ಪಟ್ಲ ಸತೀಶ್ ಶೆಟ್ಟಿ
ಸೇರಿದಂತೆ ಖ್ಯಾತ ಕಲಾವಿದರ ಕಾರ್ಯಕ್ರಮ
ಸಕಲ ಸಿದ್ಧತೆಯಲ್ಲಿ
ತೊಡಗಿದ ಸಮಿತಿ ; ಯಶಸ್ಸಿಗಾಗಿ ನಾಗರಾಜ ಶೆಟ್ಟಿ ಮನವಿ
ಎರಡು ವರ್ಷಗಳಿಗೊಮ್ಮೆ
ನಡೆಯುವ ತೀರ್ಥಹಳ್ಳಿಯ ಮಾರಿಕಾಂಬಾ ಜಾತ್ರೆ ಫೆಬ್ರವರಿ 17 ರಿಂದ 25ರ ವರೆಗೆ ಅದ್ದೂರಿಯಾಗಿ ನಡೆಯಲಿದೆ
ಎಂದು ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಶೆಟ್ಟಿ ತಿಳಿಸಿದ್ದಾರೆ.
ಪ್ರತಿದಿನ ಮಧ್ಯಾಹ್ನ
ಸುವರ್ಣ ಸಹಕಾರ ಭವನದಲ್ಲಿ ಅನ್ನಸಂತರ್ಪಣೆ ಇರುತ್ತದೆ. ಸಂಜೆ 6 ರಿಂದ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ
ಕಾರ್ಯಕ್ರಮ ನಡೆಯಲಿದೆ. ಒಟ್ಟು 80 ಲಕ್ಷ
ವೆಚ್ಚದಲ್ಲಿ ಜಾತ್ರೆ ನಡೆಯಲಿದೆ. ಫೆ 17 ಜಾತ್ರೆ ಸಾರುವುದು, 18 ಪಾರಾಯಣ ಸಂಜೆ ಸುಮುಖ ಸಂಗೀತ ನೃತ್ಯ
ಶಾಲೆ, ರಾಜರಾಜೇಶ್ವರಿ ನೃತ್ಯ ಶಾಲೆಯ ಕಲಾವಿದರಿಂದ ನೃತ್ಯ ಸಂಗಮ, 19 ಖ್ಯಾತ ಯಕ್ಷ ಕಲಾವಿದ ಪಟ್ಲ
ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಯಕ್ಷಗಾನ ಮೇಳ ಪ್ರಸ್ತುತ ಪಡಿಸುವ ಕಾಲಮಿತಿ ಯಕ್ಷಗಾನ ಸಂಪೂರ್ಣ
ದೇವಿ ಮಹಾತ್ಮೆ ನಡೆಯಲಿದೆ.
20 ಗಣೇಶ್ ದೇಸಾಯಿ,
ಸುರೇಖಾ ಹೆಗಡೆ ಸುಶ್ರಾವ್ಯ ಸಂಗೀತದೊಂದಿಗೆ ನೀರ್ನಳ್ಳಿ ಗಣಪತಿ ಹೆಗಡೆ ಅವರಿಂದ ಬಣ್ಣದ ಚಿತ್ತಾರ ಮೂಡಲಿದೆ.
21 ಚಂಡಿಕಾ ಹೋಮ, ಪೂರ್ಣಾಹುತಿ, ಸಂಜೆ ಡ್ಯಾನ್ಸ್ ಪ್ಯಾಲೇಸ್ ಕೃ ಇವರಿಂದ ನೃತ್ಯ ವೈವಿಧ್ಯ, ಸಂಗೀತ
ಸುಧೆ, 22 ಧಾರ್ಮಿಕ ಕಾರ್ಯಕ್ರಮ ಸಂಜೆ ರಾಜಗುರು ಹೊಸಕೋಟೆ ಅವರಿಂದ ಜಾನಪದ ಸಂಗೀತ, 23 ಕಲ್ಪೋಕ್ತ
ಪೂಜೆ, ಸಂಜೆ ಪುತ್ತೂರು ಜಗದೀಶ್ ಆಚಾರ್ಯ ಇವರಿಂದ ಸಂಗೀತ ಗಾನ ಸಂಭ್ರಮ ಇರುತ್ತದೆ.
24ರ ಮಂಗಳವಾರ ರಾತ್ರಿ
8 ಗಂಟೆಗೆ ಜಾತ್ರಾ ವಿಶೇಷ ಪೂಜೆ, ಎಣ್ಣೆ ಭಂಡಾರ ಪೂಜೆ, ಸಂಪ್ರದಾಯದಂತೆ ನಾಡ್ತಿ ಆಚಾರ್ ಕುಟುಂಬ
ಕೆತ್ತನೆಯ ಗೊಂಬೆ ಪೂಜೆ, ನಂತರ ಮೆರವಣಿಗೆಯಲ್ಲಿ ಹೊರಟು ಗದ್ದುಗೆ ಪ್ರತಿಷ್ಠಪಿಸುವುದು. 25ರ ಬುಧವಾರ
ಬೆಳಿಗ್ಗೆ 5ಕ್ಕೆ ಗೊಂಬೆ ಪೂಜೆ, ಮಧ್ಯಾಹ್ನ 3 ರಿಂದ ವಿವಿಧ ವಾದ್ಯ ವೇಷ ಭೂಷಣಗಳೊಂದಿಗೆ ಅದ್ದೂರಿಯ
ರಾಜಬೀದಿ ಉತ್ಸವ ನಂತರ ತುಂಗಾ ನದಿಯಲ್ಲಿ ಗೊಂಬೆ ವಿಸರ್ಜನೆ ನಡೆಯಲಿದೆ. ಎಲ್ಲಾ ದೇವತಾ, ಸಾಂಸ್ಕೃತಿಕ
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಭಕ್ತರು ಭಾಗವಹಿಸುವಂತೆ ಕೋರಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗಾಗಿ
ಖಜಾಂಚಿ ಮಂಜುನಾಥ ಜೆ ಶೆಟ್ಟಿ, ಕಾರ್ಯದರ್ಶಿ ಜಿ.ಸತ್ಯನಾರಾಯಣ, ಸಹ ಕಾರ್ಯದರ್ಶಿ ಕೆ.ಸಿ.ಚಂದ್ರಶೇಖರ್,
ಮೊಕ್ತೇಸರರು ಟಿ.ಕೆ.ಜಯರಾಮ ಶೆಟ್ಟಿ, ಧರ್ಮದರ್ಶಿಗಳಾದ ಎ.ಎಸ್.ಧನಂಜಯ, ಬಿ.ಆರ್.ರಾಘವೇಂದ್ರ ಶೆಟ್ಟಿ, ಜಯಪ್ರಕಾಶ ಶೆಟ್ಟಿ, ನಾಗಪ್ಪ
ಆಚಾರ್, ಸಂದೇಶ ಜವಳಿ, ಬಿ.ನಾಗರಾಜ್, ಟಿ.ಎನ್ ಅನಿಲ್ ಸೇರಿದಂತೆ ದೇವಸ್ಥಾನ ಸಮಿತಿ ಅವಿರತವಾಗಿ
ಶ್ರಮಿಸತೊಡಗಿದೆ.


.jpg)