ಪ್ರಧಾನ ಕಾರ್ಯದರ್ಶಿಯಾಗಿ ಕುರುವಳ್ಳಿ ನಾಗರಾಜ್ ಪೂಜಾರಿ ಆಯ್ಕೆ
ಡಿಸಿಸಿ ಬ್ಯಾಂಕ್
ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡರ ಆಪ್ತ ವಲಯದಲ್ಲಿ
ಪ್ರಮುಖವಾಗಿ ಗುರುತಿಸಿಕೊಂಡಿರುವ ಕುರುವಳ್ಳಿ ನಾಗರಾಜ್ ಪೂಜಾರಿಯನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್
ಹಿಂದುಳಿದ ವರ್ಗಗಳ (ಯುವ ಸಂಘಟನೆ) ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ರಾಜ್ಯ ಕೆಪಿಸಿಸಿ
ಹಿಂದುಳಿದ ವರ್ಗಗಳ ಅಧ್ಯಕ್ಷ ಮತ್ತು ಶಿಕ್ಷಣ ಸಚಿವರಾದ ಎಸ್.ಮಧು ಬಂಗಾರಪ್ಪರ ಆದೇಶದ ಮೇರೆಗೆ ಶಿವಮೊಗ್ಗ
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ರಮೇಶ್ ಶಂಕರಘಟ್ಟ ಅವರು ಕುರುವಳ್ಳಿ
ನಾಗರಾಜ್ ಪೂಜಾರಿ ಆಯ್ಕೆಯನ್ನು ಪ್ರಕಟಿಸಿದ್ದಾರೆ.
ಹಾಲಿ ತೀರ್ಥಹಳ್ಳಿ
ಆರ್ಯ ಈಡಿಗ ಸಂಘದ ನಿರ್ದೇಶಕ, ತೀರ್ಥಹಳ್ಳಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ, ತಾಲ್ಲೂಕು ಆರೋಗ್ಯ ರಕ್ಷಾ
ಸಮಿತಿಯ ಸದಸ್ಯ ಹೀಗೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಕುರುವಳ್ಳಿ ನಾಗರಾಜ ಪೂಜಾರಿ
ಅವರ ಸೇವೆ ಗುರುತಿಸಿ ಕಾಂಗ್ರೆಸ್ ಪಕ್ಷ ಗುರುತರ ಜವಾಬ್ದಾರಿಯನ್ನು ನೀಡಿದೆ ಎಂದು ಅವರ ಆಪ್ತರು ಸಂತೋಷ
ವ್ಯಕ್ತಪಡಿಸಿದ್ದಾರೆ.
