ಮಾತಿಗೂ ನಡವಳಿಕೆಗೂ ಒಂಚೂರು ಸಂಬಂಧ ಇಲ್ಲ
ಕಿಮ್ಮನೆ ಅಸ್ಥಿತ್ವ ಕಳೆದುಕೊಳ್ಳುವ ಭಯದಲ್ಲಿ ಬಾಲಿಷ ಹೇಳಿಕೆ ನೀಡುತ್ತಿದ್ದಾರೆ - ಕಡ್ತೂರು ಯಶಸ್ವಿ
ಕಿಮ್ಮನೆಯವರೇ.. ಮೊದಲ ಬಾರಿ ತೀರ್ಥಹಳ್ಳಿ ಶಾಸಕರಾಗಿದ್ದಾಗ ನೀವು ವಿಧಾನಸೌಧ ಗೊಬ್ಬರದ ಗುಂಡಿ ಇದಂತೆ ಇನ್ನು ಯಾವತ್ತು ನಾನು ಪ್ರತಿನಿಧಿಸುವುದಿಲ್ಲ ಎಂದು ಹೇಳಿರುವುದು ದಾಖಲಾತಿಯಲ್ಲಿದೆ. ಹಾಗೆ ನಂತರದ ಅವಧಿಯಲ್ಲಿ ಮತ್ತೆ ಪ್ರತಿನಿಧಿಸಿ ಜಯಗಳಿಸಿ ಸಚಿವರಾದಿರಿ. ಆಗ ನಾನು ದೇವರನ್ನು ನಂಬುವುದಿಲ್ಲ. ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನಾನು ನಾಸ್ತಿಕ ಅಂದವರ ಬಾಯಲ್ಲಿ ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಮೈ ಮೇಲೆ ಜನಿವಾರ ಒಂದು ಬಿಟ್ಟು ಮತ್ತೆಲ್ಲವನ್ನು ಧರಿಸಿ ನಾಟಕವಾಡುವುದು ಜನರಿಗೆ ಗೊತ್ತಾಗಿದೆ. ಎಂದು ಕಡ್ತೂರು ಯಶಸ್ವಿ ದೂರಿದ್ದಾರೆ.
ಜನರು ಸಹ ಮೂಡರಲ್ಲ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಿಮ್ಮ ನಾಲಿಗೆಗೂ, ನಡವಳಿಕೆಗೂ ಒಂದಕ್ಕೆ ಒಂದು ಸಂಬಂಧವಿಲ್ಲ. ಮಾತಿನ ಬಗ್ಗೆ ನಿಗಾ ಇರಲಿ. ನಿಮ್ಮ ಪಕ್ಷದಲ್ಲೇ ನಿಮ್ಮ ಪಕ್ಕನೆ ಇರುವ ನಾಯಕರಿಗೆ ಪ್ರಶ್ನೆ ಮಾಡುವ ನೈತಿಕತೆ ಇಲ್ಲ.
ಹಾಗೆ ನಿಮ್ಮ ಇನ್ನೊಬ್ಬರು ನಾಯಕರು ಕ್ಷೇತ್ರದ ಅಭಿವೃದ್ಧಿಗೆ ಹಣ ತಂದು ಕಾಮಗಾರಿ ಉದ್ಘಾಟಿಸುತ್ತಿದ್ದು ಅವುಗಳಿಗೆ ನಿಮ್ಮನ್ನು ಕರೆಯುತ್ತಿಲ್ಲ ಎಂಬ ಹತಾಶೆಯಲ್ಲಿ ಏನೇನೋ ಹೇಳಿಕೆ ನೀಡುತ್ತಿದ್ದೀರಿ. ಇದರಿಂದ ತೀರ್ಥಹಳ್ಳಿಯಲ್ಲಿ ನಿಮ್ಮ ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿ ಇಂತಹ ಭಾಲಿಶ ಹೇಳಿಕೆ ಕೊಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಮುಂದಿನ ದಿನಗಳಲ್ಲಿ ಜನ ತೀರ್ಮಾನಿಸುತ್ತಾರೆ.
ನಮ್ಮ ನಾಯಕರಾದ ಜ್ಞಾನೇಂದ್ರಣ್ಣನ ಬಗ್ಗೆ ಮಾತನಾಡುವ ನೈತಿಕತೆ ತಮಗೆ ಇಲ್ಲ. ಯಾಕೆ ಎಂದರೆ ನೀವು ಹೇಳಿದ ಹಾಗೆ ದೇವಂಗಿ ಹಾಗೂ ಕಟ್ಟೆಹಕ್ಲು ಸುತ್ತಮುತ್ತ ಎಷ್ಟು ಕಾಮಗಾರಿ ಆಗಿದೆ. ಹಾಗೆ ಯಾರ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ ಎಂಬುದು ಅಲ್ಲಿನ ಜನತೆಗೆ ತಿಳಿದಿದೆ. ಇನ್ನು ನಮ್ಮ ಮಂಡಲದ ಅಧ್ಯಕ್ಷರಾದ ಹೆದ್ದೂರ್ ನವೀನ್ ಅವರ ಹೆಸರು ಅತ್ಯಂತ ತೀಕ್ಷ್ಣವಾಗಿ ನೀವು ಪದೇ ಪದೇ ಎಳೆದು ತರುವುದು ನೋಡಿದರೆ ನಿಮ್ಮ ಆತಂಕ ಅರ್ಥವಾಗುತ್ತಿದೆ.
ನಿಮ್ಮ ಸಭ್ಯತೆ ಇಲ್ಲದ ಹೇಳಿಕೆಗಳು ನಿಮಗೆ ಶೋಭೆ ತರುವಂತದ್ದು ಅಲ್ಲ. ಹಾಗೆ ತಾವು ನನ್ನ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡುವ ಮೊದಲು ಎಲ್ಲಿ ಏನಾಗಿದೆ ಎಂದು ಪೂರ್ಣ ತಿಳಿದುಕೊಂಡು ಮಾತಾಡುವುದು ಉತ್ತಮ. ನನ್ನ ಶ್ರೀಮತಿಯವರು ಸತತವಾಗಿ 9 ವರ್ಷದಿಂದ ಒಕ್ಕಲಿಗ ಸಂಘದ ಸಹ್ಯಾದ್ರಿ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ಈಗ ಕೆಲಸದಿಂದ ವಜಾ ಮಾಡಿದ್ದರ ಬಗ್ಗೆ ನಾನು ಕ್ಷೇತ್ರದ ಶಾಸಕರಾದ ಜ್ಞಾನೇದ್ರರವರು ಅನ್ಯಾಯವನ್ನು ಪ್ರಶ್ನೆ ಮಾಡಬಾರದಾ? ಈ ವಿಚಾರವಾಗಿ ಯಾರ್ಯಾರು ಎಲ್ಲಿ ರಾಜಕೀಯ ಮಾಡಿದ್ದಾರೆ ಎಂಬುವುದು ಗೊತ್ತಿರುವ ವಿಷಯ ಎಂದಿದ್ದಾರೆ.