ಯಕ್ಷಗಾನದ ಗೀಳು ಬಿಚ್ಚಿಟ್ಟ ಗೃಹಸಚಿವರು- Araga

ಯಕ್ಷಗಾನದಲ್ಲಿ ಮುಖ್ಯಮಂತ್ರಿಯಾದ ಆರಗ ಜ್ಞಾನೇಂದ್ರ
ನೂರಾರು ಯಕ್ಷಪ್ರಿಯರಿಗೆ ರಸದೌತಣ

ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೇಕೊಪ್ಪ ಯಕ್ಷರಂಗದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಭೀಷ್ಮಾರ್ಜುನ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ಯಕ್ಷಗಾನ ಪ್ರಿಯರು ರಸದೌತಣ ನೀಡಿತು.

ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಗಾನಸಿರಿಯಲ್ಲಿ ಮೂಡಿ ಬಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ. ರಮೇಶ್ ಆಚಾರ್ಯ ವಿರಚಿತ ಅಭಿನಂದನಾ ಪದ್ಯ ವಿಶೇಷವಾಗಿ ಪ್ರೇಕ್ಷಕರ ಮನತುಂಬುವಂತೆ ಮೂಡಿ ಬಂದಿದೆ.

ಗೃಹಸಚಿವರ ಸ್ವಭಾವ, ಶ್ರೇಷ್ಠತೆ, ಶುಭ ಹಾರೈಕೆ, ಜನಸಾಮಾನ್ಯರ ಪರವಾದ ಧ್ವನಿ ಮುಂತಾದ ವಿಷಯಗಳಿಂದ ಕೂಡಿರುವ ಯಕ್ಷಗಾನ ಪದ್ಯ ಗುಡ್ಡೇಕೊಪ್ಪದ ಶಾಲಾ ಆವರಣದ ಸುತ್ತ ಮೇಳೈಸಿತ್ತು. ಜನರು ಏಕಾಂತದಿಂದ ಕೇಳಿ ಸಿಳ್ಳೆ ಹಾಕಿ ಖುಷಿ ಪಟ್ಟರು.

ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯ, ರೋಹಿತ್‌ ಉಚ್ಚಿಲ, ಬಡಗು ಕು.ರಕ್ಷಾ ಹೆಗಡೆ, ಎನ್.ಜಿ.ಹೆಗಡೆ, ಶ್ರೀಕಾಂತ್‌ ಶೆಟ್ಟಿ ಅರ್ಥದಾರಿಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ. ಪ್ರಭಾಕರ ಜೋಷಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಕೆ.ರಮೇಶ್‌ ಆಚಾರ್ಯ, ಯಕ್ಷಶೀರೋಮಣಿ ಉಜಿರೆ ಅಶೋಕ್‌ ಭಟ್‌, ಯಕ್ಷಕವಿ ಪವನ್‌ ಕಿರಣಕೆರೆ ಭಾಗವಹಿಸಿದ್ದರು.

ಗೃಹಸಚಿವ ಆರಗ ಜ್ಞಾನೇಂದ್ರ ಅತಿಥಿಗಳಿಗೆ ಸನ್ಮಾನಿಸಿ ಮಾತನಾಡಿ, ಬಾಲ್ಯದಿಂದಲೂ ಯಕ್ಷಗಾನದ ಗೀಳು ನನಗೆ ಇತ್ತು. ಯಕ್ಷಗಾನ ನೋಡುವುದಕ್ಕಾಗಿ ತಂಡೋಪ ತಂಡವಾಗಿ ಹೋಗುತ್ತಿದ್ದೆವು. ಯಕ್ಷಗಾನದಲ್ಲಿ ಬಳಕೆಯಾಗುವ ಕನ್ನಡದ ಪದಗಳಿಗೆ ಎಷ್ಟೊಂದು ಅರ್ಥವಿದೆ. ಅಷ್ಟು ಸರಾಗವಾಗಿ ಸಲೀಸಾಗಿ ಕನ್ನಡವನ್ನು ಹೇಗೆ ಹೇಳಲು ಸಾಧ್ಯವಾಗುತ್ತದೆ ಎಂದು ಆಶ್ಚರ್ಯವಾಗುತ್ತದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಯಕ್ಷಗಾನ ತಾಳ ಮದ್ದಲೆ ಆಯೋಜನೆ ಇನ್ನಷ್ಟು ಸಂಭ್ರಮ ಹೆಚ್ಚಿಸಿದೆ. ಮತ್ತೊಮ್ಮೆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುವ ಸೌಭಾಗ್ಯ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅಭಿನಂದನಾ ಪದ್ಯ ಇಲ್ಲಿ ವೀಕ್ಷಿಸಿ

ಆರಗ ಜ್ಞಾನೇಂದ್ರರ ಕುರಿತು ಎ.ಕೆ. ರಮೇಶ್ ಆಚಾರ್ಯ ರಚಿಸಿರುವ ಯಕ್ಷಗಾನ ಪದ್ಯ

ಸಾರ ಸದ್ಗುಣರಾಲಿಸಿಯೇ ಆರಗ ಜ್ಞಾನೇಂದ್ರರೊಂದಿನಿಯೇ...

ಮೀರಿದುತ್ಸಾಹದಲಿ ಶ್ರಮಿಪರು ಗೃಹಸಚಿವರಾಗಿ...


ಮೆರೆಯುತಿಹ ಕರ್ನಾಟಕದೊಳ್ ಪರಶುರಾಮನ ಪಾಪ ಕಳೆದಿಹ ಪರಮ ಪಾವನ ನೆಲದಿ...

ಜನಿಸಿದರು ನಮ್ಮ ಜ್ಞಾನೇಂದ್ರ...


ತೀರ್ಥಹಳ್ಳಿಯ ಘನತೆ ಹೆಚ್ಚಿಸಿ ಆರ್ಥರೊಂದಿಗೆ ರಕ್ಷಣೆ ನೀಡುತಾ...

ಸ್ವಾರ್ಥವ ಮರೆತಿಹ ಯೋಗ್ಯತಾ ಪುರುಷ...

ನಮ್ಮಯ ಆರಗ ಜ್ಞಾನೇಂದ್ರ...


ಮುಂದೆ ಕರ್ನಾಟಕ ಮುಖ್ಯಮಂತ್ರಿಗಳಾಗಿ....

ಕುಂದು ಕೊರತೆಯ ನೀಗುತಾ...

ಚೆಂದದಿ ಬಳಿರಿ ಮುಂದು ಆನಂದದಿ...

ಇಂದು ನಿಮಗೆ ನಮನ...


ಯಕ್ಷಗಾನದ ಆಟ ಕೂಟಗಳ ನಿಷ್ಠೆಯಿಂದಲಿ ವೀಕ್ಷಿಸುತ್ತಾ...

ಶ್ರೇಷ್ಠ ಮನುಜರೇ ಮಾಗಿಸುವರು ನಮ್ಮ ಜ್ಞಾನೇಂದ್ರ....

ಆರಗ ಜ್ಞಾನೇಂದ್ರ...

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post