ಸಾಲಬಾಧೆ ಸಾವಿಗೆ ಕಾರಣವಾಯಿತೇ..?
ದಶಕದ ಹಿಂದೆಯೇ ಕಂಪ್ಯೂಟರ್ ಸೇಲ್ಸ್ ಅಂಡ್ ಸರ್ವೀಸ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಯುವಕ
ತೀರ್ಥಹಳ್ಳಿ ಪಟ್ಟಣದಲ್ಲಿ ಈಗ ಚಾಲ್ತಿಯಲ್ಲಿರುವ ಎಲ್ಲಾ ಕಂಪ್ಯೂಟರ್ ಹಾಗೂ ಸಿಸಿಟಿವಿ ಸೇವೆಗಳು
ಆರಂಭಗೊಳ್ಳುವ ಮೊದಲೇ ಅದನ್ನು ಪ್ರಾರಂಭಿಸಿದಲ್ಲದೇ ಸಾಕಷ್ಟು ಹೆಸರು ಮಾಡಿದ್ದ ಶ್ರೀಪತಿ (37) ಸೊಪ್ಪುಗುಡ್ಡೆಯ
ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಂಪ್ಯೂಟರ್ ಸರ್ವೀಸ್ ಜೊತೆಗೆ ಸಮಾಜ ಸೇವೆಯಲ್ಲೂ
ಮುಂದಿದ್ದ ಶ್ರೀಪತಿ ವ್ಯವಹಾರಿಕವಾಗಿ ಅಂದುಕೊಂಡ ಮಟ್ಟನ ಯಶಸ್ಸು ಸಾಧಿಸಿಲ್ಲ. ಅಲ್ಲದೇ ಈಗ ಆ ಉದ್ಯಮದಲ್ಲಿ
ಹೆಚ್ಚಿನ ಪೈಪೋಟಿ, ವೈಯಕ್ತಿಕ ಸಮಸ್ಯೆಗಳ ಕಾರಣ ಅದರಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗದೇ ಇತ್ತೀಚೆಗೆ
ಖಿನ್ನತೆಗೆ ಒಳಗಾಗಿದ್ದರೂ ಎನ್ನಲಾಗಿದೆ. ಶ್ರೀಪತಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
