ಮುಲಾಜಿಲ್ಲದೆ ಟ್ರಂಚ್
ಹೊಡೆದು ಅಕ್ರಮ ತಡೆದ ಅರಣ್ಯ ಅಧಿಕಾರಿಗಳು
ಮಂಡಗದ್ದೆ ಡಿಆರ್‌ಎಫ್‌ಓ
ಅಮಿತ್ ಎಸ್ ನೇತೃತ್ವದಲ್ಲಿ ಕಾರ್ಯಾಚರಣೆ
ತೀರ್ಥಹಳ್ಳಿ ತಾಲ್ಲೂಕಿನ
ರಾಷ್ಟ್ರೀಯ ಹೆದ್ದಾರಿ 169ರ ಮಾರ್ಗ ಮಧ್ಯೆಯ ಮಂಡಗದ್ದೆ ಸಮೀಪ ಅಕ್ರಮ ಮರಳು ಸಾಗಾಣೆ ದಂಧೆ ಎಗ್ಗಿಲ್ಲದೆ
ನಡೆಯುತ್ತಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಸೋಮವಾರ ಮಂಡಗದ್ದೆ ಡಿಆರ್‌ಎಫ್‌ಓ ಅಮಿತ್ ಎಸ್ ನೇತೃತ್ವದಲ್ಲಿ
ಕಾರ್ಯಾಚರಣೆ ನಡೆದಿದ್ದು ದಂಧೆಗಾಗಿ ಬಳಕೆಯಾಗುತ್ತಿದ್ದ ಮಾರ್ಗವನ್ನು ಸಂಪೂರ್ಣವಾಗಿ ಟ್ರಂಚ್ ಹೊಡೆಯುವ
ಮೂಲಕ ಬಂದ್ ಮಾಡಲಾಗಿದೆ.
ಮಂಡಗದ್ದೆ ಪೇಟೆಯಲ್ಲಿ
ಮರಳು ದಂಧೆಗೆ ಅವಕಾಶ ನೀಡಬೇಕೆಂಬ ತೀವ್ರ ಒತ್ತಡಗಳು ಕೇಳಿ ಬಂದಿತ್ತು. ಅಲ್ಲದೇ ವಿವಿಧ ರೀತಿಯ ಭಯ
ಹುಟ್ಟಿಸುವ ಪ್ರಯತ್ನದ ನಡುವೆಯು ಅಮಿತ್ ಹಿಂದುಮುಂದು ನೋಡದೆ ಟ್ರಂಚ್ ಹೊಡೆಸಿದ್ದು ದಂಧೆಕೋರರ ಕೆಂಗಣ್ಣಿಗೆ
ಗುರಿಯಾಗುವಂತಹ ವಾತಾವರಣ ನಿರ್ಮಾಣವಾಗಿದೆ.
