ಜಗಜ್ಜನನಿಯ ಆರಾಧನಾ ಮಹಾಪರ್ವ ನವರಾತ್ರೋತ್ಸವ
ಜೀವ ಜಗತ್ತಿನ ಪ್ರಸಾವಿತ್ರೀ, ಆಸುರೀ ಶಕ್ತಿಯನ್ನು ದಮನಗೊಳಿಸಿದ ಲೋಕಸಮುದ್ಧಾರಿಣೀ; ಅರಿವಿನ ಬೆಳಕನ್ನು ಕರುಣಿಸುವ ಜ್ಞಾನವಿಜ್ಞಾನಸಂಧಾತ್ರೀ; ಸಂಪದನುಗ್ರಹಿಸುವ ಶುಭಲಕ್ಷಣ ಲಕ್ಷಿತಾಂಗೀ; ಜಗಚಕ್ರ ಪರಿವರ್ತಿನಿ ಎನಿಸಿದ ಜಗನ್ಮಾತೆಯ ಆರಾಧನೆಗೆ ಒದಗಿದ ಕಾಲ ವಿಶೇಷವೇ ನವರಾತ್ರಿ ಪರ್ವ.
ಸ್ವಸ್ತಿ ಶ್ರೀ!
ವಿಶ್ವಾವಸು ಸಂವತ್ಸರದ ಆಶ್ವಯುಜ ಶುಕ್ಲ ಪಾಡ್ಯದಿಂದ ಆಶ್ವಯುಜ ಶುಕ್ಲ ದಶಮೀ ಪರ್ಯಂತ ನವರಾತ್ರೋತ್ಸವ.
(ದಿನಾಂಕ 22.09.2025 ರಿಂದ 02.10.2025ವರೆಗೆ) ಶ್ರೀ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ
ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಪ್ರತಿ ದಿನ ಸಂಜೆ 5.30 ರಿಂದ ದುರ್ಗಾ ಪಾರಾಯಣ ದುರ್ಗಾಪೂಜೆ,
ಕುಂಕುಮಾರ್ಚನೆ, ಬೆಳಿಗ್ಗೆ ಪಂಚಾಮೃತ ಅಭಿಷೇಕ, ರುದ್ರಾಭೀಷೇಕ, ಮೊದಲಾದ ಉಪಚಾರಗಳಿಂದ ದೇವತಾ ಕಾರ್ಯ
ನಡೆಯಲಿದೆ. ದಿನಾಂಕ 2-10-2025ರ ವಿಜಯದಶಮಿಯಂದು ಬೆಳಿಗ್ಗೆ ದುರ್ಗಾಹೋಮ ಸಂಪನ್ನಗೊಳ್ಳಲಿದೆ. ಭಗವದ್ಭಕ್ತರು
ಈ ವಿಶೇಷ ದೇವ್ಯುತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ,
ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ರಾಮೇಶ್ವರ ದೇವಸ್ಥಾನ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು,
ಸದಸ್ಯರು ಮತ್ತು ಅರ್ಚಕರು ಪ್ರಕಟಣೆಯಲ್ಲಿ ವಿನಂತಿದ್ದಾರೆ.
ಸೇವಾವಕಾಶಗಳು:
- ಒಂಬತ್ತು ದಿನದ ನವರಾತ್ರಿ ದುರ್ಗಾ ಪಾರಾಯಣ,ಆರ್ಚನೆ, ರುದ್ರಾಭೀಷೇಕ ಇತ್ಯಾದಿ.
- ಒಂದು ದಿನದ ನವರಾತ್ರಿ ದುರ್ಗಾ ಪಾರಾಯಣ,ಅರ್ಚನೆ, ರುದ್ರಾಭೀಷೇಕ ಇತ್ಯಾದಿ.
- ವಿಜಯದಶಮಿಯಂದು ದುರ್ಗಾಹೋಮ. ಈ ಎಲ್ಲಾ ಸೇವೆ ಮಾಡಿಸಲು ಇಚ್ಚಿಸುವ ಭಕ್ತಾಧಿಗಳು ಮುಂಚಿತವಾಗಿ ದೇವಸ್ಥಾನದ ಅರ್ಚಕರಲ್ಲಿ ಹೆಸರು ನೋಂದಾಯಿಸಲು ಕೋರಿದೆ. ಮೊ. 9986298818
