ಸಾರ್ವಜನಿಕರು, ವಾಹನ ಸವಾರರು ಎಚ್ಚರಿಕೆ !!!
ಸೀಕೆ, ಕಾವೇರಿ, ಬೈಲುಬಡಿಗೆ, ಕುಡುವಳ್ಳಿ, ಕುಚ್ಚಲು, ಮಳಗಾರು ಗ್ರಾಮದಲ್ಲಿ ಕಟ್ಟೆಚ್ಚರ
ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಿಗ್ಗೆ ಮುಡುಬದಲ್ಲಿ ಕಾಣಿಸಿಕೊಂಡಿದ್ದ ಆನೆ ಇಂದು ಕುಚ್ಚಲು, ಮಳಗಾರು ಬಳಿ ಕಾಣಿಸಿಕೊಂಡಿತ್ತು. ಶನಿವಾರ ರಾತ್ರಿ ಸೀಕೆ, ಕಾವೇರಿ, ಬೈಲುಬಡಿಗೆ, ಕುಡುವಳ್ಳಿ, ಮಳಗಾರು ಸಮೀಪ ಓಡಾಟ ಆರಂಭಿಸಿದ್ದು ವಾಹನ ಸವಾರರು ಎಚ್ಚರಿಕೆಯಿಂದ ಓಡಾಡಬೇಕಿದೆ.
ಅರಣ್ಯ ಇಲಾಖೆ ಆನೆ ಬಂದ ದಾರಿಯ ಮೂಲಕ ಭದ್ರಾ ಅಭಯಾರರಣ್ಯಕ್ಕೆ ಅಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ತೀರ್ಥಹಳ್ಳಿ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಸಂಚರಿಸುವ ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕಿದೆ. ಗ್ರಾಮೀಣ ಭಾಗದಲ್ಲಿ ಓಡಾಡುವ ಪ್ರತಿಯೊಬ್ಬರು ವಿನಾಕಾರಣ ಮನೆಯಿಂದ ಹೊರಗೆ ಹೋಗದಂತ ಕಟ್ಟೆಚ್ಚರ ನೀಡಲಾಗಿದೆ. ಆನೆ ಬಂದ ದಾರಿಯನ್ನು ಹುಡುಕುತ್ತಲಿದ್ದು ಯಾವುದೇ ಕಾರಣಕ್ಕೆ ಆನೆಗೆ ತೊಂದರೆ ನೀಡದಂತೆ ಸಾರ್ವಜನಿಕರಲ್ಲಿ ಅರಣ್ಯ ಇಲಾಖೆ ಮನವಿ ಮಾಡಿದೆ.
