ಯುವ ಕಾಂಗ್ರೆಸ್
ಅಧ್ಯಕ್ಷ ವಿರುದ್ಧ ದೂರು
ಕಾನೂನು ಕ್ರಮಕ್ಕೆ
ತಾಲ್ಲೂಕು ಬಿಜೆಪಿ ಆಗ್ರಹ
ಯುವ ಕಾಂಗ್ರೆಸ್
ಪ್ರಧಾನಮಂತ್ರಿ ಭಾವಚಿತ್ರಕ್ಕೆ ಸ್ಟಿಕ್ಕರ್ ಅಂಟಿಸುವ ಮೂಲಕ ಅವಮಾನಿಸಿದ್ದಾರೆ. ದೇಶದ ಅತ್ಯುನ್ನತ
ಸಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿಗಳಿಗೆ ಅವಮಾನ ಮಾಡಿರುವ ಇವರುಗಳ ವಿರುದ್ಧ ಸ್ವಯಂ ಪ್ರೇರಿತವಾಗಿ
ದೂರು ದಾಖಲಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಬಿಜೆಪಿ ಗುರುವಾರ ತೀರ್ಥಹಳ್ಳಿಯ ಪೊಲೀಸ್ ಠಾಣೆಗೆ
ದೂರು ನೀಡಿದೆ.
ತೀರ್ಥಹಳ್ಳಿ ಯುವ
ಕಾಂಗ್ರೆಸ್ ಅಧ್ಯಕ್ಷ ಪೂರ್ಣೇಶ್ ಕೆಳಕೆರೆ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೇಯಸ್ ರಾವ್, ಉಪಾಧ್ಯಕ್ಷ
ಪ್ರವೀಣ್ ಮೇಲಿನ ಕುರುವಳ್ಳಿ, ಸುಭಾಷ್ ಕುಲಾಲ್, ನದೀಮ್ ಬೆಟ್ಟಮಕ್ಕಿ, ಸನಾವುಲ್ಲಾ, ವಿಕ್ರಮ್ ಕೆಳಕೆರೆ
ಹಾಗೂ ಇನ್ನಿತರ ಮೇಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು. ಕೂಡಲೇ ಅವರನ್ನು ಬಂಧಿಸಿ,
ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಸ್ವಯಂಪ್ರೇರಿತವಾಗಿ ಕೈಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.
