ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 2 ವರೆಗೆ ಶ್ರೀ ಕ್ಷೇತ್ರ ಗಾಣಿಮಕ್ಕಿಯಲ್ಲಿ ನವರಾತ್ರಿ ವಿಶೇಷ ಪೂಜೆ ಮತ್ತು ರಥೋತ್ಸವ
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧಿ ಪಡೆದ ಶ್ರೀ ಆದಿಶಕ್ತಿ ಸುಬ್ರಹ್ಮಣ್ಯ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಗಾಣಿಮಕ್ಕಿಯಲ್ಲಿ ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 2ರವರೆಗೆ ಶರನ್ನವರಾತ್ರಿ ,ದಸರಾ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 2 ರವರೆಗೆ ಪ್ರತಿದಿನ ಬೆಳಿಗ್ಗೆ ಶ್ರೀದೇವಿಯ ಸಾನಿಧ್ಯದಲ್ಲಿ ಶ್ರೀ ಚಂಡಿಕಾ ಪಾರಾಯಣ ಮತ್ತು ತುಲಾಭಾರ ಸೇವೆ ನಡೆಯಲಿದೆ ಹಾಗೂ ಸೆ.23 ನೇ ಮಂಗಳವಾರ ಶ್ರೀ ಚಂಡಿಕಾ ಹೋಮ , ಸೆ 24 ನೇ ಬುಧವಾರ ಶ್ರೀ ದುರ್ಗಾ ಹೋಮ, 27 ನೇ ಶನಿವಾರ ಶ್ರೀ ಚಂಡಿಕಾ ಹೋಮ ನಡೆಯಲಿದೆ ಹಾಗೂ ಅಕ್ಟೋಬರ್ 2 ನೇ ಗುರುವಾರ ಶ್ರೀ ದೇವಿಯ ಸಾನಿಧ್ಯದಲ್ಲಿ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಸೇವೆ ನಡೆಯಲಿದ್ದು ಪ್ರತಿದಿನ ಮಧ್ಯಾಹ್ನ ಭಕ್ತಾದಿಗಳಿಗೆ ಭೋಜನ ವ್ಯವಸ್ಥೆ ಇರಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಆಗಮಿಸಿ ತನು-ಮನ-ಧನ ಸಹಾಯವನ್ನು ನೀಡಬೇಕಾಗಿ ಶ್ರೀ ಅಭಯಶಂಕರ ಸ್ಚಾಮಿ ಮತ್ತು ಕುಟುಂಬದವರು ವಿನಂತಿಸಿಕೊಂಡಿದ್ದಾರೆ.
ದೇವಸ್ಥಾನದ ಸಮರ್ಪಕ ಸಂಖ್ಯೆ
8762053075
9483396026
8277198170
