ಮಲೆನಾಡು ಭಾಗದ ಪ್ರಮುಖ ರೆಫರಲ್ ಆಸ್ಪತ್ರೆ ಹಾಗೂ ಕಿಡ್ನಿ ಚಿಕಿತ್ಸೆಯಲ್ಲಿ ಹೆಸರುವಾಸಿಯಾಗಿರುವ ಶಿವಮೊಗ್ಗದ ಎನ್ ಯು ಆಸ್ಪತ್ರೆಯ ಪ್ರಖ್ಯಾತ ತಜ್ಞ ವೈದ್ಯರು ಇದೀಗ ತೀರ್ಥಹಳ್ಳಿಯಲ್ಲಿ ಸಮಾಲೋಚನೆಗೆ ಲಭ್ಯರಾಗಲಿದ್ದಾರೆ. ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆ ಆಡಳಿತ ಮಂಡಳಿ ಮನವಿ ಮಾಡಿದೆ ತೀರ್ಥಹಳ್ಳಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಆಸ್ಪತ್ರೆ ಪರವಾಗಿ ಮಾತನಾಡಿದ ರಾಬಿನ್ ಸಾಮುಯೆಲ್ ಜತ್ತನ್ನ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಕಿಡ್ನಿ ಸಂಬಂಧ ಪಟ್ಟಂತೆ ಪರಿಪೂರ್ಣ ವ್ಯವಸ್ಥೆ ಹೊಂದಿರುವ ಆಸ್ಪತ್ರೆಯಾಗಿದೆ. ಈಗ ತೀರ್ಥಹಳ್ಳಿ ಭಾಗದ ಜನತೆಗೆ ಅನುಕೂಲ ಆಗುವಂತೆ
ಮಧುಮೇಹ, ಮೂತ್ರಪಿಂಡ
ರೋಗಗಳು ಹಾಗೂ ಮೂತ್ರಪಿಂಡ ಕಸಿ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಡಾ. ಪ್ರವೀಣ ಮಾಳವದೆ ಅವರು ಪ್ರತಿ
ತಿಂಗಳ ಎರಡನೇ ಗುರುವಾರ ತೀರ್ಥಹಳ್ಳಿಯ ಗಾಯತ್ರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ರಿಂದ 1 ಹಾಗೂ ಮಧ್ಯಾಹ್ನ
2.30ರಿಂದ ಸಂಜೆ 4.00ರವರೆಗೆ ಸಮಾಲೋಚನೆ ನಡೆಸಲಿದ್ದಾರೆ.
ಮೂತ್ರಕೋಶ ತಜ್ಞ
ಹಾಗೂ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಪ್ರದೀಪ್ ಎಂ.ಜಿ. ಅವರು ಪ್ರತಿ ತಿಂಗಳ ಮೂರನೇ
ಬುಧವಾರ ತೀರ್ಥಹಳ್ಳಿಯ ಗಾಯತ್ರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ
ಸಮಾಲೋಚನೆಗೆ ಲಭ್ಯವಿರುತ್ತಾರೆ.
ಎನ್ ಯು ಆಸ್ಪತ್ರೆ
ಕುರಿತು ; 1999ರಲ್ಲಿ ಬೆಂಗಳೂರಿನ ಪದ್ಮನಾಭನಗರದಲ್ಲಿ ಆರಂಭವಾದ ಎನ್ ಯು ಆಸ್ಪತ್ರೆ ಸಮೂಹವು ಇಂದು
ಕರ್ನಾಟಕ, ತಮಿಳುನಾಡು ಹಾಗೂ ಮಾಲ್ಡೀವ್ಸ್‌ಗಳಲ್ಲಿ ಹಲವು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳನ್ನು
ಹೊಂದಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ. 2020ರಲ್ಲಿ ಆರಂಭವಾದ ಎನ್
ಯು ಆಸ್ಪತ್ರೆ ಶಿವಮೊಗ್ಗ ಕಳೆದ ಆರು ವರ್ಷಗಳಿಂದ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನತೆಗೆ
ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿದೆ.
ಆಸ್ಪತ್ರೆಯು ಎನ್‌ಎಬಿಎಚ್
(NABH) ಮಾನ್ಯತೆ ಪಡೆದಿದ್ದು, ಪ್ರಯೋಗಾಲಯವು ಎನ್‌ಎಬಿಎಲ್ (NABL) ಮಾನ್ಯತೆಯನ್ನು ಹೊಂದಿದೆ. ಶಿವಮೊಗ್ಗ
ನಗರದ ಹೃದಯಭಾಗದಲ್ಲಿ ಹೊರರೋಗಿ ವಿಭಾಗ (OPD) ಹಾಗೂ ಡಯಾಲಿಸಿಸ್ ಕೇಂದ್ರವನ್ನು ಸಹ ನಿರ್ವಹಿಸುತ್ತಿದೆ.
ಎನ್ ಯು ಆಸ್ಪತ್ರೆ
ಶಿವಮೊಗ್ಗವು ಇದುವರೆಗೆ 32 ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು (31 ಜೀವಂತ ದಾನಿ
ಹಾಗೂ 1 ಮೃತದಾನಿ ಕಸಿ) ಪೂರ್ಣಗೊಳಿಸಿದ್ದು, ಮಲೆನಾಡು ಪ್ರದೇಶದಲ್ಲಿ ಅತಿ ಹೆಚ್ಚು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ
ನಡೆಸಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಲಭ್ಯವಿರುವ ನೆಫ್ರಾಲಜಿ
ಸೇವೆಗಳು ; ಮಕ್ಕಳ ಮೂತ್ರಪಿಂಡ ಸಮಸ್ಯೆಗಳ ಚಿಕಿತ್ಸೆ, ಡಯಾಲಿಸಿಸ್ ಸೇವೆ, ಕಿಡ್ನಿ ರೋಗ ತಡೆಗಟ್ಟುವಿಕೆ
ಮತ್ತು ನಿರ್ವಹಣೆ, ಮಧುಮೇಹ ಸಂಬಂಧಿತ ಕಿಡ್ನಿ ಕಾಯಿಲೆಗಳ ಚಿಕಿತ್ಸೆ, ಮೂತ್ರಪಿಂಡ ಕಸಿ (Kidney
Transplant), ಕಿಡ್ನಿ ಬಯಾಪ್ಸಿ, ಪ್ಲಾಸ್ಮಾಫೆರೆಸಿಸ್, ಹೋಮ್ ಡಯಾಲಿಸಿಸ್ ಸೇವೆ, ಯುರಾಲಜಿ ಸೇವೆಗಳು,
ಪ್ರಾಸ್ಟೇಟ್ ಸಮಸ್ಯೆಗಳು, ಕಿಡ್ನಿ ಕಲ್ಲಿನ ತೊಂದರೆ, ಮೂತ್ರದ ಹರಿವಿನ ಸಮಸ್ಯೆಗಳು, ಮೂತ್ರನಾಳದ ದುರ್ಮಾಂಸ
ಬೆಳವಣಿಗೆ, ಮೂತ್ರ ಸೋರಿಕೆ ಸಮಸ್ಯೆ, ಮಹಿಳೆಯರು ಮತ್ತು ಮಕ್ಕಳ ಮೂತ್ರ ಸಂಬಂಧಿ ಕಾಯಿಲೆಗಳು, ಪದೇ
ಪದೇ ಮೂತ್ರದ ಸೋಂಕು, ಪುರುಷರ ಬಂಜೆತನ ಮತ್ತು ನಿಮಿರುವಿಕೆ ಸಮಸ್ಯೆ, ಕಿಡ್ನಿ ಹಾಗೂ ಮೂತ್ರಚೀಲದ ಕ್ಯಾನ್ಸರ್
ಚಿಕಿತ್ಸೆ ಇದಲ್ಲದೆ ಪುರುಷ ಮತ್ತು ಸ್ತ್ರೀ ಬಂಜೆತನಕ್ಕೆ ನುರಿತ ತಜ್ಞರಿಂದ ಚಿಕಿತ್ಸೆ, ಕೃತಕ ಗರ್ಭಧಾರಣೆ
ಸೇವೆ, ತುರ್ತು ಚಿಕಿತ್ಸಾ ವಿಭಾಗ ಹಾಗೂ ತೀವ್ರ ನಿಗಾ ಘಟಕದ ಸೌಲಭ್ಯಗಳೂ ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ
84959 49494 ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ
ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕಿರಣ್ ಬಿ.ಪೈ ಉಪಸ್ಥಿತರಿದ್ದರು.
