ್ಥಾಪನೆಗೊಂಡಿದರುವ ಹಿರಣ್ಯಕಶ್ಯಪುವನ್ನು ಸಂಹರಿಸುತ್ತಿರುವ ಸ್ವಯಂ ಚಾಲಿತ ಬೃಹತ್ ಉಗ್ರ ನರಸಿಂಹ ಸ್ಥಬ್ದಚಿತ್ರ ಪ್ರಚಂಡ ಜನಾಕರ್ಷಣೆ ಪಡೆದಿದೆ. ಹೊರ ಊರುಗಳಿಂದ ತೀರ್ಥಹಳ್ಳಿಗೆ ಆಗಮಿಸುವ ಪ್ರವಾಸಿಗಳಿಗೆ ಈ ಸ್ಥಬ್ದಚಿತ್ರ ಸೂಜಿಗಲ್ಲಿನಿಂತೆ ಆಕರ್ಷಿಸುತ್ತಿದ್ದು ಮೊಬೈಲ್‌ಗಳಲ್ಲಿ ಇದರ ಚಿತ್ರಗಳನ್ನು ಕ್ಲಿಕ್ಕಿಸುವುದಲ್ಲದೇ ಸೆಲ್ಫಿಯನ್ನು ಕೂಡ ಪಡೆದುಕೊಂಡು ಮುಂದೆ ಹೋಗುತ್ತಿದ್ದಾರೆ.
ಭಜರಂಗದಳದ ತಾಲ್ಲೂಕು
ಸಂಚಾಲಕ ಮತ್ತು ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿಯಾಗಿರುವ ಗಣೇಶ್ ಪ್ರಸಾದ್ ದೇವಾಡಿಗ ನೇತೃತ್ವದ
ಯುವಕರ ಗುಂಪು ಇದನ್ನು ಸಮಾನ ಮನಸ್ಕ ಸ್ನೇಹಿತರ ಆರ್ಥಿಕ ನೆರವಿನಿಂದ ತೀರ್ಥಹಳ್ಳಿ ದಸರಾ ವಿಶೇಷ ಆಕರ್ಷಣೆಯಾಗಿ
ಸ್ಥಾಪಿಸಿದೆ. ಸಾರ್ವಜನಿಕರು ಅಥವಾ ದಸರಾ ಸಮಿತಿಯಿಂದ ಯಾವುದೇ ನೆರವನ್ನು ಪಡೆಯದೇ ಲಕ್ಷಾಂತರ ವೆಚ್ಚದ
ಈ ಸ್ಥಬ್ದಚಿತ್ರವನ್ನು ಈ ಯುವಕರು ಸ್ಥಾಪಿಸುತ್ತಿರುವುದು ವಿಶೇಷವಾಗಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ
ಇವರು ಸ್ಥಾಪಿಸಿದ್ದ ಬೃಹತ್ ಆಂಜನೇಯನ ಸ್ಥಬ್ದಚಿತ್ರವು ಕೂಡ ಅಪಾರ ಆಕರ್ಷಣೆ ಪಡೆದಿತ್ತು.

