ಮಾನವೀಯತೆ ಎತ್ತಿ ಹಿಡಿದ ಹುಸೇನ್‌ ಮೆಹಬೂಬ್‌

ಜೀವ ಕಳೆದುಕೊಳ್ಳುತ್ತಿದ್ದ 50ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳ ಪಾಲಿನ ಆಪತ್ಬಾಂದವ

ಈ ಚಿತ್ರದಲ್ಲಿರುವ ಯುವಕನ ಹೆಸರು ಹುಸೇನ್‌ ಮೆಹಬೂಬ್‌. ಸದ್ಯ ಈತ ಇಡೀ ದೇಶದಾದ್ಯಂತ ಸುದ್ದಿಯಾಗಿದ್ದಾನೆ. ಆದಕ್ಕೆ ಕಾರಣ ಗುಜರಾತಿನ ಮೋರ್ಬಿ ತೂಗು ಸೇತುವೆ ದುರಂತ.

ಹಣಬಾಕ ಅನಾನುಭವಿ ಓರೆವಾ ಕಂಪನಿ ರಿಪೇರಿ ಹಾಗೂ ನಿರ್ವಹಣ ಗುತ್ತಿಗೆಯನ್ನು ಪಡೆದಿತ್ತು ಎಂದು ಹೇಳಲಾದ ಈ ನತದೃಷ್ಟ ಸೇತುವೆಯ ಮೇಲೆ ಅಂದು ಮುನ್ನೂರಕ್ಕೂ ಹೆಚ್ಚು ಮಂದಿ ತೂಗು ಸೇತುವೆ ಮೇಲೆ ನಿಂತು ನದಿಯ ಸೌಂದರ್ಯವನ್ನು ಸವಿಯುತ್ತಿದ್ದರು. ಕ್ಷಣ ಮಾತ್ರದಲ್ಲಿ ಸೇತುವೆ ಕುಸಿದು ಅದರಲ್ಲಿ ಬಹುತೇಕ ಮಂದಿ ನೀರು ಪಾಲಾಗಿದ್ದರು. ಈಜು ಗೊತ್ತಿದ್ದವರು ದಡ ಸೇರಿದರೆ ಹೆಂಗಸರು, ಮಕ್ಕಳು, ವಯಸ್ಸಾದವರು ಸೇರಿದಂತೆ ಈಜುಬಾರದ 136ಕ್ಕೂ ಹೆಚ್ಚು ಮಂದಿ ಬಲಿಯಾಗಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಏಕಾಂಗಿಯಾಗಿ 50ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ಈ ಯುವಕ ರಕ್ಷಿಸಿದ್ದಾನೆ. ಆ ಮೂಲಕ ಎಲ್ಲಕ್ಕಿಂತಲೂ ಮನುಷ್ಯ ಧರ್ಮ ದೊಡ್ಡದು ಎಂದು ಸಾರಿದ್ದಾನೆ.

ಮತಾಂದ ಹಿಂದುಗಳು ಅಮಾಯಕ ಮುಸ್ಲಿಂ ಗುರಿಯಾಗಿಸಿ, ಮತಾಂದ ಮುಸ್ಲಿಂಮರು ಅಮಾಯಕ ಹಿಂದುಗಳನ್ನು ಕೊಲ್ಲಬೇಕೆಂದು ಕೂಗಾಡುತ್ತಿರುವ ಈಗಿನ ಕಾಲಘಟ್ಟದಲ್ಲಿ ಹುಸೇನ್‌ ಮೆಹಬೂಬ್‌ ಒಬ್ಬ ಮನುಷ್ಯನಾಗಿ ಮನುಷ್ಯರನ್ನು ಉಳಿಸುವುದು ತನ್ನ ಜವಾಬ್ದಾರಿ ಎಂದು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿರುವುದು ನಿಜವಾದ ಭಾರತ ಹೇಗಿತ್ತು ಮತ್ತು ಹೇಗಿರಬೇಕು ಎಂಬುದಕ್ಕೆ ಅಮೂಲ್ಯ ಉದಾಹರಣೆಯಂತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post