ಹಣಗೆರೆ ಹುಂಡಿ ಎಣಿಕೆಯಲ್ಲಿ ಮೋಸ ಬಹಿರಂಗ

ಹಣಗೆರೆ : ಹೆಚ್ಚುವರಿ 77 ಸಾವಿರ ಹಣ ಪತ್ತೆ
ಬಿಗಿ ಕ್ರಮ ಅನುಸರಿಸಿದ ನೂತನ ತಹಶೀಲ್ದಾರ್
ಕೆನರಾ ಬ್ಯಾಂಕ್ ಇಂದ ಎಸ್.ಬಿಐಗೆ ಹಣ ಶಿಪ್ಟ್

ನಾಡಿನ ಭಾವೈಕ್ಯತೆ ಕೇಂದ್ರಗಳಲ್ಲಿ ಒಂದಾದ ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆಯಲ್ಲಿ ಮೋಸ ನಡೆದಿರುವುದು ಪತ್ತೆಯಾಗಿದೆ. ಶುಕ್ರವಾರ ನಡೆದ ಮರು ಎಣಿಕೆಯಲ್ಲಿ ಹೆಚ್ಚುವರಿ 77 ಸಾವಿರ ಹಣ ಸಿಕ್ಕಿದ್ದು ಕೃತ್ಯದ ಕುರಿತಂತೆ ತಹಶೀಲ್ದಾರ್ ಬಿಗಿ ಕ್ರಮ ಅನುಸರಿಸಿದ್ದಾರೆ.

ಗುರುವಾರ ಹಣ ಎಣಿಕೆಯಲ್ಲಿ ಮೋಸ ನಡೆಸಿದೆ ಎಂದು ಹಣಗೆರೆಯ ಆಡಳಿತ ಮಂಡಳಿ ತಹಶೀಲ್ದಾರ್ ಇವರಿಗೆ ದೂರು ಸಲ್ಲಿಸಿದ್ದರು. ದೂರು ಆದರಿಸಿ ಮೇಲ್ನೋಟಕ್ಕೆ ಹಣದ ಕಂತುಗಳನ್ನು ಎಣಿಸಿದಾಗ ಹೆಚ್ಚುವರಿ ನೋಟುಗಳು ಕಂಡು ಬಂದಿದ್ದವು. ಆದ್ದರಿಂದ ರಾತ್ರಿಯೇ ಹಣವನ್ನು ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇಡಲಾಗಿತ್ತು. ಬೆಳಿಗ್ಗೆ ತಹಶೀಲ್ದಾರ್, ಡಿವೈಎಸ್ಪಿ ಸಮ್ಮುಖದ ಬಿಗಿ ಬಂದೋಬಸ್ನಲ್ಲಿ ಹಣವನ್ನು ಹಣಗೆರೆಗೆ ಸಾಗಿಸಲಾಗಿದ್ದು ಮರು ಎಣಿಕೆ ಶುಕ್ರವಾರ ನಡೆದಿದೆ.

ಒಟ್ಟು 66 ಲಕ್ಷದ 4 ಸಾವಿರದ 950 ಹಣ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಂದಾಯವಾಗಿದೆ. ಹಣದ ಕಂತೆಯಲ್ಲಿ ಎಣಿಕೆ ಮಾಡದೆ ಹೆಚ್ಚುವರಿಯಾಗಿ ಉಳಿಸಿಟ್ಟಿದ್ದ 77,930 ರೂಪಾಯಿ ಹಣದ ಕೃತ್ಯ ಬಯಲಾಗಿದೆ. ಈ ಸಂಬಂಧ ತಹಶೀಲ್ದಾರ್ ತನಿಖೆ ಆರಂಭಿಸಿದ್ದು ಪ್ರಕರಣ ವಿವಾದಕ್ಕೆ ತಿರುಗಿದೆ. ಆಡಳಿತ ಮಂಡಳಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತಕರಿಗೆ ದೂರು ನೀಡಲು ನಿರ್ಧರಿಸಿದೆ. ಕೃತ್ಯಕ್ಕೆ ಸಹಕಾರ ನೀಡಿದ ಅಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸುತ್ತಿದ್ದು, ಕೆನರಾ ಬ್ಯಾಂಕ್ ನಲ್ಲಿದ್ದ ದೇವಸ್ಥಾನದ ಖಾತೆಯ ಬದಲು ಎಸ್ ಬಿಐಗೆ ಹಣ ವರ್ಗಾಯಿಸಲಾಗಿದೆ. ಹುಂಡಿಹಣ ಎಣಿಕೆ ಪ್ರಕರಣ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post