ಹಾರೆಕೊಪ್ಪದ ಶಬರೀಶ್ ಗೌಡ ರಾಷ್ಟ್ರ ಮಟ್ಟದಲ್ಲಿ ಸಾಧನೆ
ಮಾರ್ಚ್ 15 ರಿಂದ
20ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಯೂಥ್ ನ್ಯಾಷನಲ್ ವಾಲಿಬಾಲ್ ಪಂದ್ಯಾವಳಿಗೆ ಶಬರೀಶ್ ಗೌಡ
ಆಯ್ಕೆ ಆಗಿದ್ದಾರೆ. ಇವರು ದಬ್ಬಣಗದ್ದೆ ಸಮೀಪದ ಹಾರೆಕೊಪ್ಪದ ರಂಜಿತಾ ಜಗದೀಶ್ ದಂಪತಿ ಪುತ್ರ. ತೀರ್ಥಹಳ್ಳಿಯ
ವಾಗ್ದೇವಿಯಲ್ಲಿ ಎಸ್ಎಸ್ಎಲ್ಸಿ ಓದಿದ್ದು, ಬೆಂಗಳೂರು ಜಯನಗರದ ಸುರಾನಾ ಕಾಲೇಜಿನಲ್ಲಿ ಪ್ರಥಮ ವರ್ಷದ
ಬಿ.ಕಾಂ ಓದುತ್ತಿದ್ದಾರೆ. ಕ್ರೀಡಾ ಇಲಾಖೆ ಇವರನ್ನು ಆಯ್ಕೆ ಮಾಡಿದ್ದು, ರಾಷ್ಟ್ರಮಟ್ಟದ ಪಂದ್ಯಾವಳಿ
ಓಡಿಸ್ಸಾದಲ್ಲಿ ನಡೆಯಲಿದೆ. ಆಳ್ವಾಸ್ ಕಾಲೇಜಿನಲ್ಲಿ ತರಬೇತಿ ಪಡೆದಿದ್ದಾರೆ.
