ರಂಜದಕಟ್ಟೆ ಶ್ರೀ ಚಾಮುಂಡೇಶ್ವರಿ, ಶ್ರೀ ಹೊನ್ನತ್ತಮ್ಮ, ಶ್ರೀ ಗುಳ್ಳೆಮಾರಿಯಮ್ಮ ದೇವಾಲಯದಲ್ಲಿ ನಾಳೆ ಸೆಪ್ಟೆಂಬರ್ 5 ರಂದು ಬನ್ನಿ ಪೂಜೆ, ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನವರಾತ್ರಿ ಪ್ರಯುಕ್ತ ಏರ್ಪಡಿಸಲಾಗಿದೆ. ದೇವರುಗಳ ಪಲ್ಲಕ್ಕಿಯು ಸಂಜೆ 4ಗಂಟೆಗೆ ದೇವಸ್ಥಾನದಿಂದ ಹೊರಟು ಶ್ರೀ ರಾಮೇಶ್ವರ ದೇವಸ್ಥಾನ ತಲುಪಿ ಅಲ್ಲಿಂದ ಮೆರವಣಿಗೆ ಮೂಲಕ ರಂಜದಕಟ್ಟೆ ತಮ್ಮ ಸನ್ನಿದಿ ತಲುಪುವುದು. ಬಳಿಕ ವಿಶೇಷ ಪೂಜೆಗಳು ಜರುಗಲಿದೆ. ಪ್ರತಿ ಮಂಗಳವಾರ ದೇವಾಲಯದಲ್ಲಿ ಭಕ್ತಾದಿಗಳಿಗೆ ಹೇಳಿಕೆ ಕಾರ್ಯಕ್ರಮ ಮತ್ತು ಅನ್ನಪ್ರಸಾದ ವಿತರಣೆ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ದೇವಸ್ಥಾನ ಸಮಿತಿ ಕೋರಿದೆ..

