ವಾಯ್ಸ್ ಆಫ್ ಶಿವಮೊಗ್ಗ ಸೀಸನ್-4 ಗ್ರಾಂಡ್ ಫಿನಾಲೆ
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ
ನಡೆದ ವಾಯ್ಸ್ ಆಫ್ ಶಿವಮೊಗ್ಗ ಸೀಸನ್-4 ಗ್ರಾಂಡ್ ಫಿನಾಲೆಯಲ್ಲಿ ಮೇಲಿನ ಕುರುವಳ್ಳಿಯ ಯುವ ಗಾಯಕಿ
ನಿಧಿ ಸುರೇಶ್ ಶೇಟ್ ರನ್ನರ್ ಆಫ್ ಆಗಿ ಹೊರ ಹೊಮ್ಮಿದ್ದಾರೆ.
ನಿಧಿ ಮೇಲಿನ ಕುರುವಳ್ಳಿಯ ಕ್ಲಾಸ್ 1 ಕಂಟ್ರಾಕ್ಟರ್
ಸುರೇಶ್ ಶೆಟ್, ಮಮತಾ ದಂಪತಿಯ ಪುತ್ರಿ.
ನಿಧಿ ತೀರ್ಥಹಳ್ಳಿ ತಾಲ್ಲೂಕಿನ ಅನೇಕ ಸಾಂಸ್ಕೃತಿ
ಕಾರ್ಯಕ್ರಮದಲ್ಲಿ ತಮ್ಮ ಧ್ವನಿ ನೀಡಿದ್ದಾರೆ. ಬಾಲ್ಯದಿಂದಲೇ ಸಂಗೀತದ ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದು,
ರಾಜ್ಯದಲ್ಲಿ ಉತ್ತಮ ಗಾಯಕಿಯಾಗುವ ಅವಕಾಶ ಇದೆ. ಹಾಡುಗಾರಿಕೆಯಲ್ಲಿ ಇನ್ನಷ್ಟು ಪಕ್ವತೆ ಬೆಳೆಸಿಕೊಳ್ಳಲಿ.
ಆಕೆಯ ಭವಿಷ್ಯ ಉಜ್ವಲವಾಗಲಿ ಎಂಬುದು ನೆಲದ ಧ್ವನಿ ಸಂಪಾದಕ ಮಂಡಳಿಯ ಹಾರೈಕೆ.

