 |
| ತ್ರಿಶೂಲ ಶಕ್ತಿ ರೂಪದ ಕರಗ |
ತೀರ್ಥಹಳ್ಳಿ ಪಟ್ಟಣ ಸಮೀಪದ ಮೇಲಿನ ಕುರುವಳ್ಳಿ
ಮಾರಿಕಾಂಬ ದೇವಸ್ಥಾನದ 49ನೇ ವರ್ಷದ ಕರಗ ಉತ್ಸವಕ್ಕೆ ಸೋಮವಾರ ಚಾಲನೆ ದೊರೆಯಿತು. ಭಕ್ತರು ಮುಂಜಾನೆ
ತುಂಗಾ ನದಿಯಿಂದ ತುಂಗಾತೀರ್ಥವನ್ನು ದೇವಿಗೆ ಅರ್ಪಿಸಿದರು. |
| ತುಂಗಾತೀರ್ಥ ಶ್ರೀ ದೇವಿಗೆ ಅರ್ಪಿಸಲಾಯಿತು. |
ಸಂಜೆ ತುಂಗಾ ನದಿಯಲ್ಲಿ ವಿಶೇಷವಾಗಿ ಶಕ್ತಿಯ ಸಂಕೇತವಾಗಿ
ತ್ರಿಶೂಲ ರೂಪದ ಕರಗವನ್ನು ಜೋಡಣೆ, ಜಾನಪದ ಪಂಬೆ ವಾದನದೊಂದಿಗೆ ಕರಗ ಉತ್ಸವ ಕುರುವಳ್ಳಿಯಿಂದ ಮೇಲಿನಕುರುವಳ್ಳಿಯ
ವರಗೆ ನಡೆಯಿತು. ಡಿಜೆ ಉತ್ಸವಕ್ಕೆ ಹೆಚ್ಚಿನ ಮೆರುಗು ನೀಡಿತು. ಹಾಗೂ ಶ್ರೀ ಕ್ಷೇತ್ರ ಅಲಸೆ ಮೇಳದ
ಯಕ್ಷಗಾನ ಕಲಾವಿದರಿಂದ ಭಸ್ಮಾಸುರ ಮೋಹಿನಿ – ಜಾಂಬವತಿ ಕಲ್ಯಾಣ ಕಥಾಭಾಗ ಪ್ರದರ್ಶನಗೊಂಡಿತು..jpeg) |
| ಚಂಡಿಕಾ ಹವನ |
ಮಂಗಳವಾರ ದೇವಸ್ಥಾನದ ಆವರಣದಲ್ಲಿ ಚಂಡಿಕಾ ಹವನ,
ಪೂರ್ಣಾಹುತಿ ನಡೆದಿದ್ದು, ಸಂಜೆ ತಂಬಿಟ್ಟು ದೀಪ ಸೇವೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಬುಧವಾರ
ಸಂಜೆ 6ಕ್ಕೆ ಕರಗ ಮೆರವಣಿಗೆ ನಂತರ ವಿಸರ್ಜನೆಗೊಳ್ಳಲಿದೆ. 3 ದಿನಗಳ ಕರಗ ಉತ್ಸವದಲ್ಲಿ ಸಾರ್ವಜನಿಕ
ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನ
ಆಡಳಿತ ಮಂಡಳಿ ಕೋರಿದ್ದಾರೆ.ಕೊರೋನ ಅವಧಿಯಲ್ಲಿ ಸರಳವಾಗಿ ಕರಗ ಆಚರಣೆ ಮಾಡಲಾಗಿತ್ತು. ಪ್ರಸ್ತುತ ವರ್ಷ ಕೊರೋನಾ ಬಿಡುವು ನೀಡಿದ ಹಿನ್ನಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.