ಅಕ್ರಮ ಭೂ ಒತ್ತವರಿ ನಿಷೇಧ ವಿಶೇಷ ನ್ಯಾಯಲಯದ ಪ್ರಕರಣ
ತೀರ್ಥಹಳ್ಳಿಯ 9 ರೈತರ ಪ್ರಕರಣ ಖುಲಾಸೆ
ಕಳೆದ ನಾಲ್ಕು ವರ್ಷಗಳಿಂದ Land grabbing prohibited act 2011 ರ ಅಡಿಯಲ್ಲಿ ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ರೈತರ ಮೇಲೆ ಪ್ರಕರಣಗಳು ದಾಖಲಾಗಿದ್ದು. ಅದರಂತೆ ತೀರ್ಥಹಳ್ಳಿಯ ನೂರಾರು ರೈತರ ಮೇಲೆ ಪ್ರಕರಣ ದಾಖಲಾಗಿ ಬೆಂಗಳೂರು ಅಲೆಯುವಂತಾಗಿದೆ.
ಆಡಳಿತ ಪಕ್ಷಗಳೇ ಭೂ ಮಂಜೂರಾತಿ ನೆಪದಲ್ಲಿ ರೈತರಿಂದ 51, 53,57, ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಯಾವುದೇ ಸ್ಪಷ್ಟ ಮಾನದಂಡಗಳಿಲ್ಲದೆ,
ಭೂ ಮಂಜೂರಾತಿಗೆ ಅರ್ಜಿ ಸ್ವೀಕಾರ ಮಾಡಿಕೊಂಡು, ನಂತರ ಅದೇ ರೈತರ ಮೇಲೆ ಅಕ್ರಮ ಕಬಳಿಕೆ ಎಂದು ಬೆಂಗಳೂರು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ರೈತರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ.
ಇತ್ತಿಚೆಗೆ ಸರ್ಕಾರ ಸದರಿ ಕಾಯಿದೆಯಿಂದ ರೈತರ ಪ್ರಕರಣವನ್ನು ಹೊರತು ಪಡಿಸುವುದಾಗಿ ಹೇಳಿ ಚರ್ಚೆ ಸದನದಲ್ಲಿ ಮಾಡಿದ್ದರು ಸಹ ಅದು ಕಾಯಿದೆ ರೂಪದಲ್ಲಿ ಬರಲು ಸಾಕಷ್ಟು ಸಮಯಗಳು ಹಿಡಿಯಬಹುದು.
ಆದರೆ ನ್ಯಾಯಾಲಯವು ಇದನ್ನು ಪರಿಗಣನೆಗೆ ತೆಗೆದುಕೊಳ್ಳಲು ಬರದ ಕಾರಣ ಸಹಜವಾಗಿ ಪ್ರಕರಣಗಳ ತನಿಖೆ ನಡೆಯುತ್ತಲೇ ಇದೆ.
ಅದರಂತೆ ಈ ತಿಂಗಳಿನಲ್ಲಿ ತೀರ್ಥಹಳ್ಳಿಯ ಒಂಬತ್ತು ಪ್ರಕರಣಗಳಲ್ಲಿ ತೀರ್ಪು ಹೊರಬಿದ್ದಿದ್ದು, ಸದರಿ ಪ್ರಕರಣಗಳಲ್ಲಿ ಆರೋಪಿತರನ್ನು ಖುಲಾಸೆ ಮಾಡಲಾಗಿದೆ.
ಆರೋಪಿಗಳಾದ ರೈತರ ಪರವಾಗಿ ಬೆಂಗಳೂರು ವಿಶೇಷ ನ್ಯಾಯಾಲಯದಲ್ಲಿ ತೀರ್ಥಹಳ್ಳಿಯ ವಕೀಲರಾದ ಆಡಿನಸ ಸತೀಶ್ ವಾದಿಸಿದ್ದು. ಕಳೆದ 4 ವರ್ಷಗಳಿಂದ ಬೆಂಗಳೂರು ನ್ಯಾಯಾಲಯದಲ್ಲಿ ತನ್ನ ಕಕ್ಷಿದಾರರ ಪರವಾನಗಿ ತಾವೇ ವಾದಿಸುತ್ತಿದ್ದಾರೆ.
