ಮಾಳೂರು ಠಾಣೆ ಪೊಲೀಸರ ಕಾರ್ಯಾಚರಣೆ
ನಿಲ್ಲದ ಮಣ್ಣು ತೊಳೆದು ಮರಳು ಮಾಡುವ ದಂಧೆ
ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಸಮೀಪ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದನ್ನು ಪೊಲೀಸರು ಶನಿವಾರ ಮುಂಜಾನೆ ವಶಪಡಿಸಿಕೊಂಡಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಸಮೀಪವೇ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರು ಆಡಳಿತ ಕಣ್ಣಿದ್ದು ಕುರುಡಾಗಿದೆ.ಈಚೆಗೆ ನೆರಟೂರು ಗ್ರಾಮದ ಸಮೀಪದ ಆರಗ, ಸೂಡನಕಲ್ಲು, ಶಿರುಪತಿ ಭಾಗದಲ್ಲಿ ಅಕ್ರಮವಾಗಿ ಮರಳುಗಾರಿಕೆ ಸದ್ದು ಮಾಡಿತ್ತು. ನೀರಿನಲ್ಲಿ ಮಣ್ಣು ತೊಳೆದು ಮರಳು ಮಾಡುತ್ತಿದ್ದ ಪ್ರಕರಣ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆಯ ಅಧಿಕಾರಿಗಳ ಗಮನದಲ್ಲಿ ಇದ್ದರು ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ವಿಫಲವಾಗದಂತಿದೆ. ತೀರ್ಥಹಳ್ಳಿ ಪಟ್ಟಣದ ಸಮೀಪವೇ ಇಂತಹ ದೊಡ್ಡ ಮರಳುಗಾರಿಕೆ ಜಾಲ ಸಕ್ರೀಯವಾಗಿದ್ದರು ತಾಲ್ಲೂಕು ಆಡಳಿತ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
ತೀರ್ಥಹಳ್ಳಿ ಪಟ್ಟಣದಿಂದ ನೇರವಾಗಿ ಶಿವಮೊಗ್ಗ ನಗರಕ್ಕೆ ಮರಳು ರವಾನೆಯಾಗುತ್ತಿದ್ದರು ತಡೆಯುವ ಕ್ರಮಗಳ ಬಗ್ಗೆ ಅನುಮಾನ ಸೃಷ್ಟಿಯಾಗುತ್ತಿದೆ. ಶಿವಮೊಗ್ಗದವರಿಗೆ ದಂಧೆಗೆ ನೇರವಾಗಿ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ತೀರ್ಥಹಳ್ಳಿ ಕಡೆಯಿಂದ ಆಗಮಿಸುತ್ತಿದ್ದ ಮರಳು ಲಾರಿಯನ್ನು ಶನಿವಾರ ಮಾಳೂರು ಸಬ್ ಇನ್ಸ್ಪೆಕ್ಟರ್ ಕುಮಾರ್ ನೇತೃತ್ವದ ಪೊಲೀಸರ ತಂಡ ವಶಪಡಿಸಿಕೊಂಡಿದೆ. ಇದೀಗ ಮರಳು ಲಾರಿ ಮಾಲು ಸಮೇತ ಮಾಳೂರು ಠಾಣೆಗೆ ಕೊಂಡೊಯ್ಯಲಾಗಿದೆ.