ಡಿಎಸ್‌ಎಸ್‌ ತಾಲ್ಲೂಕು ಸಂಚಾಲಕರಾಗಿ ವರಲಕ್ಷ್ಮೀ ಬಿ. ಅವಿರೋಧ ಆಯ್ಕೆ

ಪ್ರೊ. ಮಹಾದೇವ್‌ ಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ
ಜಿಲ್ಲಾ ಸಂಘಟನಾ ಸಂಚಾಲಕಿಯಾಗಿ ಮಂಜುಳಾ ನಾಗೇಂದ್ರ ನೇಮಕ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ತಾಲ್ಲೂಕು ಸಂಚಾಲಕರಾಗಿ ಕುರುವಳ್ಳಿಯ ವರಲಕ್ಷ್ಮೀ ಬಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪರಿಶಿಷ್ಟ ನೌಕರರ ಒಕ್ಕೂಟದ ಅಧ್ಯಕ್ಷ ಪ್ರೊ.ಮಹಾದೇವ ಸ್ವಾಮಿ ಅಧ್ಯಕ್ಷತೆಯಲ್ಲಿ ತೀರ್ಥಹಳ್ಳಿ ಸಮತಿ ಪುನರಚನೆ ನಡೆಯಿತು.

ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕರಾಗಿ ಪಟ್ಟಣ ಪಂಚಾಯಿತಿ ಸದಸ್ಯೆ ಮಂಜುಳಾ ನಾಗೇಂದ್ರ, ಸಂಘಟನಾ ಸಂಚಾಲಕರಾಗಿ ಪೂರ್ಣೇಶ್‌ ಮಹಿಷಿ, ಕುರುವಳ್ಳಿ ಯಲ್ಲಪ್ಪ, ನಾಗೇಶ್‌ ನೊಣಬೂರು, ಖಜಾಂಚಿಯಾಗಿ ಮನೋಜ್ ಬಾಳಗಾರು, ಸದಸ್ಯರುಗಳಾಗಿ ನಾಗರಾಜ್‌ (ಕಂಬ್ಳೆ), ಅಣ್ಣಪ್ಪ, ರುದ್ರೇಶ್ ಕೋಟೆಗದ್ದೆ ನೇಮಕಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್.‌ ಹಾಲೇಶಪ್ಪ, ಸಂಘಟನಾ ಸಂಚಾಲಕರಾದ ಎಂ.ಆರ್.‌ ಶಿವಕುಮಾರ್‌, ಎ.ಡಿ. ಆನಂದಪ್ಪ, ಜಿಲ್ಲಾ ಮುಖಂಡರಾದ ಹುಣಸೋಡು ಶೇಷಪ್ಪ, ಕಾಶಿಪುರ್ ಗೋವಿಂದ‌, ಹಾರೋಗೊಳಿಗೆ ವಿಶ್ವನಾಥ‌, ಹಾಲೇಶ್ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post