ಕಾರು ಹರಿದು 7 ವರ್ಷದ ಬಾಲಕ ಸಾವು
ಪತ್ರಕರ್ತ ಪ್ರಗತ್ ಕೆ.ಆರ್. ಮತ್ತು ರಂಜನ ದಂಪತಿಗಳ ಪುತ್ರ ಋಷ್ಯ ಪಿ (7) ಇಂದು ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಸಲು ವಿಷಾದವಾಗುತ್ತಿದೆ.
ಬಾಲಕ ಋಷ್ಯ ಗುಂಡುಗದ್ದೆಯ ಮನೆಯ ಸಮೀಪ ರಸ್ತೆ ದಾಟುವಾಗ ಕ್ಯಾಂಟರ್ ವಾಹನ ಅಡ್ಡಲಾಗಿದ್ದುದ್ದರಿಂದ ಆ ಹೊತ್ತಿಗೆ ಸರಿಯಾಗಿ ಬಂದ ಕಾರನ್ನು ಗಮನಿಸದೆ ಅದರಡಿ ಸಿಲುಕಿ ತೀವ್ರವಾಗಿ ಗಾಯಗೊಂಡು ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದ ಎನ್ನಲಾಗಿದೆ. ಋಷ್ಯ ದಂಪತಿಗಳ ಒಬ್ಬನೆ ಮುದ್ದಿನ ಮಗನಾಗಿದ್ದು ಕೊಣಂದೂರಿನ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ.