ಯಶಸ್ವಿ 6ನೇ ವರ್ಷಕ್ಕೆ ಪಾದಾರ್ಪಣೆ
ಕೊರೋನಾದಲ್ಲಿ ಜೀವ ಕಾಪಾಡಿದ ಉಸಿರು ಟೀಂ
ರಿಯಾಯಿತಿ ಮೆಡಿಸಿನ್ ಜೊತೆ ವೈದ್ಯಕೀಯ ಸೌಲಭ್ಯ
5 ವರ್ಷಗಳು ಯಶಸ್ವಿಗೊಳಿಸಲು ಹೆಗಲು ನೀಡಿದವರಿಗೆ, ಗ್ರಾಹಕರಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಪ್ರೇಮ್ ಯಡೂರು ಮತ್ತು ಕವಿರಾಜ್ ಅಭಿನಂದನೆ ಸಲ್ಲಿಸಿದ್ದಾರೆ. ಯಡೂರು ಮೆಡಿಕಲ್ಸ್‌ನ ಎಲ್ಲಾ ಕೆಲಸಗಳಿಗೂ ಸಹಕರಿಸುತ್ತಿರುವ ಸಿಬ್ಬಂದಿಗಳಾದ ರಜನಿ ಜೈಕುಮಾರ್, ಭರತ್ ಕೆ ಹೂಗಾರ್, ಕೆ.ಕೆ. ಸುಮಂತ್, ಅಕ್ಷಯ್ ಸುಳುಗೋಡು, ಅಕ್ಷರ ಕೊಳವಾಡಿ ಅವರು ಸೇವೆಯನ್ನು ಪ್ರೇಮ್ ಯಡೂರು ಸ್ಮರಿಸಿದ್ದಾರೆ.
ಉದ್ಯಮ ಆರಂಭ ಮಾಡುವುದು ದೊಡ್ಡ ಕಷ್ಟದ ಕೆಲಸ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ಉದ್ಯಮ ಆರಂಭಿಸುವ ಮೊದಲು ಅದರ ಹಿನ್ನೆಲೆ ಮತ್ತು ಮುನ್ನಲೆಗಳನ್ನು ಅರಿತುಕೊಂಡು ಸ್ಥಾಪನೆ ಮಾಡಬೇಕಾಗುತ್ತದೆ. ಹೀಗೆ ಸ್ಥಾಪನೆ ಮಾಡಿದ ಮೇಲೆ ಸಾಲಾಗಿ ಆಗಮಿಸುವ ಸವಾಲು ಪರಿಹರಿಸುವುದು ಕಷ್ಟದ ಕೆಲಸ. ಎಲ್ಲವನ್ನು ಎದುರಿಸಿ ನಿಂತು ಹೊಸ ವಿಚಾರಗಳಿಂದ ಗ್ರಾಹಕರನ್ನು ತಲುಪುವ ಹೊತ್ತಿಗೆ ಬಹಳಷ್ಟು ಸಮಯ ಕಳೆದು ಹೋಗಿರುತ್ತದೆ.
ಇಂತಹದ್ದೇ ಒಂದು ಸವಾಲಿನ ಕೆಲಸದಲ್ಲಿ ತಲ್ಲಿನರಾಗಿದ್ದ ಇಬ್ಬರು ಯುವ ಪ್ರತಿಭೆಗಳಿಂದ ಮೂಡಿ ಬಂದ ಸಂಸ್ಥೆಯೇ ಯಡೂರು ಮೆಡಿಕಲ್ಸ್. 5 ವರ್ಷಗಳ ಹಿಂದೆ ಆರಂಭವಾದ “ಯಡೂರು ಮೆಡಿಕಲ್ಸ್” ಕೇವಲ ಉದ್ಯಮವಾಗಿ ರೂಪುಗೊಳ್ಳಲಿಲ್ಲ. ಸಂಕಷ್ಟ ಎಂದು ಬಂದವರ ಬೆನ್ನು ತಟ್ಟಿ ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಚಲನಚಿತ್ರ ಗೀತೆ ರಚನೆಕಾರ ಕವಿರಾಜ್ ಮತ್ತು ಯುವ ಸಂಘಟಕ ಪ್ರೇಮ್ ಯಡೂರು ಸಾರಥ್ಯದಲ್ಲಿ ನಡೆಯುತ್ತಿರುವ ಯಡೂರು ಮೆಡಿಕಲ್ಸ್ ಯಶಸ್ವಿಯಾಗಿ 5 ವರ್ಷ ಪೂರೈಸಿ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಜೊತೆಗೆ ತನ್ನನ್ನು ನಂಬಿದವರ ಕೈ ಹಿಡಿದು ಮೇಲೆತ್ತುವಲ್ಲಿ ಯಶಸ್ವಿಯಾಗಿದೆ.
ವಿಶ್ವವನ್ನೇ ಪೀಡಿಸಿದ ಕೊರೋನಾ ಎಲ್ಲಾ ಕ್ಷೇತ್ರಕ್ಕೂ ಘಾಸಿಯುಂಟು ಮಾಡಿತ್ತು. ಆ ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸುವ ಸವಾಲನ್ನು ಅತ್ಯಂತ ಪ್ರಾಮಾಣಿಕವಾಗಿ ಯಡೂರು ಮೆಡಿಕಲ್ಸ್ ಮಾಡಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಪ್ರತಿಯೊಬ್ಬ ಗ್ರಾಹಕರ ಮನೆಗೆ ತೆರಳಿ ಔಷಧಗಳನ್ನು ಸಮರ್ಪಕವಾಗಿ ವಿತರಿಸುವ ಮೂಲಕ ಕೊರೋನಾ ಸಂದರ್ಭ ಉಚಿತ ಮಾಸ್ಕ್ ಹಂಚುವ ಜೊತೆಗೆ ಜೀವ ರಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಕವಿರಾಜ್ ಉಸಿರು ತಂಡ ಕಟ್ಟಿದರೆ. ತೀರ್ಥಹಳ್ಳಿಯಲ್ಲಿ ಯಡೂರು ಮೆಡಿಕಲ್ಸ್ ಟೀಮ್ ಉಸಿರು ತೀರ್ಥಹಳ್ಳಿ ಜೊತೆ ಕಾರ್ಯ ನಿರ್ವಹಿಸಿ ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದ ಕೊರೋನಾ ಪೀಡಿತರಿಗೆ ಉಚಿತ ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಿಸಿ ಜನರಿಂದ ಮೆಚ್ಚುಗೆ ಪಡೆದಿದ್ದಾರೆ.
ವಿಶೇಷ ಚೇತನರಿಗೆ 15% ಆಫ್
ವಿಶೇಷ ಎಂಬಂತೆ ಯಡೂರು ಮೆಡಿಕಲ್ಸ್ ಖಾಯಂ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುವ ಜೊತೆಗೆ ವಿಶೇಷ ಚೇತನರಿಗೆ ಶೇಕಡಾ 15 ರಷ್ಟು ರಿಯಾಯಿತಿಯ ಔಷಧಗಳನ್ನು ವಿತರಿಸುತ್ತಿದ್ದಾರೆ.
ಮೆಡಿಕಲ್‌ನಲ್ಲೇ ವೈದ್ಯರ ಸೌಲಭ್ಯ
ತಾಲ್ಲೂಕಿನಲ್ಲಿ ಎಲ್ಲೂ ಸಿಗದ ಕೆಲವು ಸೇವೆಗಳು ಯಡೂರು ಮೆಡಿಕಲ್ಸ್‌ನಲ್ಲಿ ಲಭ್ಯವಿದೆ. ಮಣಿಪಾಲದಿಂದ ತಿಂಗಳಿಗೆ ಎರಡು ಬಾರಿ ಚರ್ಮ ರೋಗ ವೈದ್ಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಹಾಗೇ ಬೆಂಗಳೂರಿನಿಂದ ಫೋರ್ಟಿಸ್ ಹಾಸ್ಪಿಟಲ್ ನಲ್ಲಿ ಕಾರ್ಯ ನಿರ್ವಹಿಸಿದ ಖ್ಯಾತ ಮೂಳೆ ತಜ್ಞರನ್ನು ತಿಂಗಳಿಗೆ ಎರಡು ಬಾರೀ ಕರೆಸಲು ತೀರ್ಮಾನಿಸಿದೆ. ಈ ಸೇವೆ ನವೆಂಬರ್ 12ರಿಂದ ಶುಭಾರಂಭಗೊಳ್ಳಲಿದೆ. ಅಲ್ಲದೇ ಇನ್ನಿತರ ವಿಶೇಷ ಸೌಲಭ್ಯ ಒದಗಿಸಲು ಯಡೂರು ಮೆಡಿಕಲ್ಸ್ ಸಜ್ಜಾಗುತ್ತಿದೆ.
ತುರ್ತು ಸೇವೆಗೆ ರಕ್ತದಾನ
ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ಉತ್ಸಾಹಿ ಯುವಪಡೆಯ ಮೂಲಕ ರಕ್ತದಾನಕ್ಕೆ ಪ್ರೋತ್ಸಾಹಿಸುವ ಜೊತೆಗೆ ತಮ್ಮದೇ ಆತ್ಮೀಯ ವಲಯ ಮತ್ತು ದಾನಿಗಳ ನೆರವಿನಿಂದ ರಕ್ತಗಳನ್ನು ಸಂಗ್ರಹಿಸುವ ಸಾಮಾಜಿಕ ಕಳಕಳಿಯ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. ಇದರಿಂದಾಗಿ ಹೊಸ ಯುವಕರು ಕೂಡ ರಕ್ತದಾನದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡುತ್ತಿದ್ದಾರೆ.
ಯುವಕರಿಗೆ ಉದ್ಯೋಗ ಮಾರ್ಗದರ್ಶನ
ಶಿಕ್ಷಣ ಮುಗಿಸಿ ಅಥವಾ ಮಧ್ಯೆ ಓದಲು ಬಿಟ್ಟ ಯುವಕರನ್ನು ಮುನ್ನಡೆಸುವ ಉದ್ದೇಶದಿಂದ ಉದ್ಯೋಗ ಮಾಹಿತಿಗಳನ್ನು ನೀಡುತ್ತಿದ್ದಾರೆ. “ಸ್ವಾವಲಂಬಿ” ವಾಟ್ಸಪ್ ಗ್ರೂಪ್ ಮೂಲಕ ಏಕಕಾಲದಲ್ಲಿ ಉದ್ಯೋಗ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದು ಅರ್ಹರಿಗೆ ಅವಕಾಶ ಒದಗಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಅಲ್ಲದೇ ಬೆಂಗಳೂರು, ಮಂಗಳೂರಿನ ಸ್ನೇಹಿತರೊಂದಿಗೆ ಮಾತನಾಡಿ ಅಲ್ಲಿ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮೆಡಿಕಲ್‌ನ ಸಾಮಾಜಿಕ ಬದ್ದತೆಯನ್ನು ಎತ್ತಿ ಹಿಡಿಯುತ್ತಿದೆ.


