ಮಲೆನಾಡಿಗೆ ಅರಣ್ಯ ಕಾಯ್ದೆ ಕಂಟಕವಾಗಿದೆ

25 ಕೋಟಿ ವೆಚ್ಚದಲ್ಲಿ ಕೋಣಂದೂರಿಗೆ ಚತುಷ್ಪಥ ರಸ್ತೆ
ಕೋಣಂದೂರು ಆಸ್ಪತ್ರೆ ಮೇಲ್ದರ್ಜೆಗೆ
ಆರಕ್ಷಕ ವಸತಿ ಗೃಹಕ್ಕೆ ಅಡಿಗಲ್ಲು

ತೀರ್ಥಹಳ್ಳಿ, ಮಲೆನಾಡು ಭಾಗದ ರೈತರು, ನೆಲವಾಸಿಗಳಿಂದ ಕಾಡು ಉಳಿದೆ. ಅರಣ್ಯ ಇಲಾಖೆ ಕಾಯ್ದೆಯ ಗೊಂದಲಗಳಿಂದ ಕಾಡು ಹಾಳಾಗುತ್ತಿದೆ. ಮಲೆನಾಡಿಗೆ ಅರಣ್ಯ ಕಾಯ್ದೆ ಕಂಟಕವಾಗುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಕೋಣಂದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಹಿಂದೆ ಗೃಹಖಾತೆ ನಿರ್ವಹಿಸಿದ ಸಚಿವರ ಅವಧಿಯಲ್ಲಿ ವರ್ಷಕ್ಕೆ ಆರೇಳು ಪೊಲೀಸ್‌ ಠಾಣೆಗಳು ಮಾತ್ರ ನಿರ್ಮಾಣವಾಗಿತ್ತು. ಕೇವಲ ಒಂದೂ ಮುಕ್ಕಾಲು ವರ್ಷದಲ್ಲಿ 200 ಕೋಟಿ ವೆಚ್ಚದಲ್ಲಿ 107 ಹೊಸ ಠಾಣೆಗಳನ್ನು ನಿರ್ಮಾಣ ಮಾಡುವ ಸಾಧನೆ ಮಾಡಿದ್ದೇನೆ. ವಿಧಿ ವಿಜ್ಞಾನ ಪ್ರಯೋಗಾಲಗಳು ಇಲ್ಲದೆ ರಾಜ್ಯದಲ್ಲಿ ವೇಗವಾಗಿ ಕಳ್ಳರನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ರಿಪೋರ್ಟ್‌ ಪಡೆಯಲು ಬೇರೆ ರಾಜ್ಯಗಳನ್ನು ಅವಲಂಭಿಸಿದ್ದೆವು. ಆದರೆ ಇದೀಗ ಹುಬ್ಬಳಿ, ಬಳ್ಳಾರಿಯಲ್ಲಿ ಲ್ಯಾಬ್‌ ಸ್ಥಾಪನೆಗೊಂಡಿದೆ. ಮುಂದೆ ಶಿವಮೊಗ್ಗ ಮತ್ತು ತುಮಕೂರಿನಲ್ಲೂ ಸ್ಥಾಪನೆಗೊಳ್ಳಲಿದೆ. ಜೊತೆಗೆ ಫಾರೆನ್ಸಿಕ್‌ ಯೂನಿವರ್ಸಿಟಿ ನಿರ್ಮಾಣವಾಗುತ್ತಿದ್ದು ಪೊಲೀಸರಿಗೆ ಹೆಚ್ಚು ಶಕ್ತಿ ನೀಡಿದ್ದೇನೆ. ಪ್ರಕರಣ ಬೇಗ ಇತ್ಯರ್ಥಗೊಳ್ಳಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.

ಭಾರತದಲ್ಲಿ ಕಾನೂನಿನಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಷ್ಟ್ರಪತಿ ತಪ್ಪು ಮಾಡಿ ಸಾಕ್ಷ್ಯಾಧಾರ ಲಭಿಸಿದರು ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ದೇಶದಲ್ಲೇ ಮೊದಲು ಎಂಬಂತೆ ಪಿಎಸ್‌ಐ ಹಗರಣದಲ್ಲಿ ಐಪಿಎಸ್‌ ದರ್ಜೆಯ ಅಧಿಕಾರಿಯನ್ನು ಒಳಗೆ ಕಳುಹಿಸುವ ಧೈರ್ಯ ತೋರಿದ್ದೇನೆ. ಅರ್ಜಿಯೇ ಹಾಕದೆ ಶಿಕ್ಷಕರ ನೇಮಕಾತಿ ನಡೆದಿತ್ತು. ಮಾಜಿ ಶಿಕ್ಷಣ ಸಚಿವರು ಪ್ರಕರಣ ಮುಚ್ಚಿಟ್ಟು ಹೊರಗೆ ಬಂದಿದ್ದಾರೆ. ನಾನು ಶಿಕ್ಷಕರ ಹಗರಣ ತನಿಖೆ ಮಾಡಿದೆ ಭಾಗಿಯಾಗಿದ್ದ 62 ಜನರನ್ನು ಒಳಗೆ ಕಳುಹಿಸಿದ್ದೇನೆ ಎಂದರು.

 ಅಡಿಕೆ ಮಾರುಕಟ್ಟೆಯ ಧಾರಣೆ ಕಾಪಾಡಲು 90ರ ದಶಕದಿಂದಲೂ ಹೋರಾಟ ಮಾಡುತ್ತಿದ್ದೇನೆ. ಅಡಿಕೆ ಧಾರಣೆ ಸುಧಾರಣೆಗೆ ಬಂದಿದ್ದರಿಂದ ಮಲೆನಾಡಿಗರ ಜೀವನ ಶೈಲಿ ಬದಲಾಗಿದೆ. ವಿಶ್ವಾಸದ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಡಿಕೆ ಟಾಸ್ಕ್‌ಪೋರ್ಸ್‌ ಮೂಲಕ ಅಡಿಕೆ ಆಮದು ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದೇನೆ. ವಿದೇಶಿ ಅಡಿಕೆ ಆಮದಿಗೆ ವಿಪರೀತ ನಿಯಮಗಳನ್ನು ಜಾರಿಗೊಳಿಸದ ಫಲವಾಗಿ ಅಡಿಕೆ ಆಮದು 12 ಸಾವಿರ ಮೆಟ್ರಿಕ್‌ ಟನ್‌ನಿಂದ ಒಂದು ಸಾವಿರ ಮೆಟ್ರಿಕ್‌ ಟನ್‌ಗೆ ಇಳಿಮುಖವಾಗಿದೆ. ಕೇವಲ ಕೋಣಂದೂರು ಅಭಿವೃದ್ಧಿಗೆ ಮಾತ್ರ 90 ಕೋಟಿ ಅನುದಾನ ತಂದಿದ್ದೇನೆ. 4.35 ಲಕ್ಷ ಕೋಟಿ ವೆಚ್ಚದಲ್ಲಿ ಕೋಣಂದೂರಿಲ್ಲಿ 12 ಆರಕ್ಷಕ ವಸತಿ ಗೃಹ ನಿರ್ಮಾಣವಾಗಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕೋಣಂದೂರು ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಅನ್ನಪೂರ್ಣ ಗುಡ್ಡೇಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸೂರ್ಯಕಲಾ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅಪೂರ್ವ ಶರಧಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಮಂಜುನಾಥ್, ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ್,  ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಬೂಮರೆಡ್ಡಿ , ಮುಖ್ಯ ಇಂಜಿನಿಯರ್ ಬಿ.ಟಿ. ಕಾಂತರಾಜ್, ಡಿವೈಎಸ್ಪಿ ಗಜಾನನ ಸುತಾರ್, ತಾಲ್ಲೂಕು ವೈದ್ಯಾಧಿಕಾರಿ ನಟರಾಜ್, ವೈದ್ಯಾಧಿಕಾರಿ ಮಂಜುನಾಥ್ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post