ದೇವಾ... ಸಂಕಟ ದೂರ ಮಾಡೋ...!

ಕಿಮ್ಮನೆ ಟೆಂಪಲ್ ರನ್...!
ಬೆಳಗೆದ್ದು ಯಾವ್ಯಾವ ದೇವರ ನೆನೆಯಲಿ...
ಮಠ ಮಾನ್ಯಗಳ ಕಡಗೆ ಮುಖ ಮಾಡುತ್ತಿರುವ ಮಾಜಿ ಸಚಿವ

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸರಳ, ಸಜ್ಜನ ರಾಜಕಾರಣಿ ಎಂದೇ ಪ್ರಸಿದ್ಧರಾದವರು. ನಂಬಿಕೆಯ ವಿಚಾರಗಳಿಗೆ ಬಂದರೆ ಸ್ವಲ್ಪ ಮಟ್ಟಿನ ಪ್ರಗತಿಪರ ಆಲೋಚನೆ ಹೊಂದಿದ್ದಾರೆ ಎನ್ನಬಹುದು. ಮೂಡನಂಬಿಕೆಗಳನ್ನು ಪ್ರಶ್ನಿಸುವ ಗುಣ ಕರಗತ ಮಾಡಿಕೊಂಡಿದ್ದಾರೆ. ಆದರೆ ಈಚೆಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಯಾಕೋ ತುಸು ಹೆಚ್ಚಾಗಿಯೇ ದೈಯ, ದೇವರು, ಮಠಾಧೀಶರುಗಳನ್ನು ಭೇಟಿ ಮಾಡಲು ಆರಂಭಿಸಿದ್ದು ಚುನಾವಣಾ ಸಂದರ್ಭದಲ್ಲಿ ಭಕ್ತಿ ಇದ್ದಕ್ಕಿದ್ದ ಹಾಗೆ ಬಂದಿತೋ ಎಂಬ ಅನುಮಾನ ವಿರೋಧ ಪಕ್ಷಗಳು ಮತ್ತು ಸ್ವಪಕ್ಷದವರಲ್ಲೂ ಆರಂಭವಾಗಿದೆ.

ಇತ್ತೀಚೆಗೆ ತೀರ್ಥಹಳ್ಳಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳುನಾಡಿನ ದೈವ ಪರಂಪರೆಗೆ ಸೇರಿದ ಗುಳಿಗ ದೈವದ ಹುಟ್ಟು, ಬದುಕು, ನೆಲೆಗಳನ್ನು ಅವಲಂಬಿಸಿ ರೂಪುಗೊಂಡಿರುವ "ಶಿವದೂತೆ ಗುಳಿಗೆ" ನಾಟಕ ಪ್ರದರ್ಶನ ಕಿಮ್ಮನೆ ಸಾರಥ್ಯದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಇದರ ಬೆನ್ನಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಕೂಡ ಕಿಮ್ಮನೆಯವರನ್ನು ಟೀಕಿಸುವ ಭರದಲ್ಲಿ ಗುಳಿಗ ದೈವವನ್ನು ಜಾಪಾಳ್‌ ಮಾತ್ರೆಗೆ ಹೋಲಿಸಿದರು ಎಂಬ ಸುದ್ದಿ ಕ್ಷಣ ಮಾತ್ರದಲ್ಲಿ ಹರಡಿ ವಿವಾದಕ್ಕೆ ಗುರಿಯಾಗಿತ್ತು. ಈ ನಾಟಕ ಪ್ರದರ್ಶನಗೊಂಡ ಬಳಿಕ ಸಂಭವಿಸುತ್ತಿರುವ ಕ್ಷಿಪ್ರ ವಿದ್ಯಮಾನಗಳು ಕಿಮ್ಮನೆಗೆ ದೇವರು ಕೈ ಹಿಡಿದಿದ್ದಾನೆ ಎಂಬ ನಂಬಿಕೆ ಮೂಡಿ ಟೆಂಪಲ್‌ ರನ್‌ ಮಾಡಲು ಧೈರ್ಯ ಹೆಚ್ಚಾದಂತಿದೆ.

ಶಿವದೂತೆ ಗುಳಿಗೆ ನಾಟದ ಯಶಸ್ಸಿನ ನಂತರ ತೀರ್ಥಹಳ್ಳಿ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಮಠಗಳು ಹಾಗೂ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಗುರುಗಳ ಆಶೀರ್ವಾದ ಪಡೆಯುತ್ತಿದ್ದಾರೆ. ಅಲ್ಲದೇ ಧರ್ಮಸ್ಥಳಕ್ಕೂ ಭೇಟಿ ನೀಡಿ ರಾಜ್ಯಸಭಾ ಸದಸ್ಯರಾದ ಡಿ. ವೀರೇಂದ್ರ ಹೆಗಡೆ ಆಶೀರ್ವಾದ ಪಡೆದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಕಡೆಗೂ ತೆರಳಿದ್ದು ನಾಗ ದೋಷ ಮತ್ತೊಮ್ಮೆ ಪರಿಹರಿಸಿಕೊಂಡಂತಿದೆ. ಒಟ್ಟಿನಲ್ಲಿ ಗೃಹಸಚಿವರನ್ನು ಸೋಲಿಸಲೆಂದೆ ದೇವರುಗಳಲ್ಲಿ ಸ್ಟ್ರಾಂಗ್ ಆಗಿ ಪ್ರಾರ್ಥನೆ ಸಲ್ಲಿಕೆ ಭರ್ಜರಿಯಾಗಿ ನಡೆಯುತ್ತಿದೆ.

ಇನ್ನೊಂದು ಕಡೆಯಲ್ಲಿ ವಿರೋಧ ಪಕ್ಷದ ಮುಖಂಡರು, ಕಾರ್ಯಕರ್ತರು ಇದೇನಾಯ್ತು. ಇದಕ್ಕೆ ಕೌಂಟರ್‌ ಕೊಡುವುದು ಹೇಗೆಂಬ ತಲೆಬಿಸಿಗೆ ಸಿಲುಕಿದಂತಿದೆ. ಅಲ್ಲದೇ ದೇವರ ಹೆಸರನ್ನು ಹೇಳಿದರೆ ಹರಿಹಾಯುತ್ತಿದ್ದ ಕಿಮ್ಮನೆ ಇದ್ದಕ್ಕಿದ್ದಂತೆ ದೇವಸ್ತಾನಗಳ ಕಡೆ ಮುಖಮಾಡಿದ್ದಾರೆ. ಅಲ್ಲದೇ ಆರಗ ಜ್ಞಾನೇಂದ್ರರ ಬಾಯಿ ತಪ್ಪಿದ ಒಂದು ಮಾತನ್ನು ಹಿಡಿದುಕೊಂಡು ವಿವಾದ ಜೀವಂತ ಇಡಲು ಪ್ರಯತ್ನಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post