ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಗ್ರಾ.ಪಂ. ಚುನಾವಣೆಗೆ ಹಿಂದೂ ಸಂಗಮವೇ..
ಒಂದು ಕಾಲದಲ್ಲಿ
ಹಿಂದು ಸಮಾಜೋತ್ಸವಗಳು, ಹಿಂದೂ ಸಂಗಮಗಳು ಬಿಜೆಪಿ ಪರ ಸಂಸ್ಥೆಗಳಾದ ವಿಶ್ವಹಿಂದೂ ಪರಿಷದ್, ಭಜರಂಗದಳ
ಹೆಸರಿನಲ್ಲಿ ಆಯೋಜನೆಯಾಗುತ್ತಿತ್ತು.
ಆದರೆ ಇಂದು ಭಜರಂಗದಳ
ವಿಶ್ವಹಿಂದೂ ಪರಿಷತ್ ಹೆಸರಿನಲ್ಲಿ ಹಿಂದು ಸಮಾಜೋತ್ಸವಗಳನ್ನು ಆಯೋಜನೆ ಮಾಡಲಾಗುತ್ತಿಲ್ಲ, ಕಾರಣ ಬಿಜೆಪಿ
ಪರ ಸಂಘಟನೆಗಳ ಹೆಸರಿನಲ್ಲಿ ಆಯೋಜನೆಗೊಳ್ಳುವ ಕಾರ್ಯಕ್ರಮಗಳಿಗೆ ತಟಸ್ಥ ಮತದಾರರು, ವ್ಯವಹಾರಸ್ಥ ಹಿಂದೂಗಳು
ಭಾಗವಹಿಸುವುದಿಲ್ಲ. ತಟಸ್ಥವಾಗಿರುವ ಹಿಂದೂಗಳನ್ನು ಸೆಳೆಯಲು ಸಂಘಟನೆಗಳ ಹೆಸರನ್ನು ಕೈಬಿಡಲಾಗಿದೆ
ಎನ್ನಲಾಗುತ್ತಿದೆ.
ಇನ್ನೂ ಒಂದು ವಿಶೇಷತೆ
ಏನೆಂದರೆ ಮುಂಚೆ ವಿಧಾನಸಭಾ ಚುನಾವಣೆ ಸಮೀಪಿಸುವಾಗ ಹಿಂದೂ ಸಮಾಜೋತ್ಸವಗಳು ಆಯೋಜನೆಗೊಳ್ಳುತ್ತಿದ್ದವು.
ಆದರೆ ಈಗ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆ ಸಮೀಪಸಿದಾಗಲೂ ಹಿಂದೂ ಸಮಾಜೋತ್ಸವ ಆಯೋಜನೆಗೊಳ್ಳುತ್ತಿವೆ.
11 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವವರಿಗೆ ಗ್ರಾಮ ಪಂಚಾಯತಿಯಲ್ಲಿ ಮತ ಕೇಳಬೇಕಿದ್ದರೂ ಹಿಂದೂ ಸಮಾಜೋತ್ಸವ ನಡೆಸುವ ಅನಿವಾರ್ಯತೆ ಎದುರಾಗಿದೆ, ಅದೂ RSS 100 ಹೆಸರಿನಲ್ಲಿ...!. ಇದೊಂದು ಬಿಜೆಪಿ ಪಕ್ಷದ ಇಂದಿನ ವಿಪರ್ಯಾಸ ಎಂದು ಯುವ ಕಾಂಗ್ರೆಸ್ ಮುಖಂಡರಾದ ಆದರ್ಶ ಹುಂಚದಕಟ್ಟೆ, ಪೂರ್ಣೇಶ್ ಕೆಳೆಕೆರೆ, ಶ್ರೇಯಸ್ ರಾವ್, ಸೀಬಿನಕೆರೆ, ಅಮರನಾಥ್ ಶೆಟ್ಟಿ, ಅಶ್ವಲ್ ಗೌಡ, ರವೀಶ್ ಹೊಸ್ಕೆರೆ ಪ್ರಶ್ನಿಸಿದ್ದಾರೆ.
