ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಚಿನ್ ಎನ್.ಜೆ. ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿಯನ್ನು ಘೋಷಿಸಿದೆ.
ಪತ್ರಿಕೋದ್ಯಮ ಮತ್ತು
ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ.ಸತೀಶ್ ಕುಮಾರ್ ಅಂಡಿಂಜೆ ಅವರ ಮಾರ್ಗದರ್ಶನದಲ್ಲಿ,
"ಅಭಿವೃದ್ಧಿ ಸಂವಹನ ಮಾಧ್ಯಮವಾಗಿ ಚಲನಚಿತ್ರ: ಆಯ್ದ ಕನ್ನಡ ಚಲನಚಿತ್ರಗಳ ಒಂದು ವಿಶ್ಲೇಷಣಾತ್ಮಕ
ಅಧ್ಯಯನ" ಎಂಬ ವಿಷಯದ ಕುರಿತು ಸಚಿನ್ ಅವರು ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು.
ಮೂಲತಃ ಶಿವಮೊಗ್ಗ
ಜಿಲ್ಲೆಯ ಸೊರಬ ತಾಲ್ಲೂಕಿನ ನೆಗವಾಡಿ ಗ್ರಾಮ ಸಚಿನ್ ಎನ್.ಜೆ. ಜಯಪ್ಪ ಮತ್ತು ಸುಜಾತ ದಂಪತಿಯ ಪುತ್ರರಾಗಿದ್ದಾರೆ.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಿಪ್ಪನ್‌ಪೇಟೆಯ ಚಂದಳ್ಳಿಯಲ್ಲಿ ಪೂರೈಸಿದ್ದು, ಪ್ರೌಢ ಮತ್ತು
ಕಾಲೇಜು ಶಿಕ್ಷಣವನ್ನು ರಿಪ್ಪನ್‌ಪೇಟೆಯಲ್ಲಿ ಮುಗಿಸಿದ್ದಾರೆ. ಬಳಿಕ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ
ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು.
ಪ್ರಸ್ತುತ ಹಾಸನದ
ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ (ಸ್ವಾಯತ್ತ) ಪತ್ರಿಕೋದ್ಯಮ ವಿಭಾಗದ
ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
