ಲಕ್ಕುಂದ ಮನೆಯ ಸುಲಿಗೆ ಪ್ರಕರಣದ ಆರೋಪಿತರ ಬಂಧನ

ಆಗುಂಬೆ ಪಿಎಸ್ಐ ಶಿವನಗೌಡ ತಂಡದ ಕಾರ್ಯಾಚರಣೆ
ಆರೋಪಿಗಳಿಂದ 11 ಲಕ್ಷ ಮೌಲ್ಯ ಕಳ್ಳತನ ಮಾಲು ವಸೂಲಿ
ಏಪ್ರಿಲ್ 21 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ವಾಸವಿದ್ದ ಮನೆಯಲ್ಲಿ ಅಪರಿಚಿತ ಆರೋಪಿತರಿಂದ ಸುಲಿಗೆಯಾಗಿದ್ದು ಈ ಬಗ್ಗೆ ಠಾಣಾ ಗುನ್ನೆ ನಂ: 33/2026 ಕಲಂ: 309(6), 329(4), 127(2) ರೆ/ವಿ 3(5) ಬಿ.ಎನ್.ಎಸ್ ಪ್ರಕರಣ ದಾಖಲಾಗಿರುತ್ತದೆ.
ಸದರಿ ತನಿಖಾ ತಂಡವು  ಪ್ರಕರಣದ ಆರೋಪಿತರಾದ 1) ಭರತ್.ವೈ @ ಭಟ್ಟ, 25 ವರ್ಷ, ವಾಸ ಜೇಡಿಕಟ್ಟೆ, ಹೊಸೂರು, ತವಲಗುಂದಿ ಪೋಸ್ಟ್, ಭದ್ರಾವತಿ (ತಾ), 2) ಅಶೋಕ, 28 ವರ್ಷ, ಜಾವಳ್ಳಿ ಗ್ರಾಮ, ಶಿವಮೊಗ್ಗ, 3) ಮಹಮ್ಮದ್ ಇಬ್ರಾಹಿಂ ಮೀರಾ @ ಟಕ್ಕರ್, 24 ವರ್ಷ, ವೀರಾಪುರ, ಭದ್ರಾಕಾಲೋನಿ, ಭದ್ರಾವತಿ (ತಾ) ಮತ್ತು 4) ಪಾರ್ತಿಪ್, 25 ವರ್ಷ, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ (ತಾ) ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ  1) 70 ಗ್ರಾಂ ಬಂಗಾರದ ಆಭರಣಗಳು , ಅಂದಾಜು ಮೌಲ್ಯ 10 ಲಕ್ಷ 80,000/-ರೂಗಳು, 2) 56 ಗ್ರಾಂ ಬೆಳ್ಳಿ ವಸ್ತುಗಳ, ಅಂದಾಜು ಮೌಲ್ಯ 16,700/-ರೂಗಳು, 3) ಕೃತ್ಯಕ್ಕೆ ಬಳಸಿದ ಸ್ಕೂಟಿ ಅಂದಾಜು ಮೌಲ್ಯ 50,000/- ರೂಗಳು, 4) ಕೃತ್ಯಕ್ಕೆ ಬಳಸಿದ ಇನ್ನೊಂದು ಸ್ಕೂಟಿ, ಅಂದಾಜು ಮೌಲ್ಯ 50,000/- ರೂಗಳು ಸೇರಿ ಒಟ್ಟು 11 ಲಕ್ಷ 96700/- ರೂಗಳ ಮಾಲನ್ನು ವಶಪಡಿಸಿಕೊಂಡಿರುತ್ತಾರೆ.
ಪ್ರಕರಣದ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ನಿಖಿಲ್.ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಕಾರಿಯಪ್ಪ. ಎ.ಜಿ., ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಪಿಐ ಇಮ್ರಾನ್ ಬೇಗ್, ಮಾಳೂರು ಸಿಪಿಐ ರಾಜಶೇಖರ್.ಎಲ್,  ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐ ಶಿವನಗೌಡ, ಮಾಳೂರು ಪಿಐಎಸ್ ಸುನಿಲ್ ಸಿಬ್ಬಂದಿಗಳಾದ ಲಿಂಗೇಗೌಡ, ಸುರಕ್ಷೀತ್, ಕಿರಣ್ ಕುಮಾರ, ಕುಮಾರ್, ಜೋಸೆಫ್ ಮ್ಯಾಥ್ಯೂ, ಸುರೇಶ್ ನಾಯ್ಕ, ಜಯಕುಮಾರ್, ರಮೇಶ ಅಕ್ಕಸಾಲಿ, ವಿನಯ್ ಕುಮಾರ್,ಉಲ್ಲಾಸ್ ನಾಯ್ಕ, ಪ್ರಶಾಂತ.ಓ, ಅನಿಲ್, ನಾಗಾರ್ಜುನ್, ವಿಶ್ವನಾಥ, ಸುನಿಲ್, ರವಿ.ಹೆಚ್.ಸಿ, ಅರವಿಂದ, ಅವಿನಾಶ, ಗುರುರಾಜ್, ಇಂದ್ರೇಶ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post