ತೀರ್ಥಹಳ್ಳಿ ಜೆಸಿ ಸಪ್ತಾಹ ಆರಂಭ

ತೀರ್ಥಹಳ್ಳಿಯ ಜೆಸಿಐ ಸಂಸ್ಥೆಯ ವತಿಯಿಂದ ವಿವಿಧ ಕ್ರಿಯಾತ್ಮಕ ಕಾರ್ಯಕ್ರಮಗಳ ಸಪ್ತಾಹ ಧ್ವಜಾರೋಹಣದ ಮೂಲಕ ಆರಂಭಗೊಂಡಿದೆ. ಅಧ್ಯಕ್ಷ ಅರುಣ್‌ ಕುಮಾರ್‌ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಕುವೆಂಪು ವೃತ್ತದ ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣದ ಸಮೀಪ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಬುಧವಾರದಂದು ಆರ್ಥಿಕ ಸ್ವಾತಂತ್ರ್ಯ ತರಬೇತಿ ಕುರಿತು ಪ್ರಮೋದ್‌ ಸಂಪನ್ಮೂಲ ವ್ಯಕ್ತಿಯಾಗಿ ಉಪಯುಕ್ತ ಮಾಹಿತಿ ನೀಡಿದ್ದು ಕೌಶಲ್ಯ ಆಧಾರಿತ ಕಾರ್ಯಗಾರವನ್ನು ಮನೋಜ್‌ ಕುಮಾರ್‌ ನಡೆಸಿಕೊಟ್ಟರು.

ಸೆಪ್ಟೆಂಬರ್‌ 11 ರಂದು ಶೆಟಲ್‌ ಬ್ಯಾಡ್ಮಿಟನ್‌ ಪಂದ್ಯಾವಳಿ, ಜುಂಬಾ ಫಿಟ್‌ನೆಸ್‌ ತರಬೇತಿ, 12 ರಂದು ವ್ಯಾಪಾರ ಮಂಡಳಿ ನಾಮಫಲಕ ಅಳವಡಿಕೆ, ಬಿಸಿನೆಸ್‌ ರೀಲ್‌ ಮ್ಯಾರಥಾನ್‌, 13 ರಂದು ಕರ್ತವ್ಯಗಾರ ಜಾಗೃತಿ ಅರ್ಜಿ, ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕರ್ತವ್ಯಗಳ ಅರ್ಜಿ, 14 ರಂದು ಒಂದು ಲಕ್ಷ ವಿಷನ್‌ ಅರ್ಜಿ ಹಾಗೂ ಸಂಜೆ 6 ಗಂಟೆಗೆ ಗೋಪಾಲಗೌಡ ರಂಗಮಂದಿರದಲ್ಲಿ ಲಾವಣ್ಯ ರಿ. ಬೈಂದೂರು ಅರ್ಪಿಸುವ “ನಾಯಿ ಕಳೆದಿದೆ” ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯದರ್ಶಿ ಎಚ್.ಜಿ.ಎಫ್.‌ ನಟೇಶ್‌, ಜಿಸಿ ಸ್ಯಾಟ್‌ ರಾಷ್ಟ್ರೀಯ ಸಂಯೋಜಕ ಅಭಿಜಿತ್‌ ಹಿರಿಯ ಮತ್ತಿತರು ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post