ಮುಲಾಜಿಲ್ಲದ ಅಭಿಪ್ರಾಯದೊಂದಿಗೆ
ಗಮನ ಸೆಳೆದ ಚಂದುವಳ್ಳಿ ಸೋಮಶೇಖರ್
ದುಡ್ಡಿದ್ದರೆ ಏನೂ
ಬೇಕಾದರೂ ಮಾಡಬಹುದೇ - ಚಂದವಳ್ಳಿ ಸೋಮಶೇಖರ್
ಧರ್ಮೇಶ್ ನಾನು ಆತ್ಮೀಯರೇ,
ಆದರೆ ಅರಮನೆ ಬ್ಯಾಣದ ವಿಚಾರದಲ್ಲಿ ಆಗಿರುವ ಅಕ್ರಮ ಮತ್ತು ಪರಿಸರ ನಾಶವನ್ನು ನಾನು ತೀವ್ರವಾಗಿ ವಿರೋದಿಸುತ್ತೇನೆ.
ಈಗಾಗಲೇ ನನಗೆ ಈ ವಿಚಾರದಲ್ಲಿ ಗ್ರಾಮಸ್ಥರ ಪರ ನಿಂತ ಕಾರಣ ಚುನಾವಣೆ ಹೇಗೆ ಎದುರಿಸುತ್ತೀಯ ಎಂಬ ಬೆದರಿಕೆಗಳು
ಬಂದಾಗಿದೆ. ಆದರೆ ಇಲ್ಲಿನ ಪರಿಸರದ ಮೇಲಾದ ದಬ್ಬಾಳಿಕೆಯನ್ನು ಸಹಿಸಿಕೊಂಡರೆ ನಾವೆಲ್ಲ ಜನಪ್ರತಿನಿಧಿಗಳಾಗಲು
ಲಾಯಕ್ಕಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎನ್ನುವ ಮೂಲಕ ಮಾಜಿ ತಾ.ಪಂ. ಸದಸ್ಯ ಚಂದುವಳ್ಳಿ ಸೋಮಶೇಖರ್
ಅರಮನೆ ಬ್ಯಾಣ ಹೋರಾಟ ಸಮಿತಿಗೆ ಸ್ಪಷ್ಟ ಬೆಂಬಲ ನೀಡಿದ್ದಾರೆ.
ಆಕ್ರೋಶದಿಂದ ಮಾತನಾಡಿದ ಸೋಮಶೇಖರ್,
ನೂರಾರು ಸಂಖ್ಯೆಯ ಜಾನುವಾರುಗಳು, ಅಸಂಖ್ಯಾತ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ಒದಗಿಸಿದ್ದ ದಟ್ಟವಾದ
ಮರ ಗಿಡಗಳಿಂದ ಕೂಡಿದ್ದ ಬ್ಯಾಣವನ್ನು ಸರ್ವನಾಶ ಮಾಡಿದ್ದು ಸಹಿಸಲು ಸಾಧ್ಯವಿಲ್ಲ. ಯಾವ ಬೆಲೆ ತೆತ್ತಾದರೂ
ನಾನು ಜನರ ಪರ ನಿಲ್ಲುವೆ. ಅಧಿಕಾರ ಮತ್ತು ದುಡ್ಡಿನ ಬಲದಿಂದ ಇಲ್ಲಿ ದಬ್ಬಾಳಿಕೆ ನಡೆದಿದೆ. ಇಡೀ ಗ್ರಾಮದ
ವಿರೋಧ ಲೆಕ್ಕಿಸದೆ ಅಕ್ರಮವಾಗಿ ಈ ಭೂಮಿ ಧರ್ಮೇಶ್ ಕುಟುಂಬಕ್ಕೆ ಪರಬಾರೆ ಮಾಡಲಾಗಿದೆ. ಇಲ್ಲಿಯ ಜನ
ಈ ಬ್ಯಾಣವನ್ನು ಎಂದೂ ಕೂಡ ಒತ್ತುವರಿ ಮಾಡಿರಲಿಲ್ಲ. ಕೇವಲ ಜಾನುವಾರು ಮೇಯಿಸೋಕೆ ಬಳಸುತ್ತಿದ್ದರು.
ಈಗ ಎಲ್ಲವನ್ನು ನಾಶ ಮಾಡಿ ಬೇಲಿ ಸುತ್ತಲಾಗಿದೆ. ಅಕ್ರಮಕ್ಕೆ ಸಹಕರಿಸದಿದ್ದರೆ ಕೆಳಗಿನ ರೈತರ ಸಾಗುವಳಿ
ಭೂಮಿ ಕೂಡ ತಮ್ಮ ಖಾತೆ ಯೊಳಗೆ ಬರುತ್ತದೆ ಅದನ್ನು ಕೂಡ ವಶಪಡಿಸಿಕೊಳ್ಳಲು ಗೊತ್ತು ಎಂದು ಬೆದರಿಸಲಾಗಿದೆ.
ಬೆದರಿಕೆಗಳಿಗೆ ಅಂಜುವುದಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ.