ತೀವ್ರ ರಕ್ತಸ್ರಾವ; ಚಿಕಿತ್ಸೆಗೆ ಸ್ಪಂದಿಸದೆ ಸಾವು
ತೀರ್ಥಹಳ್ಳಿಯ ಜಯ
ಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆಯಲ್ಲಿ ಜುಲೈ 3 ರ ಬೆಳಗ್ಗಿನ ಜಾವ ಗಂಡು ಮಗುವಿಗೆ ಜನ್ಮ ನೀಡಿದ್ದ
ತಾಯಿ ಶುಕ್ರವಾರ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೊಸನಗರ ತಾಲ್ಲೂಕಿನ ಕೋಡೂರು ಸುಮಾ
ಆರ್ (27) ಮೃತಪಟ್ಟ ತಾಯಿ.
ಅರಳಸುರಳಿಯ ತಾಯಿ
ಮನೆಯಲ್ಲಿದ್ದ ಸುಮಾ ಜುಲೈ 1 ರಂದು ಜಾಂಡೀಸ್ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಜೆ.ಸಿ.ಆಸ್ಪತ್ರೆಗೆ
ದಾಖಲಾಗಿದ್ದರು. ಜಾಂಡೀಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ 2ನೇ ತಾರೀಖು ಮಧ್ಯರಾತ್ರಿ ಹೆರಿಗೆ
ನೋವು ಕಾಣಿಸಿಕೊಂಡಿದೆ. ರಾತ್ರಿ 3 ಗಂಟೆಗೆ ಅವರಿಗೆ ಸಹಜವಾಗಿ ಹೆರಿಗೆಯಾಗಿದೆ. ಹೆರಿಗೆ ಸಂದರ್ಭದಲ್ಲಿ
ಮಗು ಮಲವನ್ನು ತಿಂದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ವೈದ್ಯರು ಸೂಚಿಸಿದ್ದರು. ಅಷ್ಟರಲ್ಲಾಗಲೇ
ತಾಯಿಗೂ ತೀವ್ರ ರಕ್ತಸ್ರಾವವಾಗಿದೆ. ವೈದ್ಯರು ಬೆಳಗ್ಗೆ 6 ಗಂಟೆಗೆ ಆಸ್ಪತ್ರೆಯಿಂದ ಶಿವಮೊಗ್ಗದ ಮೆಗ್ಗಾನ್
ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಕಳುಹಿಸಿಕೊಟ್ಟಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ
ಬೆಳಗ್ಗಿನ ಜಾವ ವೈದ್ಯರು ಸರಿಯಾಗಿ ಪ್ರತಿಕ್ರಿಯಿಸದ ಹಿನ್ನಲೆಯಲ್ಲಿ ಕುಟುಂಬಸ್ಥರು ಮಗುವನ್ನು ತೀವ್ರ
ನಿಗಾ ಘಟಕದಲ್ಲಿ ದಾಖಲಿಸಿದ್ದು ತಾಯಿಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ
ಸುಮಾರು 4 ರಿಂದ 5 ಗಂಟೆ ಪ್ರಯಾಣಿಸಿದ್ದರಿಂದ ತೀವ್ರ ರಕ್ತ ಸೋರಿಕೆಯಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ
ಹೆಚ್ಚಿನ ರಕ್ತವನ್ನು ನೀಡಿ ಚಿಕಿತ್ಸೆ ಮಾಡಲಾಗಿತ್ತು. ಆದರೆ ಅದರ ಪರಿಣಾಮವಾಗಿ ಎರಡು ಕಿಡ್ನಿ ಕೆಲಸ
ಸ್ಥಗಿತಗೊಂಡಿದ್ದು ಡಯಾಲಿಸಿಸ್‌ಗೆ ಒಳಗಾಗಿದ್ದರು. ಅಲ್ಲದೇ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.
