ನಂಬಿಕಸ್ತ ಚಿನ್ನಾಭರಣ ಮಳಿಗೆ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್

ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲು ಹಾಲ್ ಮಾರ್ಕ್ ಚಿನ್ನಾಭರಣ ಮಳಿಗೆ ಸ್ಥಾಪನೆ ಮಾಡಿದ ಹೆಗ್ಗಳಿಕೆಯ ನ್ಯಾಷನಲ್ ಗೋಲ್ಡ್ ಮತ್ತು ಡೈಮಂಡ್ ಸಂಸ್ಥೆ ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿ ನೂತನ ಶೋ ರೂಮ್ ಆರಂಭ ಮಾಡಿದೆ.
ವ್ಯಾಪಾರದ ಜೊತೆಗೆ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿರುವ ಈ ಸಂಸ್ಥೆ ಈಗಾಗಲೇ ತೀರ್ಥಹಳ್ಳಿ, ಕೊಪ್ಪ, ಹೊಸನಗರ, ಶೃಂಗೇರಿ, ಶಿವಮೊಗ್ಗ ಭಾಗಗಳಲ್ಲಿ ಜನಪ್ರಿಯಗೊಂಡಿದೆ.
ದೊಡ್ಡ ಕಂಪನಿಗಳಿಗೆ ಹೋಲಿಸಿದರೆ ದರದಲ್ಲಿ ತೀರಾ ಚೌಕಾಶಿ ಮಾಡದ ಮತ್ತು ಸದಾ ಕಾಲ ವ್ಯಾಪಾರ ಮಾಡುವ ಗ್ರಾಹಕರಿಗೆ ನಂಬಲಾಗದಷ್ಟು ರಿಯಾಯಿತಿ ನೀಡುವ ಈ ಸಂಸ್ಥೆ ಆ ಕಾರಣಕ್ಕಾಗಿ ಜನ ಸಾಮಾನ್ಯರ ನೆಚ್ಚಿನ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಯಾವ ಬಿಗುಮಾನವು ಇಲ್ಲದೆ ತೀರಾ ಸರಳವಾಗಿ ಗ್ರಾಹಕರ ಜೊತೆಗೆ ಬೆರೆಯುವ ಮಾಲೀಕರಾದ ಯೂಸುಫ್ ಹೈದರ್, ಮತ್ತು ಕಬೀರ್ ನಡವಳಿಕೆ ಸಂಸ್ಥೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಇಬ್ರಾಹಿಂ ಷರೀಫ್ ಸಹೋದರರ ತಂದೆ ಹಾಜಿ ಶೇಕ್ ಅಹಮದ್ ರವರು ಚಿಕ್ಕದಾಗಿ ಆರಂಭ ಮಾಡಿದ ನ್ಯಾಷನಲ್ ಸಂಸ್ಥೆ ಇಬ್ರಾಹಿಂ, ಮತ್ತು ರೆಹಮಾನ್ ಅವರ ನೇತೃತ್ವದಲ್ಲಿ ಈಗಾಗಲೇ ರಸ್ತೆಗಳಿಂದ ಹಿಡಿದು ಶಿವಮೊಗ್ಗ ವಿಮಾನ ನಿಲ್ದಾಣದ ತನಕ ನಿರ್ಮಾಣ ಕಾರ್ಯಗಳನ್ನು ಕೈಗೊಂಡು ಯಶಸ್ವಿಯಾಗಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.
ಅಬ್ದುಲ್ ಕಲಾಂ ತೀರ್ಥಹಳ್ಳಿಯಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪನೆ ಮಾಡಿ ಆಸಕ್ತಿಯುಳ್ಳ ಪ್ರತಿಭೆಗಳಿಗೆ ಬೆಂಗಳೂರು ಮಟ್ಟದ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ. ಸುಲೇಮಾನ್ ತೀರ್ಥಹಳ್ಳಿಯ ಮೊದಲ ಸೂಪರ್ ಬಜಾರ್ ನ್ಯಾಷನಲ್ ಸೂಪರ್ ಬಜಾರ್ ಸ್ಥಾಪನೆ ಮಾಡಿ ಯಶಸ್ಸು ಕಂಡಿದ್ದಾರೆ.
ತಮ್ಮ ವ್ಯವಹಾರದ ಪಾಲಿನಲ್ಲಿ ಬಂದ ಲಾಭದಲ್ಲಿ ದೊಡ್ಡ ಮೊತ್ತವನ್ನೇ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧಾರಾಳವಾಗಿ ನೀಡುತ್ತಿರುವ ಈ ಕುಟುಂಬ ಅ ಕಾರಣಕ್ಕೂ ಜಾತ್ಯತೀತ, ಧರ್ಮತೀತವಾಗಿ ಗೌರವಕ್ಕೆ ಪಾತ್ರವಾಗಿದೆ.
