ಕಲ್ಪವೃಕ್ಷ ಸೊಸೈಟಿಗೆ 13 ಲಕ್ಷ ರೂ ಲಾಭ

ಬಂಟರ ಭವನದಲ್ಲಿ ಸೆ.22ಕ್ಕೆ ಸರ್ವ ಸದಸ್ಯರ ಸಭೆ
ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷ ಇ.ಎಸ್. ಶ್ರೀಧರಮೂರ್ತಿ ಇರಗೋಡು
2015ರಲ್ಲಿ 448 ಷೇರುದಾರ ಸದಸ್ಯರಿಂದ 5 ಲಕ್ಷ ಬಂಡವಾಳದೊಂದಿಗೆ ಕಲ್ಪವೃಕ್ಷ ಪತ್ತಿನ ಸಹಕಾರ ಸಂಘ ಸ್ಥಾಪನೆ ಮಾಡಲಾಗಿದೆ. ಆರಂಭಿಕವಾಗಿ 4 ಲಕ್ಷ ಸಾಲ ನೀಡಿಕೊಂಡು ಬಂದಿದ್ದ ಸಂಘ ಹಾಲಿ 975 ಷೇರುದಾರರನ್ನು ಹೊಂದಿದೆ. 39 ಲಕ್ಷ ಠೇವಣಿ ಇದ್ದು 351 ಜನರಿಗೆ ಸಾಲ, 9 ಜನರಿಗೆ ಅಡಮಾನ ಸಾಲ ನೀಡಲಾಗಿದೆ. ಒಟ್ಟು 1,64,83,800 ಕೋಟಿ ಸಾಲ ವಿತರಿಸಿ 13,76,822 ಲಕ್ಷ ನಿವ್ವಳ ಲಾಭ ಪಡೆದಿದ್ದೇವೆ ಎಂದು ಅಧ್ಯಕ್ಷ ಇ.ಎಸ್. ಶ್ರೀಧರಮೂರ್ತಿ ಇರಗೋಡು ಹೇಳಿದರು.
10 ಲಕ್ಷ ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗಿದೆ. ಕಟ್ಟಡ ನಿಧಿಗಾಗಿ 15% ಅನುದಾನ ಸಂಗ್ರಹ ಮಾಡುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆಯ ಲಾಭ ತೀರಾ ಕಡಿಮೆ ಪ್ರಮಾಣಕ್ಕೆ ಇಳಿದಿದ್ದರೂ ಚೇತರಿಸಿಕೊಂಡು ಅಧಿಕ ಲಾಭದತ್ತ ಸಂಸ್ಥೆ ಮುನ್ನುಗ್ಗುತ್ತಿದೆ. ಶುಕ್ರವಾರ ಕೊಪ್ಪ ಸರ್ಕಲ್ ಬಂಟರ ಭವನದಲ್ಲಿ ಸಂಘದ ಸರ್ವ ಸದಸ್ಯರ ಸಭೆ ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದ್ದು ಷೇರುದಾರ ಸದಸ್ಯರು ಸಭೆಗೆ ಆಗಮಿಸುವಂತೆ ಶ್ರೀಧರಮೂರ್ತಿ ಮಂಗಳವಾರ ಕಲ್ಪವೃಕ್ಷ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಚಿಡುವ ಮಂಜುನಾಥ್, ನಿರ್ದೇಶಕರಾದ ಡಿ.ಲಕ್ಷ್ಮಣ್, ವಿಶಾಲ್ ಕುಮಾರ್, ಈಶ್ವರ್ ನಾಯ್ಕ್, ಕೆ.ಎಸ್. ನಾರಾಯಣಮೂರ್ತಿ, ಎಂ. ದಿನೇಶ್, ಕಾರ್ಯದರ್ಶಿ ಸೌಖ್ಯ ಹೆಚ್.ವೈ., ಸಹಾಯಕಿ ಅನನ್ಯ ಅಶೋಕ್ ಮುಂತಾದವರು ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post