ಮಾಜಿ ವಿಧಾನ ಪರಿಷತ್ ಸದಸ್ಯ
ತೀರ್ಥಹಳ್ಳಿ ಘನತೆ ಹೆಚ್ಚಿಸಿದ ಅಂತರಾಷ್ಟ್ರೀಯ ಸಹಕಾರಿ
ಹಿರಿಯ ಸಹಕಾರಿ, ಮಾಜಿ ವಿಧಾನ ಪರಿಷತ್ ಸದಸ್ಯ, ರಾಜ್ಯ ಭೂ ಬ್ಯಾಂಕ್ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಸಹಕಾರಿ ತರಬೇತಿ ಕೇಂದ್ರದ ಅಧ್ಯಕ್ಷ, ತೀರ್ಥಹಳ್ಳಿ ಪುರಂದರ ವೇದಿಕೆ ಸ್ಥಾಪಕ, ಇಫ್ಕೋ ಸಂಸ್ಥೆಯ ನಿರ್ದೇಶಕ, ಕೆನರಾ ಬ್ಯಾಂಕಿನ ಮಾಜಿ ನಿರ್ದೇಶಕ ಬಿ.ಎಸ್ ವಿಶ್ವನಾಥನ್ (89) ಭಾನುವಾರ ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೇಹಕ್ಕಲು ಸಮೀಪದ ಬಸರವಳ್ಳಿಯ ವಿಶ್ವನಾಥನ್ ಅವರು ಪತ್ನಿ ಶಾರದಾ, ಪುತ್ರ ಅವಿನಾಶ್ ಹಾಗೂ ಪುತ್ರಿ ಅರ್ಚನಾ ಅವರನ್ನು ಅಗಲಿದ್ದಾರೆ. ವಿಶ್ವನಾಥನ್ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅನಾರೋಗ್ಯಪೀಡಿತರಾಗಿದ್ದರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ವಿಶ್ವನಾಥನ್ ಅವರು ಸಮಾಜವಾದಿ ದುರೀಣ ಶಾಂತವೇರಿ ಗೋಪಾಲಗೌಡರ ವಿರುದ್ದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು. ಅದರೆ ಬಳಿಕ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ತೀರ್ಥಹಳ್ಳಿಯ ಪುರಂದರ ವೇದಿಕೆ ಸ್ಥಾಪಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.