ಕಿತ್ತನಗದ್ದೆಯ ಹಂದಿ ಫಾರಂ ಉದ್ಯಮಿ
ತೀರ್ಥಹಳ್ಳಿ ತಾಲ್ಲೂಕಿನ
ಕಿತ್ತನಗದ್ದೆಯ ಹಂದಿ ಫಾರಂ ಉದ್ಯಮ ನಡೆಸುತ್ತಿರುವ ಸುನೀಲ್ ಟಿ.ಎಸ್. ಅವರಿಗೆ ಶನಿವಾರ ಶಿವಮೊಗ್ಗದ
ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಮಾಂಸ ಮತ್ತು ಹಾಲು ಉತ್ಪಾದನೆಯಲ್ಲಿ ಸುರಕ್ಷತಾ
ಅಭ್ಯಾಸ ಕ್ರಮಗಳು ಕುರಿತ ರೈತರ ಜಾಗೃತಿ ಸಮಾರಂಭದಲ್ಲಿ “ಶ್ರೇಷ್ಠ ರೈತ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
ಸುನೀಲ್ ಅನೇಕ ವರ್ಷಗಳಿಂದ
ಹಂದಿ ಫಾರಂ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹಂದಿ ಸಾಕುತ್ತಿರುವ
ಅವರನ್ನು ಹೈದರಾಬಾದ್ ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆ, ಕರ್ನಾಟಕ ಪಶು ವೈದ್ಯಕೀಯ, ಬೀದರ್ ಪಶು
ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಗುರುತಿಸಿ ಸನ್ಮಾನಿಸಿದೆ.
