ಸಹ್ಯಾದ್ರಿ ಸಂಸ್ಥೆಗೆ 1.85 ಕೋಟಿ ರೂಪಾಯಿ ನಿವ್ವಳ ಲಾಭ

1050 ಕೋಟಿಗೂ ಹೆಚ್ಚಿನ ವಹಿವಾಟು
19ನೇ ವರ್ಷದ ಯಶಸ್ವಿ ಬೆಳವಣಿಗೆ
ಆಡಿಟ್‌ ವರ್ಗೀಕರಣದಲ್ಲೂ
ಗ್ರೇಡ್‌

ಸಹ್ಯಾದ್ರಿ ವಿವಿದೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘದ 19ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆ ಸೆಪ್ಟೆಂಬರ್‌ 19ರ ಬೆಳಿಗ್ಗೆ 10 ಗಂಟೆಗೆ ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ವಿಶೇಷ ಆಹ್ವಾನಿತರಾಗಿ ನಿವೃತ್ತ ಅಪರ ನಿಬಂಧಕ ಹೆಚ್.ಎಸ್.‌ ನಾಗರಾಜಯ್ಯ ಭಾಗವಹಿಸಲಿದ್ದಾರೆ. ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಆಗಮಿಸಬೇಕೆಂದು ಸಂಘದ ಅಧ್ಯಕ್ಷ ಬಸವಾನಿ ವಿಜಯದೇವ್‌ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಕೋರಿದರು.

ಪ್ರಸ್ತುತ ಸಾಲಿನಲ್ಲಿ ಸಂಸ್ಥೆಯೂ 1,050 ಕೋಟಿ ವ್ಯವಹಾರ ನಡೆಸುವ ಮೂಲಕ ಬೃಹತ್‌ ಸಂಸ್ಥೆಯಾಗಿ ಬೆಳೆದು ನಿಂತಿದೆ. 90 ಕೋಟಿಗೂ ಅಧಿಕ ಸಾಲ ವಿತರಣೆ ಮಾಡಿದ್ದು 1 ಕೋಟಿ 85 ಲಕ್ಷ ನಿವ್ವಳ ಲಾಭ ಪಡೆದಿದೆ. 10,167  ಮಂದಿ ಷೇರುದಾರರಿದ್ದು 10 ಕೋಟಿಗೂ ಮೀರಿದ ಷೇರು ಬಂಡವಾಳ ಹೊಂದಿದ್ದೇವೆ. 54 ಕೋಟಿಗೂ ಹೆಚ್ಚು ಠೇವಣಿ, 54 ಕೋಟಿ ಮೀರಿದ ಮಾರುಕಟ್ಟೆ ಸ್ಥಿರಾಸ್ತಿ ಇದ್ದು ಸಂಸ್ಥೆಯ ಷೇರುದಾರಿಗೆ ಭದ್ರತೆ ಕಲ್ಪಿಸಿದ್ದೇವೆ ಎಂದು ತಿಳಿಸಿದರು.

2003ರಲ್ಲಿ ಸಹ್ಯಾದ್ರಿ ವಿವಿದೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ಸ್ಥಾಪನೆಯಾದಾಗ ನಡೆಸಿದ ವಾರ್ಷಿಕ ವಹಿವಾಟು 2 ಕೋಟಿ 23 ಲಕ್ಷದ 18 ಸಾವಿರ ರೂಪಾಯಿಗಳು. 19 ವರ್ಷಗಳ ನಂತರ ಸಹ್ಯಾದ್ರಿ ಸಂಸ್ಥೆ ಮಾದರಿಯಾಗಿ ಬೆಳೆದಿದೆ. ಸಂಸ್ಥೆ ನಿವ್ವಳ ಲಾಭಕ್ಕಿಂತ ಹೆಚ್ಚಿನ ಲಾಭ ಪಡೆದಿದ್ದರು ಅದನ್ನು ಷೇರುದಾರರ ಭದ್ರತೆಯ ಹಿತದೃಷ್ಟಿಯಿಂದ ಸ್ಥಿರಾಸ್ತಿಯ ಮೇಲೆ ಹೂಡಿಕೆ ಮಾಡಲಾಗಿದೆ. ಸಂಸ್ಥೆಯನ್ನು ಯಾರು ಬೇಕಾದರು ಮುನ್ನಡೆಸಬಹುದು. ಅಷ್ಟರ ಮಟ್ಟಗೆ ಸ್ವಾವಲಂಬಿಯಾಗಿದೆ ಎಂದರು.

ಆಡಿಟ್‌ ವರ್ಗೀಕರಣದಲ್ಲೂ ಗ್ರೇಡ್‌ ಪಡೆಯುವ ಮೂಲಕ ಪಾರದರ್ಶಕ ವ್ಯವಸ್ಥೆ ಹೊಂದಿದ್ದೇವೆ. ಸಹ್ಯಾದ್ರಿ ಟ್ರಾವೆಲ್ಸ್‌, ಸಹ್ಯಾದ್ರಿ ಚೀಟಿ ನಿಧಿ, ಸಹ್ಯಾದ್ರಿ ಫ್ಯೂಯಲ್ಸ್‌, ಮಿಲ್ಕ್‌ ಪಾರ್ಲರ್‌, ಸಹ್ಯಾದ್ರಿ ಎಮಿಷನ್‌, ಸಹಕಾರ ದನಿ ವಾರಪತ್ರಿಕೆ ಯಶಸ್ವಿಯಾಗಿ ಲಾಭದಾಯಕವಾಗಿ ನಡೆಯುತ್ತಿದೆ. ಈ ಸಾಲಿಗೆ ಮಿನರಲ್‌ ವಾಟರ್‌ ಘಟಕ ಸೇರಲಿದೆ. ಒಟ್ಟು ಲಾಭದಲ್ಲಿ ಸಂಸ್ಥೆಯ ಷೇರುದಾರರಿಗೆ 10% ಡಿವಿಡೆಂಟ್‌ ವಿತರಣೆ ಮಾಡಲಾಗುತ್ತದೆ ಎಂದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post