ಎಂಐಓ ಆಸ್ಪತ್ರೆಯ ಮ್ಯಾಮೋಗ್ರಫಿ ಘಟಕ ಉದ್ಘಾಟನೆ

ತೀರ್ಥಹಳ್ಳಿಯ ಸುತ್ತಮುತ್ತಲ ಜನರಿಗೆ ಕಡಿಮೆ ದರದಲ್ಲೇ ಚಿಕಿತ್ಸೆ
ಆರಗದ ಮಂಗಳೂರು ಇನ್ಸಟಿಟ್ಯೂಟ್ ಆಫ್ ಅಂಕಾಲಜಿ (ಎಂಐಒ) ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮ್ಯಾಮೋಗ್ರಫಿ ಘಟಕ ಉದ್ಘಾಟನಾ ಸಮಾರಂಭ ಇಂದು ಮೇ 16ರ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ.
ಗ್ರಾಮೀಣ ಪ್ರದೇಶದ ಜನರಿಗಾಗಿ ವಿಶೇಷ ಕ್ಯಾನ್ಸರ್ ಚಿಕಿತ್ಸೆ ನೀಡುವ ಗುರಿಯೊಂದಿಗೆ ಅರಗದ ಎಂ ಐ ಒ ಆಸ್ಪತ್ರೆಈಗ ಮಾಮೂಗ್ರಫಿ ಚಿಕಿತ್ಸೆಯನ್ನು ಪರಿಚಯಿಸುತ್ತಿದೆ . ಈ ಮೂಲಕ ವಿಶ್ವದರ್ಜೆಯ ಕ್ಯಾನ್ಸರ್  ವ್ಯವಸ್ಥೆಅತ್ಯಂತ ಚಿಕಿತ್ಸೆ ಕಡಿಮೆ ದರದಲ್ಲಿ ದೊರಕಲಿದ್ದು ಮಹಿಳೆಯರು ಮತ್ತು ಪುರುಷರು ಇದರ ಲಾಭ ಪಡೆಯಬಹುದಾಗಿದೆ .
ಮಹಿಳೆಯರು ಸ್ಥನ, ಗರ್ಭಕಂಠ, ತಲೆ, ಕುತ್ತಿಗೆ ಕ್ಯಾನ್ಸ‌ರ್ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ. ಪುರುಷರಿಗೆ ತಲೆ, ಕುತ್ತಿಗೆ, ಪ್ರೊಸ್ಟೇಟ್ ಹಾಗೂ ಕೊಲೋರೆಕ್ಟ‌ರ್ ಕ್ಯಾನ್ಸ‌ರ್ ತಪಾಸಣೆ ಇದರಿಂದ ಮಾಡಿಸಿಕೊಳ್ಳಬಹುದು. ಇದರಿಂದ ಸುಲಭವಾಗಿ ಕ್ಯಾನ್ಸರ್ ಸಂಬಂಧಿತ ಹುಣ್ಣುಗಳು ಇದ್ದರೆ ಪತ್ತೆಹಚ್ಚಬಹುದಾಗಿದೆ.
“ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಮತ್ತು ಎಂಐಒ ಆಸ್ಪತ್ರೆ ಸಹಯೋಗದಲ್ಲಿ ಗ್ರಾಮೀಣ ಭಾಗದ ಜನರಿಗೆ ಕ್ಯಾನ್ಸ‌ರ್ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಂಸ್ಥೆಯ ಜೊತೆಗೂಡಿ ಹಲವರಿಗೆ ಉಚಿತ ಕ್ಯಾನ್ಸ‌ರ್ ಚಿಕಿತ್ಸೆ ನೀಡಿದ್ದೇವೆ” ಎಂದು ಟ್ರಸ್ಟಿ ವಿನೂತ ಮುರುಳಿಧರ ತಿಳಿಸಿದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post