ಶ್ರೀಮಂತ ಧರ್ಮೇಶ್
ಪರ ಕಿಮ್ಮನೆ ರತ್ನಾಕರ್ ಇದ್ದಾರೆ
ತೀರ್ಥಹಳ್ಳಿಯಲ್ಲಿ
ದುಡ್ಡಿದ್ದರೆ ಏನು ಬೇಕಾದರು ಮಾಡಬಹುದು
ಪರಿಸರವಾದಿಗಳು ಎಲ್ಲಿ
ಮರೆಯಾಗಿದ್ದಾರೆ – ಆರಗ ಜ್ಞಾನೇಂದ್ರ ಆಕ್ರೋಶ
ಐತಿಹಾಸಿಕ ಮಹತ್ವವುಳ್ಳ ತೀರ್ಥಹಳ್ಳಿ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮನೆ ಬ್ಯಾಣದ ವಿವಾದ ಈಗ ಶಾಸಕ ಆರಗ ಜ್ಞಾನೇಂದ್ರರ ನೇರ ಪಾಲ್ಗೊಳ್ಳುವಿಕೆಯೊಂದಿಗೆ ನಿರ್ಣಾಯಕ ಹಂತ ತಲುಪಿದೆ. ಅರಮನೆ ಬ್ಯಾಣವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಗ್ರಾಮಸ್ಥರಿಗೆ ಆರಗ ಜ್ಞಾನೇಂದ್ರ ಮುಕ್ತ ಬೆಂಬಲ ನೀಡಿದ್ದು ಈ ಪ್ರಕರಣದಲ್ಲಿ ಆಗಿರುವ ಅಕ್ರಮಗಳನ್ನು ಬಯಲಿಗೆಳೆಯದೆ ವಿರಮಿಸುವುದಿಲ್ಲ ಎಂದು ಸ್ಥಳದಲ್ಲಿಯೇ ಘೋಷಿಸಿದ್ದಾರೆ.
ಏನಿದು ಅರಮನೆ ಬ್ಯಾಣ
ಮೂಲತಃ ಕವಲೇದುರ್ಗಾ
ಸಂಸ್ಥಾನದ ಯುದ್ಧದ ಕುದುರೆಗಳನ್ನು ಮೇಯಿಸಲು ಬಿಡುತ್ತಿದ್ದ ಕಾರಣ ಈ ಪ್ರದೇಶವನ್ನು ಅರಮನೆ ಬ್ಯಾಣ
ಎಂದು ಕರೆಯಲಾಗುತ್ತಿತ್ತು ಎನ್ನುತ್ತಾರೆ ಇಲ್ಲಿನ ಹಿರಿಯರು. ಇದು ಸಾಲೂರು ಗ್ರಾಮ ಪಂಚಾಯಿತಿಯ ಸರ್ವೆ
ನಂಬರ್ 116, 118ರಲ್ಲಿದ್ದು ಕೊಂಡ್ಲೂರು ಸಮೀಪದಲ್ಲಿದೆ.
ವಿವಾದದ ಕಾರಣ
ಮೂಲ ದಾಖಲೆ ಹೊಂದಿರದ
ಅರಮನೆ ಬ್ಯಾಣ ಪ್ರದೇಶ ಹೇಗೋ ಯಡೂರಿನ ವಿ.ಟಿ. ಜೋಯ್ಸ್ ಹೆಸರಿಗೆ ದಾಖಲೆಯಾಗುತ್ತದೆ. ಕರ್ನಾಟಕ ಭೂ
ಸುಧಾರಣೆ ಕಾಯ್ದೆ ಜಾರಿಯಾಗುತ್ತಿದ್ದಂತೆ ಹೆಚ್ಚುವರಿ ಜಮೀನು ಹೊಂದಿದ್ದ ಕಾರಣ ಸರ್ಕಾರದ ಸ್ವತ್ತಾಗುತ್ತದೆ.
ಅದಾದ ನಂತರ 1982-83ರಲ್ಲಿ ಎಸ್‌ಸಿ, ಎಸ್ಟಿ ಸಮುದಾಯ ಸೇರಿಕೊಂಡು 27 ಮಂದಿ ಭೂ ರಹಿತರಿಗೆ ಸುಮಾರು
79 ಎಕರೆ ಹಂಚಿಕೆಯಾಗುತ್ತದೆ. ಹಂಚಿಕೆಯಡಿ ಭೂ ಹಕ್ಕು ಪಡೆದವರು 2011ರ ತನಕವೂ ಕೃಷಿ ಚಟುವಟಿಕೆ ನಡೆಸಿರಲಿಲ್ಲ.
ಏಪ್ರಿಲ್ 2011 ರಲ್ಲಿ ಅಂದಿನ ಶಿವಮೊಗ್ಗದ ಉಪ ವಿಭಾಗಾಧಿಕಾರಿ ವೈಶಾಲಿ ವಾಸ್ತವ ಸ್ಥಿತಿಯನ್ನು ವರದಿ
ಮಾಡಿದ್ದರು. ಆದರೆ ಆಗಿನ ತಹಶೀಲ್ದಾರ್ ಅಲ್ಲಿ ಕೃಷಿ ಚಟುವಟಿಕೆ ನಡೆದಿದೆ ಎಂದು ತದ್ವಿರುದ್ಧ ವರದಿ
ನೀಡಿದ್ದರು. ಆದರೆ ಭೂ ಹಕ್ಕು ಪಡೆದವರು ಕೃಷಿ ಚಟುವಟಿಕೆ ನಡೆಸಲು ಅಡ್ಡಿಪಡಿಸಲಾಗುತ್ತಿದೆ ಎಂದು ಅಗಸ್ಟ್
2011ರಲ್ಲಿ ಶಿವಮೊಗ್ಗ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಅಂದರೆ 29 ವರ್ಷಗಳ
ವರೆಗೆ ಕೃಷಿ ಚಟುವಟಿಕೆ ನಡೆಸದ ಕಾರಣ ಕಾನೂನು ಪ್ರಕಾರ ಹಕ್ಕು ಮೊಟಕಾಗಿತ್ತು. ಆದರೆ ಈಗ ಸದರಿ ಜಾಗವನ್ನು
ಧರ್ಮೇಶ್ ಮತ್ತು ವಾಗ್ದೇವಿ ಪುಟ್ಟಸ್ವಾಮಿ ಕೊಂಡಿದ್ದು ಈ ವಿಚಾರದಲ್ಲಿ ಸಂಪೂರ್ಣ ಕಾನೂನು ಉಲ್ಲಂಘನೆಯಾಗಿದೆ.
1900ನೇ ಇಸವಿಯಲ್ಲಿ ನಕಾಶೆ ಕಂಡ ಕಾಲು ಹಾದಿಗಳನ್ನು ಮುಚ್ಚಲಾಗಿದೆ. ಹಾಗೂ ದಬ್ಬಾಳಿಕೆಯ ಮೂಲಕ ಇಡೀ
ಪ್ರದೇಶದಲ್ಲಿ ಇದ್ದ ನೈಸರ್ಗಿಕ ಅರಣ್ಯವನ್ನು ಬೆಂಕಿ ಹಾಕಿ ಸುಟ್ಟು ನಾಶಪಡಿಸಲಾಗಿದೆ. ನೇರವಾಗಿ ಭೂ
ಹಕ್ಕು ಪಡೆದು ಕೃಷಿ ಮಾಡದೆ ಷರತ್ತು ಉಲ್ಲಂಘಿಸಿರುವುದರಿಂದ ಈ ಭೂಮಿ ಖರೀದಿ ಮಾಡಿರುವುದು ಅಕ್ರಮ ಅದನ್ನು
ವಾಪಾಸ್ಸು ಪಡೆಯಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಕಳೆದ ಒಂದು ವರ್ಷದಿಂದ ಪಕ್ಷಾತೀತವಾಗಿ ಗ್ರಾಮಸ್ಥರು ಹೋರಾಟವನ್ನು ಕೈಗೊಂಡಿದ್ದು ಕೆಲವು ತಿಂಗಳ ಹಿಂದೆ ಆರಗ ಜ್ಞಾನೇಂದ್ರ ತಾಲ್ಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಇಲ್ಲಿನ ಅಕ್ರಮಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಧರ್ಮೇಶ್ ಬಳಿಕ ಇಡೀ ಬ್ಯಾಣಕ್ಕೆ ಗ್ರಾಮಸ್ಥರು ದಂಗು ಬಡಿಯುವಂತೆ ಭರ್ಜರಿ ಬೇಲಿ ಸುತ್ತಿದ್ದರು.
ನೇರ ಪ್ರತಿಭಟನೆಯ
ಅಖಾಡಕ್ಕಿಳಿದ ಆರಗ ಜ್ಞಾನೇಂದ್ರ
ತೀರ್ಥಹಳ್ಳಿಯಲ್ಲಿ
ಈಗ ದುಡ್ಡಿದ್ದವ್ರು ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಅರಮನೆ ಬ್ಯಾಣ ಉದಾಹರಣೆ. ಇಲ್ಲಿ ಎಲ್ಲವೂ
ನಕಲಿ. ಯಾರದೋ ಹೆಸರಿನಲ್ಲಿ ಇದ್ದ ಅಸ್ತಿ ರಾಜಾರೋಷವಾಗಿ ಇನ್ನ್ಯಾರದೋ ಪಾಲಾಗುತ್ತದೆ, ದಟ್ಟ ಅರಣ್ಯ
ವನ್ನು ಬೆಂಕಿ ಹಾಕಿ ಸುಡಲಾಗುತ್ತದೆ. ಕಿಮ್ಮನೆ ರತ್ನಾಕರ್ ಯಾವತ್ತೂ ದುಡ್ಡಿದವರಿಗೆ ಬೆಂಬಲ ಮಾಡಿದ್ದು.
ಇಲ್ಲೂ ಅವರು ಸಿರಿಬೈಲು ಧರ್ಮೇಶ್ ಪರ ಇದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಗುಡುಗಿದ್ದಾರೆ.
ಅರಮನೆ ಬ್ಯಾಣದ ಪ್ರತಿ
ಹಂತದ ಅಕ್ರಮಗಳನ್ನು ವಿವರವಾಗಿ ಮಾತನಾಡಿರುವ ಅವರು, ವಿ.ಟಿ.ಜೋಯಿಸರ ಹೆಸರಿಂದ ಧರ್ಮೇಶ್ ತಾಯಿಗೆ ಈ
ಅಸ್ತಿ ಹೇಗೆ ಪರಭಾರೆ ಆಯಿತು ಎನ್ನುವುದಕ್ಕೆ ಉತ್ತರ ಇಲ್ಲ. ಈ ರೀತಿ ಅಕ್ರಮ ಎಲ್ಲೂ ನಡೆದಿಲ್ಲ. ಇಲ್ಲಿ
ನೂರಾರು ವರ್ಷದಿಂದ ಇದ್ದ ನಕ್ಷೆ ಕಂಡ ಕಾಲು ಹಾದಿಗಳ್ಳನ್ನು ಬೇಲಿ ಹಾಕಿ ಅಕ್ರಮಿಸಲಾಗಿದೆ. ಧರ್ಮೇಶ್
ಹೆಂಡತಿ ಸರ್ವೆ ಆಫೀಸ್ ಕೆಲಸ. ಇಲ್ಲಿ ಜಾಂಡ ಹೊಡೆದು ಇಪ್ಪತ್ತು ವರ್ಷ ಆಗಿದೆ. ಧರ್ಮೇಶ್ ಸ್ವಂತ ಊರಲ್ಲಿ
ದಟ್ಟ ಅರಣ್ಯ ಕಡಿದು ರಬ್ಬರ್ ಪ್ಲಾಂಟೇಷನ್ ಮಾಡಲಾಗಿದೆ. ಪರಿಸರ ವಾದಿಗಳು ಎಲ್ಲಿದ್ದಾರೆ. ಅರಣ್ಯ ಇಲಾಖೆ
ಎಲ್ಲಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟದಲ್ಲಿ ಚಂದವಳ್ಳಿ
ಸೋಮಶೇಖರ್, ಕುಕ್ಕೆ ಪ್ರಶಾಂತ್, ಹೋರಾಟ ಸಮಿತಿಯ ಶ್ರೀಧರ್ ಟೆಂಕಬೈಲು ಇದ್ದರು.

