ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ
ಸ್ಥಳಕ್ಕೆ ಪೊಲೀಸರ ದೌಡು
ತೀರ್ಥಹಳ್ಳಿ ತಾಲ್ಲೂಕಿನ ಪ್ರವಾಸಿ ಧಾರ್ಮಿಕ ಕೇಂದ್ರ ಕುಂದಾದ್ರಿ ಬೆಟ್ಟದ ಮೇಲಿನ ಮೊದಲ ತಿರುವಿನಲ್ಲೆ ಕೊಲೆ ಪ್ರಕರಣವೊಂದು ನಡೆದಿದೆ. ಸುಟ್ಟ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸುತ್ತಿದ್ದಾರೆ.
ಕುಂದಾದ್ರಿ ಬೆಟ್ಟದ ಮೇಲೆ ಅನೈತಿಕ ಚಟುವಟಿಕೆ, ಅಕ್ರಮ ವ್ಯವಹಾರ, ಇಸ್ಪೀಟು, ದಂಧೆ ಮುಂತಾದವು ನಿರಂತರ ನಡೆಯುತ್ತಿರುತ್ತದೆ ಎಂದು ಹಲವು ಬಾರಿ ಮಾದ್ಯಮಗಳು ಎಚ್ಚರಿಕೆ ನೀಡಿದರು ಆಡಳಿತ ತಲೆಕೆಡಿಸಿಕೊಂಡಿರಲಿಲ್ಲ. ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು ಆರೋಪಿಗಳನ್ನು ಬಂಧಿಸುವಲ್ಲಿ ಮೀನಾಮೇಷ ಎಣಿಸುತ್ತಿತ್ತು. ಇದೀಗ ಎರಡು ಮೂರು ದಿನಗಳ ಹಿಂದೆಯೇ ದೇಹವನ್ನು ಸುಟ್ಟು ಹಾಕಲಾಗಿದ್ದು ಇದೀಗ ಬಯಲಾಗಿದೆ.
30 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಬ್ರಾಹ್ಮಣರೊಬ್ಬರ ಕೊಲೆಯೊಂದು ನಡೆದಿತ್ತು. ಉಡುಪಿ ಮೂಲದವಾರಗಿದ್ದ ಅವರನ್ನು ಸ್ಥಳೀಯರು ಕೊಲೆ ಮಾಡಿದ್ದರು. ಇಂತಹ ಪ್ರಕರಣಗಳು ಪುನಃ ಮರುಕಳಿಸಿದ್ದು ಪ್ರವಾಸಿಗರು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
